‘ಪ್ರತಿ ವರ್ಷವೂ ಕೊನೆ ದಿನವೇ ಪ್ರಶಸ್ತಿ ಪಡೆದ ಚಿತ್ರಗಳ ಪ್ರದರ್ಶನ ಇರುತ್ತದೆ. ಹಾಗಿದ್ದರೆ ನಮ್ಮನು ಕರೆಯುವುದೇಕೆ. ಕಳೆದ ಬಾರಿಯೂ ಹೀಗೆ ಆಗಿತ್ತು. ಪ್ರಶಸ್ತಿ ಪಡೆದ ಒಂದು ಚಿತ್ರಕ್ಕಿಂತ ನಮ್ಮದೇ ಚಿತ್ರ ಚೆನ್ನಾಗಿದೆ. ತೀರ್ಪು ಸರಿಯಿಲ್ಲ’ ಎಂದು ‘ಮಾರ್ವೆನ್’ ಚಿತ್ರದ ನಿರ್ದೇಶಕ ಸ್ಟ್ಯಾನಿ ಜಾಯ್‌ಸನ್ ಆಕ್ಷೇಪ ವ್ಯಕ್ತಪಡಿಸಿದರು. ಅವರ ಜೊತೆಗಿದ್ದ ಗೆಳೆಯರು ಆಯ್ಕೆಯಾಗದ್ದಕ್ಕೆ ದನಿಗೂಡಿಸಿದರು. ಉಪಸಮಿತಿಯವರು ‘ಕಾರ್ಯಕ್ರಮ ನಡೆಯುತ್ತಿದೆ. ತೊಂದರೆ ಕೊಡಬೇಡಿ’ ಎಂದು ಹೊರಗೆ ಕರೆದೊಯ್ದರು. ತೀರ್ಪುಗಾರ್ತಿ ಚರಿತಾ ಅವರನ್ನು ಪ್ರಶ್ನಿಸಿದರು. ‘ತೀರ್ಪುಗಾರರು ಪ್ರತಿ ವಿಭಾಗಕ್ಕೂ ಅಂಕ ನೀಡಿ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಪಾರದರ್ಶಕವಾಗಿ ನಡೆದಿದೆ’ ಎಂದು ಚರಿತಾ ಮನವರಿಕೆ ಮಾಡಿಕೊಟ್ಟರು.