ಮೈಸೂರು: ಇಲ್ಲಿನ ಕೆಎಸ್ಆರ್ಟಿಸಿ ನಗರ ಸಾರಿಗೆ ಬಸ್ಗಳಲ್ಲಿ ' ಧ್ವನಿ ಸ್ಪಂದನ' ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಚಾಲನೆ ನೀಡಿದರು.

'ಅಂಧತ್ವ ಸಮಸ್ಯೆಯುಳ್ಳವರು ವಿಶೇಷ ಸಾಧನದ ಮೂಲಕ ಯಾರ ನೆರವು ಇಲ್ಲದಂತೆ ಬಸ್ ಏರಲು ಇದರಿಂದ ಸಾಧ್ಯವಾಗಲಿದೆ. ಬೆಂಗಳೂರಿನ 125 ಬಸ್ಗಳಲ್ಲಿ ಈಗಾಗಲೇ ಅಳವಡಿಸಿ ಬಳಸುತ್ತಿದ್ದು, ಇದೀಗ ಮೈಸೂರಿನ 200 ಬಸ್ಗಳಲ್ಲಿ ಚಾಲನೆ ನೀಡಲಾಗಿದೆ. ಮುಂದೆ ಕೆಎಸ್ಆರ್ಟಿಸಿಯ 7 ಸಾವಿರ ಬಸ್ ಗಳಲ್ಲೂ ಹಂತಹಂತವಾಗಿ ಅಳವಡಿಸಲಾಗುವುದು' ಎಂದು ಸಚಿವರು ಹೇಳಿದರು.

'ರಾಜ್ಯದಲ್ಲಿ ಮುಂದೆ ಹೊಸತಾಗಿ ಖರೀದಿಸುವ ಎಲ್ಲ ಕೆಎಸ್ಆರ್ಟಿಸಿ ಬಸ್ಗಳಿಗೆ ನಿರ್ಮಾಣ ಹಂತದಲ್ಲೇ ಈ ಸಾಧನ ಅಳವಡಿಕೆಗೆ ಸೂಚಿಸಲಾಗುವುದು' ಎಂದರು.

ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.