ಮೈಸೂರು: ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮಾರಕವಾಗಿದ್ದ ಬೀದಿ ಹಂದಿಗಳನ್ನು ಮೈಸೂರು ಮಹಾನಗರಪಾಲಿಕೆಯ ಸಿಬ್ಬಂದಿ ಶನಿವಾರ ಹಿಡಿದರು. ಮಧುರೈನಿಂದ ಬಂದಿದ್ದ 20 ಜನರ ತಂಡವು ಮೊದಲ ದಿನವೇ 30 ಹಂದಿಗಳನ್ನು ಹಿಡಿಯಿತು.

ನಾಗರಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಪಾಲಿಕೆಯು ‘ಆಪರೇಷನ್ ಸ್ಟ್ರೇ ಪಿಗ್’ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದಕ್ಕಾಗಿ ನಗರಪಾಲಿಕೆ ವತಿಯಿಂದ ಮಧುರೈನಿಂದ ತಜ್ಞ ಕಾರ್ಮಿಕರನ್ನು ಕರೆಸಲಾಗಿದೆ. ಒಂದು ತಿಂಗಳ ಕಾಲ ಮೈಸೂರಿನಲ್ಲಿ ನೆಲೆಸಲಿರುವ ಈ ತಂಡವು ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಹಂದಿಗಳನ್ನು ಸೆರೆಹಿಡಿಯಲಿದೆ.

ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಹೊರವರ್ತುಲ ರಸ್ತೆ ಬಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಸಾತಗಳ್ಳಿ ಬಡಾವಣೆ, ಮಹಾದೇವಪುರ, ಡಾ.ರಾಜಕುಮಾರ್ ರಸ್ತೆ, ತ್ರಿವೇಣಿ ವೃತ್ತ, ಕೈಲಾಸಪುರಂ, ರಾಜೀವನಗರದಲ್ಲಿ ಹಂದಿಗಳನ್ನು ಸೆರೆಹಿಡಿಯಲಾಗಿದೆ. ಹಿಡಿದ ಹಂದಿಗಳನ್ನು ಅರಣ್ಯ ಪ್ರದೇಶಗಳಿಗೆ ಬಿಡಲಾಗುವುದು ಎಂದು ನಗರಪಾಲಿಕೆ ಪಶುವೈದ್ಯ ಡಾ.ಸುರೇಶ್ ತಿಳಿಸಿದರು.

ಹಂದಿಗಳನ್ನು ಕೊಟ್ಟಿಗೆಯಲ್ಲಿ ಸಾಕಬೇಕೆಂದು ಹಲವು ಬಾರಿ ಸೂಚನೆ ನೀಡಲಾಗಿದೆ. ಹಾಗಿದ್ದೂ ಹಂದಿಗಳನ್ನು ಬೀದಿಗೆ ಬಿಟ್ಟಿದ್ದಾರೆ. ರಸ್ತೆಯಲ್ಲಿರುವ ಹಂದಿಗಳನ್ನು ಮಾತ್ರ ಹಿಡಿಯಲಾಗಿದೆ ಎಂದು ಹೇಳಿದರು.

ಹಂಚ್ಯಾ – ಸಾತಗಳ್ಳಿ ಬಳಿ ಹಂದಿ ಪುನರ್ವಸತಿ ಕೇಂದ್ರವನ್ನು ತೆರೆಯುವ ಸಿದ್ಧತೆ ಈ ಹಿಂದೆ ನಡೆದಿತ್ತು. ಆದರೆ, ಅದು ಫಲಕಾರಿಯಾಗದ ಕಾರಣ ಅರಣ್ಯಕ್ಕೆ ಬಿಡಬೇಕಾಗಿ ಬಂದಿದೆ ಎಂದು ಡಾ.ಸುರೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.