ಮೈಸೂರು: ‘ನರೇಗಾ ಯೋಜನೆಗೆ ಕೇಂದ್ರ ಸರ್ಕಾರವು ಹೊಸ ರೂಪ ನೀಡುತ್ತಿದ್ದು, ಇದು ಜಾರಿಯಾದರೆ ಕಾಂಗ್ರೆಸ್ನ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಲಿದ್ದಾರೆ. ಈ ಕಾರಣಕ್ಕೆ ಯೋಜನೆಯನ್ನು ವಿರೋಧಿಸುತ್ತಿದ್ದಾರೆ’ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು.

‘20 ವರ್ಷದಿಂದ ಜಾರಿಯಲ್ಲಿರುವ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಲೋಪಗಳನ್ನು ಸರಿ ಮಾಡಿ ವ್ಯವಸ್ಥಿತ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರು ‘ವಿಕಸಿತ ಭಾರತ’ ಹೆಸರಿನಲ್ಲಿ ಇದನ್ನು ಜಾರಿಗೆ ತಂದಿದ್ದಾರೆ. ಇದರಿಂದ ನರೇಗಾ ಯೋಜನೆಯಲ್ಲಿ ‘ಕೂಲಿ ಚೋರಿ’ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ದಂಧೆಗೆ ಕಡಿವಾಣ ಬೀಳಲಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಪರಿಷ್ಕೃತ ಯೋಜನೆಯಲ್ಲಿ ಜಿಪಿಎಸ್ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆ ಬರಲಿದ್ದು, ನಕಲಿ ಕಾರ್ಡ್ ರದ್ದಾಗಲಿದೆ. ಆಡಳಿತಾತ್ಮಕ ವೆಚ್ಚ ಹೆಚ್ಚಿಸಿದ್ದು, ಕಾಲಮಿತಿಯಲ್ಲಿ ವೇತನ ಪಾವತಿ ಆಗಲಿದೆ. ಉದ್ಯೋಗದ ದಿನಗಳು 100ರಿಂದ 125ಕ್ಕೆ ಏರಿಸಿದೆ. ರೈತರು ಬೆಳೆ ಬೆಳೆಯುವ ಅವಧಿಯಲ್ಲಿ 60 ದಿನದ ರಜೆ ಇರಲಿದೆ. ರಾಜ್ಯಕ್ಕೆ ಕೇಂದ್ರವು 60:40 ಅನುಪಾತದ ಅಡಿ ₹17 ಸಾವಿರ ಕೋಟಿ ನೀಡಲಿದ್ದು, ರಾಜ್ಯ ಸರ್ಕಾರ ₹10 ಸಾವಿರ ಕೋಟಿ ಭರಿಸಬೇಕಿದೆ. ಈ ಹಣ ಜನರಿಗೆ ಹೋಗುತ್ತದೆ’ ಎಂದು ವಿವರಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಪಕ್ಷದ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಕೆ. ಸುಬ್ಬಣ್ಣ, ಮುಖಂಡರಾದ ಪ್ರತಾಪ್ ಸಿಂಹ, ಎಂ. ರಾಜೇಂದ್ರ, ಸಂದೇಶ್ ಸ್ವಾಮಿ, ಎಂ.ಜಿ. ಮಹೇಶ್, ಎಸ್. ಮಹದೇವಯ್ಯ, ಜಿ. ಸೋಮಸುಂದರ್, ಬಿ.ಎಂ. ರಘು, ಮೋಹನ್, ಮಹೇಶ್ ರಾಜೇ ಅರಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.