‘ಲೆಕ್ಕ’ಕ್ಕೆ ಸೇರಿಸುವುದು ತಪ್ಪಿಸಲು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜ ಹುಣಸೂರು ಹಾಗೂ ಪಿರಿಯಾಪಟ್ಟಣದಲ್ಲಿ ನಡೆಸಿದ ಪ್ರಚಾರ ಸಭೆಗಳಲ್ಲಿ ಅಭ್ಯರ್ಥಿ ಲಕ್ಷ್ಮಣ ಪಾಲ್ಗೊಂಡಿರಲಿಲ್ಲ. ‘ಪ್ರಜಾಧ್ವನಿ–2’ ಹೆಸರಿನಲ್ಲಿ ನಡೆಸಲಾಯಿತು. ಆ ಸಮಾವೇಶಗಳಿಗೆ ತಗುಲುವ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸುವುದನ್ನು ತಪ್ಪಿಸಿಕೊಳ್ಳಲೆಂದು ಈ ತಂತ್ರವನ್ನು ಅನುಸರಿಸಲಾಯಿತು ಎಂದು ಹೇಳಲಾಗಿದೆ.