ಮೈಸೂರು: ‘ದೇಶಕ್ಕೆ ವಾರ್ಷಿಕ 800 ಟನ್ ಚಿನ್ನಕ್ಕೆ ಬೇಡಿಕೆಯಿದ್ದು, ಅದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ದೇಶದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಶೇ 97ರಷ್ಟು ಪಾಲು ಕರ್ನಾಟಕದ ಗಣಿಗಳದ್ದಾಗಿದೆ’ ಎಂದು ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯ (ಜಿಎಸ್ಐ) ನಿವೃತ್ತ ಭೂ ವಿಜ್ಞಾನಿ ಎಂ.ಬಿ.ಬೀರಯ್ಯ ಹೇಳಿದರು.

ಮಾನಸಗಂಗೋತ್ರಿಯ ಭೂವಿಜ್ಞಾನ ಅಧ್ಯಯನ ಕೇಂದ್ರದಲ್ಲಿ ಬುಧವಾರ ನಡೆದ ‘ಕರ್ನಾಟಕದಲ್ಲಿ ಚಿನ್ನದ ನಿಕ್ಷೇಪಗಳು– ಭೂತ, ವರ್ತಮಾನ ಹಾಗೂ ಭವಿಷ್ಯದ ಸವಾಲುಗಳು’ ಕುರಿತ ಉಪನ್ಯಾಸದಲ್ಲಿ, ‘ರಾಜ್ಯದ ರಾಯಚೂರಿನ ಹಟ್ಟಿ ಹಾಗೂ ಹೀರಾ ಬುದ್ದಿನ್ನಿ ಗಣಿಗಳಲ್ಲಿ 4 ಟನ್ ಉತ್ಪಾದನೆಯಾಗುತ್ತಿದೆ’ ಎಂದರು.

‘ರಾಜ್ಯದ ಕೋಲಾರ, ಹಟ್ಟಿ– ಮಸ್ಕಿ, ಗದಗ– ಚಿತ್ರದುರ್ಗ ಹಾಗೂ ಶಿವಮೊಗ್ಗ ಶಿಲಾ ಪದರಗಳಲ್ಲಿ ಚಿನ್ನವಿದ್ದು, ಇಲ್ಲಿಯೇ ಕಳೆದ 60 ವರ್ಷಗಳಿಂದ ಅದಿರು ಅನ್ವೇಷಣೆ ನಿರಂತರವಾಗಿ ನಡೆದಿದೆ’ ಎಂದು ಮಾಹಿತಿ ನೀಡಿದರು.

‘ಧಾರವಾಡ ಶಿಲಾ ರಚನೆಯ ಸಮೂಹದ ಹಸಿರು ಶಿಲಾ ಪದರದ ಭಾಗಗಳಲ್ಲಿ ಚಿನ್ನದ ಅದಿರು ನಿಕ್ಷೇಪಗಳಿದ್ದು, ಧಾರವಾಡ ಶಿಲಾ ಸಮೂಹದ ಪೂರ್ವ ಭಾಗದ ಕೋಲಾರ, ಚಿತ್ರದುರ್ಗ, ಹಟ್ಟಿ ಭಾಗಗಳಲ್ಲಿ ಅದಿರು ಹೆಚ್ಚು ಸಿಗುತ್ತದೆ. ಇಲ್ಲಿ ದೊರೆಯುವ ಚಿನ್ನವು ದೇಶದ ಉತ್ಪಾದನೆಯ ಶೇ 90ರಷ್ಟಿದೆ. ಕ್ಪೋಸ್ಪೇಟ್, ಸರಗೂರು ಶಿಲಾಭಾಗವು ರೂಪಾಂತರ ಶಿಲೆಯಾಗಿದ್ದು, ಇಲ್ಲಿ ಗ್ರಾನೈಟ್ ದೊರೆಯುತ್ತವೆ’ ಎಂದರು ವಿವರಿಸಿದರು.

ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ವಿಭಾಗದ ಮುಖ್ಯಸ್ಥ ಪ್ರೊ.ಡಿ.ನಾಗರಾಜು, ಪ್ರೊ.ಬಿ.ವಿ.ಸುರೇಶ್ ಕುಮಾರ್, ಪ್ರೊ.ಕೆ.ನಮ್ರತಾ, ಪ್ರೊ.ಎನ್.ಪ್ರದೀಪ್ ರಾಜು ಪಾಲ್ಗೊಂಡಿದ್ದರು.

‘ಪ್ರಾಚೀನ ಕಾಲದಿಂದಲೂ ಚಾಲ್ತಿ’

‘5 ಸಾವಿರ ವರ್ಷದಿಂದಲೂ ಚಿನ್ನದ ಗಣಿಗಾರಿಕೆಯು ನಡೆದಿದ್ದು ಈಗ ದೇಶದಲ್ಲಿರುವ ಬಹುತೇಕ ಗಣಿಗಳು ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿದ್ದವು. ಚಿನ್ನವು ಮೊದಲಿನಿಂದಲೂ ಆಮದಾಗುತ್ತಿತ್ತು’ ಎಂದು ಬೀರಯ್ಯ ಹೇಳಿದರು.

‘ಚೀನಾ ವಾರ್ಷಿಕ 355 ಟನ್ ಚಿನ್ನ ಉತ್ಪಾದಿಸಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ (355 ಟನ್) ಅಮೆರಿಕ (237 ಟನ್) ರಷ್ಯಾ (200 ಟನ್) ದಕ್ಷಿಣ ಆಫ್ರಿಕಾ (190 ಟನ್) ಪೆರು (150 ಟನ್) ಕೆನಡಾ (110 ಟನ್) ಹಾಗೂ ಇಂಡೋನೇಷ್ಯಾ (100 ಟನ್) ಇವೆ. ವಿಶ್ವದಲ್ಲಿ ಈ 8 ದೇಶಗಳ ಉತ್ಪಾದನೆ ಶೇ 68ರಷ್ಟಿದ್ದರೆ ಉಳಿದೆಲ್ಲ ದೇಶಗಳ ಉತ್ಪಾದನೆ ಶೇ 32ರಷ್ಟಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.