‘ದುರಸ್ತಿಗೆ ₹ 20 ಲಕ್ಷ ನೆರವು’
‘ಅಮೂಲ್ಯ ಹಸ್ತಪ್ರತಿಗಳ ಭಂಡಾರ ಹೊಂದಿರುವ ಸುಂದರ ಕಟ್ಟಡದ ಒಆರ್‌ಐನ ಕೆಲಭಾಗ ಸೋರುತ್ತಿದ್ದು ಅದರ ದುರಸ್ತಿಗೆ ಇಲಾಖೆಯಿಂದ ₹ 10 ಲಕ್ಷ ನೀಡಲಾಗುವುದು’ ಎಂದು ಎ.ದೇವರಾಜು ತಿಳಿಸಿದರು. ‘ಮೈಸೂರು ವಿಶ್ವವಿದ್ಯಾಲಯವೂ ₹ 10 ಲಕ್ಷ ನೀಡಲಿದ್ದು ₹ 20 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಯಾವುದೇ ಪಾರಂಪರಿಕ ಕಟ್ಟಡ ಉಳಿಯಬೇಕೆಂದರೆ ಸಾರ್ವಜನಿಕರು ಕೈ ಜೋಡಿಸಬೇಕು’ ಎಂದೂ ಕೋರಿದರು.