ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿರುವ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮ್ಯಾಂಚೆಸ್ಟರ್ನಲ್ಲಿ ನಡೆದ 4ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಪ್ರಥಮ ಇನಿಂಗ್ಸ್ನಲ್ಲಿ 358 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡ ನಾಯಕ ಬೆನ್ ಸ್ಟೋಕ್ಸ್ ಹಾಗೂ 'ಟೆಸ್ಟ್ ಪರಿಣತ' ಜೋ ರೂಟ್ ಗಳಿಸಿದ ಶಕಗಳ ಬಲದಿಂದ 669 ರನ್ ಗಳಿಸಿತ್ತು. 311 ರನ್ಗಳ ಹಿನ್ನಡೆ ಹಾಗೂ ಸೋಲಿನ ಭೀತಿಯಲ್ಲೇ ಎರಡನೇ ಇನಿಂಗ್ಸ್ ಆಡಿದ ಭಾರತ 4 ವಿಕೆಟ್ಗೆ 425 ರನ್ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಭಾರತ ಪರ ನಾಯಕ ಗಿಲ್ (103 ರನ್), ಆಲ್ರೌಂಡರ್ಗಳಾದ ರವೀಂದ್ರ ಜಡೇಜ (ಅಜೇಯ 107 ರನ್), ವಾಷಿಂಗ್ಟನ್ ಸುಂದರ್ (ಅಜೇಯ 101 ರನ್)ಶತಕ ಸಿಡಿಸಿದರೆ, ಅನುಭವಿ ಕೆ.ಎಲ್. ರಾಹುಲ್ (90 ರನ್) ಅರ್ಧಶತಕ ಸಿಡಿಸುವ ಮೂಲಕ ಸೋಲು ತಪ್ಪಿಸಿಕೊಳ್ಳಲು ನೆರವಾದರು.

ರೋಹಿತ್ ಶರ್ಮಾ ವಿದಾಯದ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡದ ಹೊಣೆ ಹೊತ್ತುಕೊಂಡಿರುವ ಗಿಲ್, ಮೊದಲ ಪ್ರವಾಸದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಈಗಾಗಲೇ 4 ಶತಕಗಳನ್ನು ಸಿಡಿಸಿರುವ ಅವರು, 722 ರನ್ ಕಲೆಹಾಕಿದ್ದಾರೆ.

ನಾಯಕನಾಗಿ ಹೆಚ್ಚು ಶತಕ
ನಾಯಕತ್ವದ ವಹಿಸಿಕೊಂಡ ಮೊದಲ ಸರಣಿಯಲ್ಲೇ 4 ಶತಕ ಗಳಿಸಿದ ಮೊದಲಿಗ ಎನಿಸಿಕೊಂಡಿದ್ದಾರೆ ಶುಭಮನ್ ಗಿಲ್.

ಇದಕ್ಕೂ ಮೊದಲು, ಆಸ್ಟ್ರೇಲಿಯಾದ ವಾರ್ವಿಕ್ ಆರ್ಮ್ಸ್ಟ್ರಾಂಗ್, ಡಾನ್ ಬ್ರಾಡ್ಮನ್, ಗ್ರೇಗ್ ಚಾಪೆಲ್, ಸ್ಟೀವ್ ಸ್ಮಿತ್ ಮತ್ತು ಭಾರತದ ವಿರಾಟ್ ಕೊಹ್ಲಿ ಅವರು ತಲಾ ಮೂರು ಶತಕಗಳನ್ನು ಬಾರಿಸಿದ್ದೇ ದಾಖಲೆಯಾಗಿತ್ತು.

ಇದಷ್ಟೇ ಅಲ್ಲ. ನಾಯಕನಾಗಿ ಯಾವುದೇ ಟೆಸ್ಟ್ ಸರಣಿಯಲ್ಲಿ ಅತಿಹೆಚ್ಚು ಶತಕ ಗಳಿಸಿದವರ ಸಾಲಿನಲ್ಲಿ ದಿಗ್ಗಜರೊಂದಿಗೆ ಸ್ಥಾನ ಹಂಚಿಕೊಂಡರು. ಈ ಹಿಂದೆ ಡಾನ್ ಬ್ರಾಡ್ಮನ್ ಅವರು ಭಾರತದ ವಿರುದ್ಧ (1947–48) ಹಾಗೂ ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧದ (1978–79) ಸರಣಿಯಲ್ಲಿ ಗಿಲ್ ಅವರಷ್ಟೇ (4) ಶತಕ ಗಳಿಸಿದ್ದರು.
.ಆಂಗ್ಲರಿಗೆ ಭಾರತದ ರಿಯಲ್ 'ಟೆಸ್ಟ್': 4ನೇ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳಿವು...ವಾಷಿಂಗ್ಟನ್, ಜಡೇಜ ವೀರೋಚಿತ ಆಟ: ಸೋಲಿನಿಂದ ಪಾರಾಗಿ ಡ್ರಾ ಸಾಧಿಸಿದ ಭಾರತ ತಂಡ.
ಜೊತೆಗೆ, ಟೀಂ ಇಂಡಿಯಾ ಪರ ಒಂದೇ ಸರಣಿಯಲ್ಲಿ ಹೆಚ್ಚು ಶತಕ ಗಳಿಸಿದ ಬ್ಯಾಟರ್ಗಳ ಸಾಲಿನಲ್ಲಿ ಗವಾಸ್ಕರ್ ಮತ್ತು ಕೊಹ್ಲಿ ಅವರ ದಾಖಲೆಯನ್ನೂ ಗಿಲ್ ಸರಿಗಟ್ಟಿದರು. ಗವಾಸ್ಕರ್ ಅವರು ವೆಸ್ಟ್ ಇಂಡೀಸ್ ವಿರುದ್ಧ 1971 ಹಾಗೂ 1978–79ರಲ್ಲಿ, ವಿರಾಟ್ ಕೊಹ್ಲಿ 2014–15 ಆಸ್ಟ್ರೇಲಿಯಾ ವಿರುದ್ಧ ತಲಾ 4 ಶತಕ ಬಾರಿಸಿದ್ದರು.

ಬ್ರಾಡ್ಮನ್ ಹಿಂದಿಕ್ಕಲು ಬೇಕು 82 ರನ್
ನಾಯಕತ್ವ ವಹಿಸಿಕೊಂಡ ಮೊದಲ ಟೂರ್ನಿಯಲ್ಲೇ ಅತ್ಯಧಿಕ ರನ್ ಗಳಿಸಿದ ಕ್ರಿಕೆಟಿಗ ಎನಿಸಿಕೊಳ್ಳಲು ಶುಭಮನ್ ಗಿಲ್ಗೆ ಇನ್ನು 88 ರನ್ ಬೇಕಾಗಿದೆ. ಪ್ರಸ್ತುತ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳ 8 ಇನಿಂಗ್ಸ್ಗಳಿಂದ 722 ರನ್ ಗಳಿಸಿದ್ದಾರೆ.

ಬ್ರಾಡ್ಮನ್ ಅವರು ಇಂಗ್ಲೆಂಡ್ ವಿರುದ್ಧ 1936–37ರಲ್ಲಿ ನಡೆದ ಟೂರ್ನಿಯಲ್ಲಿ 810 ರನ್ ಗಳಿಸಿದ್ದು ಈವರೆಗೆ ದಾಖಲೆಯಾಗಿದೆ.

ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವುದರಿಂದ, ಬ್ರಾಡ್ಮನ್ ದಾಖಲೆ ಮುರಿಯುವ ಸುವರ್ಣಾವಕಾಶ ಗಿಲ್ಗೆ ಇದೆ.

ಗವಾಸ್ಕರ್ ದಾಖಲೆ ಮುರಿಯುವ ತವಕ
ಗವಾಸ್ಕರ್ ಅವರು 1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಸರಣಿಯಲ್ಲಿ 774 ರನ್ ಗಳಿಸಿದ್ದರು. ಅದಾದ ನಂತರ 1978–79ರಲ್ಲಿ 732 ರನ್ ಕಲೆಹಾಕಿದ್ದರು. ಇವು ಟೀಂ ಇಂಡಿಯಾದ ಯಾವುದೇ ಬ್ಯಾಟರ್ ಸರಣಿಯೊಂದರಲ್ಲಿ ಗಳಿಸಿದ ಅತ್ಯಧಿಕ ಮೊತ್ತವಾಗಿವೆ. ಈ ದಾಖಲೆಗಳ ಸನಿಹಕ್ಕೆ ಇದೀಗ ಗಿಲ್ ಬಂದು ನಿಂತಿದ್ದಾರೆ.

ಭಾರತ ತಂಡದ ಪರ ಈವರೆಗೆ 36 ಟೆಸ್ಟ್ ಪಂದ್ಯಗಳ 67 ಇನಿಂಗ್ಸ್ಗಳಲ್ಲಿ ಆಡಿರುವ ಗಿಲ್ 2,615 ರನ್ ಗಳಿಸಿದ್ದಾರೆ. ಅವರ ಬ್ಯಾಟ್ನಿಂದ ಈವರೆಗೆ ಒಟ್ಟು 9 ಶತಕಗಳು ಬಂದಿವೆ. ಈ ಟೂರ್ನಿಯ 4 ಪಂದ್ಯಗಳ 8 ಇನಿಂಗ್ಸ್ಗಳಲ್ಲಿ ಆಡುವ ಮುನ್ನ 1,929 ರನ್ ಹಾಗೂ 5 ಶತಕಗಳಷ್ಟೇ ಅವರ ಖಾತೆಯಲ್ಲಿದ್ದವು.
.ENG vs IND Test | 100 ರನ್, 5 ವಿಕೆಟ್: ನಾಯಕನಾಗಿ ಸ್ಟೋಕ್ಸ್ ವಿಶೇಷ ದಾಖಲೆ.ಕೊಹ್ಲಿ, ರೋಹಿತ್ ನಿವೃತ್ತಿ ಆಯಿತು, ಮುಂದೆ ಇವರೇ.. ಅಚ್ಚರಿಯ ಹೇಳಿಕೆ ನೀಡಿದ ಕೈಫ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.