ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಶಸ್ವಿ ವೃತ್ತಿಜೀವನಕ್ಕೆ ಸಾಮರ್ಥ್ಯ ಅರಿಯಿರಿ: ಸುಕುಮಾರ್ ರಂಗಾಚಾರಿ

Published 19 ಏಪ್ರಿಲ್ 2024, 7:37 IST
Last Updated 19 ಏಪ್ರಿಲ್ 2024, 7:37 IST
ಅಕ್ಷರ ಗಾತ್ರ

ಮೈಸೂರು: ‘ಯಶಸ್ವಿ ವೃತ್ತಿಜೀವನಕ್ಕೆ ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳುವುದು ಅತ್ಯಗತ್ಯ’ ಎಂದು ಬೆಂಗಳೂರಿನ ಐಐಬಿಎಂ, ಎನ್‌ಎಸ್‌ಆರ್‌ಸಿಇಎಲ್‌ ಸಂಸ್ಥೆ ಮಾರ್ಗದರ್ಶಕ ಸುಕುಮಾರ್ ರಂಗಾಚಾರಿ ಹೇಳಿದರು.

ಇಲ್ಲಿನ ಕ್ರೈಸ್ಟ್ ಕಾಲೇಜಿನಲ್ಲಿ ಪ್ಲೇಸ್‌ಮೆಂಟ್ ಸೆಲ್‌ನಿಂದ ಎರಡು ದಿನಗಳ ಕಾರ್ಯಕ್ರಮ ‘ಕನೆಕ್ಟ್ 2ಕೆ24 ಅನ್ನು ಉದ್ಘಾಟಿಸಿದ ಅವರು, ‘ಉದ್ಯಮ ನಿರ್ವಹಣೆಯಲ್ಲಿ ಕೌಶಲಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ವೃತ್ತಿಯ ವಿವಿಧ ಹಂತಗಳನ್ನು ತಲುಪಲು ಹೊಸ ಹೊಸ ವಿಷಯಗಳಿಗೆ ನಮ್ಮನ್ನು ಮುಕ್ತವಾಗಿರಿಸಿಕೊಳ್ಳುವುದು ಅಗತ್ಯ’ ಎಂದರು.

ನಕ್ಷಾ ಬಿಲ್ಡರ್ಸ್‌ನ ಸ್ಥಾಪಕ ಮತ್ತು ಸಿಇಒ ಪಿ.ವಿನಯ್ ಶಂಕರ್ ಅವರು, ಶೂನ್ಯ ಬಂಡವಾಳದೊಂದಿಗೆ ಸ್ಟಾರ್ಟಪ್ ಅನ್ನು ಹೇಗೆ ಯೋಜಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಹಂಚಿಕೊಂಡರು. 

ವಿವಿಧ ಉದ್ಯಮ ಕ್ಷೇತ್ರದ ಪ್ರಮುಖರಾದ ಪವನ್ ಸುರೇಶ್, ಪವನ್ ಕುಮಾರ್, ಚೈತ್ರಾ ನಾರಾಯಣ್ ಮಾಹಿತಿಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ಸಂಯೋಜಕಿ ವಿ.ಪ್ರಿಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT