ಮೈಸೂರು: ಜಿಲ್ಲೆಯ ತಿ.ನರಸೀಪುರದ ಪುರಸಭೆಯ ಜೆಇ ಕೆ.ಆರ್.ಚಂದ್ರಶೇಖರ್ ಹಾಗೂ ಸೆಸ್ಕ್ ಪ್ರಭಾರ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಅಲ್ತಾಫ್ ಹುಸೇನ್ ಜಕಾರ್ತಿ ಅವರ ಮನೆ ಹಾಗೂ ಕಚೇರಿ ಸೇರಿ ಏಳು ಕಡೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ಕಾರ್ಯಾಚರಣೆ ನಡೆಸಿ, ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.

ಚಂದ್ರಶೇಖರ್ ಅವರು ಮೈಸೂರಿನ ವಿಜಯನಗರದಲ್ಲಿ ₹82 ಲಕ್ಷ ಮೌಲ್ಯದ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ, ₹55 ಲಕ್ಷ ಮೌಲ್ಯದ ಎರಡು ನಿವೇಶನಗಳು ಪತ್ತೆಯಾಗಿವೆ. ₹2.02 ಕೋಟಿ ಮೌಲ್ಯದ ಚಿನ್ನಾಭರಣ, ₹62 ಲಕ್ಷ ನಗದು, ₹10.70 ಲಕ್ಷ ಮೌಲ್ಯದ ವಾಹನಗಳ ಸಹಿತ ಒಟ್ಟು ₹2.75 ಕೋಟಿ ಚರಾಸ್ತಿ ಪತ್ತೆಯಾಗಿದೆ. ಅವರು ಮೈಸೂರು ಮಹಾನಗರ ಪಾಲಿಕೆಯಿಂದ ನಿಯೋಜನೆ ಮೇರೆಗೆ ತಿ.ನರಸೀಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಜಕಾರ್ತಿ ಅವರು ಮೈಸೂರು ನಗರ ಹಾಗೂ ತುಮಕೂರಿನಲ್ಲಿ ₹1.03 ಕೋಟಿ ಮೌಲ್ಯದ ನಾಲ್ಕು ನಿವೇಶನಗಳ ಮಾಲೀಕರು. ರೈಲ್ವೆ ಬಡಾವಣೆಯಲ್ಲಿ ₹1.31 ಕೋಟಿ ಮೌಲ್ಯದ ಐಷಾರಾಮಿ ಮನೆ ಇದೆ.

ಅವರ ಬಳಿ ₹2.34 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹1.10 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಅದರಲ್ಲಿ, ₹1.45 ಲಕ್ಷ ನಗದು, ₹75.46 ಲಕ್ಷ ಮೌಲ್ಯದ ಚಿನ್ನಾಭರಣ ₹19.55 ಲಕ್ಷ ಮೌಲ್ಯದ ವಾಹನವೂ ಸೇರಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಲೋಕಾಯಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ಲೋಕಾಯಕ್ತ ಎಸ್.ಪಿ. ಉದೇಶ್ ನೇತೃತ್ವದಲ್ಲಿ ಡಿಎಸ್ಪಿ ಶೈಲೇಂದ್ರ, ಇನ್ಸ್ಪೆಕ್ಟರ್ಗಳಾದ ವಿಜಯ್ ಕುಮಾರ್, ಉಮೇಶ್, ಶಾಂತಿನಾಥ್ ವನ್ನೂರ್, ಶಶಿಕುಮಾರ್ ಅವರ ತಂಡ ಕಾರ್ಯಾಚರಣೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.