ಫಲಾನುಭವಿಗಳು ಈ ಯೋಜನೆಯಲ್ಲಿ ಬದು, ಕೃಷಿ ಹೊಂಡ, ನೀರು ಸಂಗ್ರಹಕ್ಕೆ ಪಾಲಿಥಿನ್ ಹೊದಿಕೆ, ಕೃಷಿ ಹೊಂಡದ ಸುತ್ತಲು ತಂತಿ ಬೇಲಿ, 10 ಎಚ್.ಪಿ. ಮೋಟಾರ್ ಪಂಪ್ ಪಡೆಯಬಹುದಾಗಿದೆ. ಎಸ್ಸಿ, ಎಸ್ಟಿ ಫಲಾನುಭವಿಗೆ ಶೇ 90ರಷ್ಟು, ಸಾಮಾನ್ಯ ವರ್ಗಕ್ಕೆ ಶೇ 80 ರಷ್ಟು ರಿಯಾಯಿತಿ ಸಿಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.