ಪಿರಿಯಾಪಟ್ಟಣ: ‘ಮಡಿವಾಳ ಮಾಚಿದೇವರ ಆದರ್ಶಗಳನ್ನು ಅಳವಡಿಸಿಕೊಂಡರೆ ಸಾಮಾಜಿಕ ಸಾಮರಸ್ಯ ಸಾಧ್ಯ’ ಎಂದು ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

ಪಟ್ಟಣದ ಅಭಯ್ ಫಂಕ್ಷನ್ ಹಾಲ್ನಲ್ಲಿ ಮಾಚಿದೇವ ಮಡಿವಾಳ ಸಂಘ ಶನಿವಾರ ಏರ್ಪಡಿಸಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮುದಾಯವು ಉನ್ನತ ಶಿಕ್ಷಣ ಹೊಂದಬೇಕು. ಮಡಿವಾಳ ಮಾಚಿದೇವರು ಬಸವಣ್ಣನವರ ವಚನ ಸಾಹಿತ್ಯವನ್ನು ರಕ್ಷಣೆ ಮಾಡುವುದರ ಮೂಲಕ ವಚನಗಳ ಉಳಿವಿಗೆ ಕಾರಣರಾದರು. ತನ್ನ ಕಾಯಕ ನಿಷ್ಟೆ ಮೂಲಕ ಇತರರಿಗೆ ಮಾದರಿಯಾಗಿರುವ ತತ್ವ ಆದರ್ಶಗಳನ್ನು ನೀಡಿದರು’ ಎಂದರು.

ಸಚಿವ ಕೆ.ವೆಂಕಟೇಶ್ ಮಾತನಾಡಿ, ‘ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದೇನೆ. ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಿ ಪ್ರಾಮಾಣಿಕ ಸೇವೆ ಮಾಡಲಾಗಿದೆ. ಸಮುದಾಯದ ಮನವಿಯನ್ನು ಸರ್ಕಾರದ ಹಂತದಲ್ಲಿ ಅನುದಾನ ಮಂಜೂರು ಮಾಡಿ ಪೂರೈಸುವ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಶಿಕ್ಷಕ ಪುಟ್ಟಮಾದಯ್ಯ ಮಾತನಾಡಿ, ‘12ನೇ ಶತಮಾನದಲ್ಲಿ ಮಡಿವಾಳ ಮಾಚಿದೇವರು ಸಮಾಜದಲ್ಲಿದ್ದ ಅಸ್ಪೃಶ್ಯತೆ, ಲಿಂಗತಾರತಮ್ಯ ಸೇರಿದಂತೆ ಇನ್ನಿತರ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಶ್ರಮಿಸಿದ ಮಹನೀಯರು’ ಎಂದರು.

ಉತ್ತಮ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ಸಂಘದ ಅಧ್ಯಕ್ಷ ಮಾದೇಶ್, ಸತೀಶ್, ಮುಖಂಡರಾದ ಹರಿಹರ ಆನಂದಸ್ವಾಮಿ, ರವಿ ನಂದನ್, ನಾಗೇಶ್, ಮಕ್ಬುಲ್, ಬೋರ್ ಶೆಟ್ಟಿ, ಪಿಡಿಒ ವೀರಭದ್ರ ಶೆಟ್ಟಿ, ಸಿದ್ದನ ಕೊಪ್ಪಲು ಕುಮಾರ್, ರವಿ,ಹರ್ಷವರ್ಧನ್, ಟಿ.ಈರಯ್ಯ, ರಾಮಚಂದ್ರ, ವಿಜಯ್ ಕುಮಾರ್, ಪ್ರದೀಪ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.