ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ವಿಶೇಷ ಆಹಾರ ನೀಡಿ ‘ತಾಲೀಮು’ ಕೊಡಲಾಗುತ್ತಿದೆ.

ಅರಣ್ಯ ಇಲಾಖೆಯಿಂದ ಗಂಡಾನೆಗಳಿಗೆ ಹುಲ್ಲು ಸೇರಿದಂತೆ ನಿತ್ಯ ತಲಾ ಸರಾಸರಿ 750 ಕೆ.ಜಿ. ಹಾಗೂ ಹೆಣ್ಣಾನೆಗಳಿಗೆ ತಲಾ 550 ಕೆ.ಜಿ. ಆಹಾರವನ್ನು ನೀಡಲಾಗುತ್ತಿದೆ. ಈ ಬಾರಿ ಬೆಣ್ಣೆ ಹಾಗೂ ಗೋಧಿ ಕೈಬಿಟ್ಟಿದ್ದು, ರಾಗಿ ಹಾಗೂ ಹುರುಳಿಯನ್ನು ‘ಮೆನು’ವಿನಲ್ಲಿ ಸೇರ್ಪಡೆ ಮಾಡಲಾಗಿದೆ.

ಈ ಬಗ್ಗೆ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ವನ್ಯಜೀವಿ ವಿಭಾಗದ ಡಿಸಿಎಫ್ ಐ.ಬಿ. ಪ್ರಭುಗೌಡ, ‘ಗಂಡಾನೆಗಳಿಗೆ ಜಾಸ್ತಿ, ಹೆಣ್ಣಾನೆಗಳಿಗೆ ಕೊಂಚ ಕಡಿಮೆ ಆಹಾರ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

‘ಬೆಳಿಗ್ಗೆ 450ರಿಂದ 500 ಕೆ.ಜಿ. ಹುಲ್ಲು, (ಹಸಿರು ಹುಲ್ಲು 175 ಕೆ.ಜಿ.ಯಿಂದ 200 ಕೆ.ಜಿ., ಭತ್ತದ ಹುಲ್ಲು, ಭತ್ತ ಸೇರಿ 35ಕೆ.ಜಿ.ಯಿಂದ 40 ಕೆ.ಜಿ.), ವಿವಿಧ ಕಾಳುಗಳು, ತರಕಾರಿ, ಅನ್ನ, ಉಪ್ಪು ಸೇರಿದಂತೆ ವಿಶೇಷ ಆಹಾರದ ಉಂಡೆಗಳು 10 ಕೆ.ಜಿ.ಯಿಂದ 2 ಕೆ.ಜಿ. ಕೊಡಲಾಗುತ್ತದೆ (ದೇಹ ತಂಪಾಗಿಸಲು)’ ಎಂದು ವಿವರ ನೀಡಿದರು.

ಕಾಳು, ತರಕಾರಿ ಸೇರಿ: ‘ವಿಶೇಷ ಆಹಾರವನ್ನು 6ರಿಂದ 7 ತಾಸುಗಳವರೆಗೆ ಬೇಯಿಸಿ, ಕಿವುಚಿ ಅದನ್ನು ಉಂಡೆ ಮಾಡಿ ಕೊಡಲಾಗುತ್ತದೆ. ಎಲ್ಲ ಆನೆಗಳಿಗೂ ಒಂದೇ ರೀತಿಯ ಮೆನು ಅನುಸರಿಸಲಾಗುತ್ತಿದೆ. ಪ್ರತಿಯೊಂದಕ್ಕೂ ಸರಾಸರಿ 10ರಿಂದ 12 ಕೆ.ಜಿ. ವಿಶೇಷ ಆಹಾರ ನೀಡಲಾಗುತ್ತಿದೆ. ಬೊಜ್ಜು ಹಾಗೂ ಕೊಬ್ಬು ಹೆಚ್ಚಾಗದಂತೆ ನೋಡಿಕೊಳ್ಳಲು ಸಮತೋಲಿತವಾಗಿ ಪೂರೈಸಲಾಗುತ್ತದೆ. ಕೊಬ್ಬು ಜಾಸ್ತಿಯಾದರೆ ಹೆಚ್ಚು ನಡೆಸಲು ಆಗುವುದಿಲ್ಲ. ಆದ್ದರಿಂದ, ಅವಶ್ಯವಿರುವಷ್ಟನ್ನು ಮಾತ್ರವೇ ಕೊಡುತ್ತೇವೆ. ನಿತ್ಯ 10ರಿಂದ 12 ಕಿ.ಮೀ. ನಡಿಗೆ ತಾಲೀಮು ಮಾಡಿಸಬೇಕಿರುವುದರಿಂದಾಗಿ ಅದಕ್ಕೆ ತಕ್ಕಂತೆ ಆಹಾರ ಪದಾರ್ಥವನ್ನು ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

‘2ನೇ ತಂಡದ ಆನೆಗಳು ಆ.25ರ ನಂತರ ಇಲ್ಲಿಗೆ ಬರಲಿವೆ. ಬಳಿಕ, ಭಾರ ಹೊರುವ ತಾಲೀಮನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

‘ಕಳೆದ ವರ್ಷ ಆನೆಗಳಿಗೆ ಆಹಾರಕ್ಕೆಂದೇ ₹ 48 ಲಕ್ಷ ಖರ್ಚಾಗಿತ್ತು. ಈ ಬಾರಿ 56 ದಿನಗಳವರೆಗೆ ಅವು ಇಲ್ಲಿರಲಿದೆ. ಅದಕ್ಕೆ ತಕ್ಕಂತೆ ಆಹಾರ ಒದಗಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಗಲಿಬಿಲಿಯಾಗಿಲ್ಲ...

‘ಆನೆಗಳು ಜನನಿಬಿಡ ಪ್ರದೇಶಕ್ಕೆ ಹೊಂದಿಕೊಳ್ಳಲೆಂದು ಶಬ್ದಕ್ಕೆ ಅಂಜದಿರಲೆಂದು ಬೆಳಿಗ್ಗೆ ಹಾಗೂ ಸಂಜೆ ರಾಜಮಾರ್ಗದಲ್ಲಿ ತಾಲೀಮು ಕೊಡಲಾಗುತ್ತಿದೆ. ಈ ವೇಳೆ ಆನೆಗಳು ಗಲಿಬಿಲಿ ಆಗುವುದನ್ನು ಈವರೆಗೆ ನೋಡಿಲ್ಲ’ ಎಂದು ಪ್ರಭುಗೌಡ ತಿಳಿಸಿದರು. ‘2ನೇ ತಂಡದಲ್ಲಿ ಬರುವ ಹೊಸ ಆನೆಗಳನ್ನು ಅನುಭವಿ ಆನೆಗಳ ಮಧ್ಯದಲ್ಲಿ ಬಳಸಲಾಗುವುದು. ‘ಅಭಿಮನ್ಯು’ ಬಹಳ ಶಕ್ತಿಶಾಲಿ ವಿಶೇಷ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸ ಹೊಂದಿದ್ದಾನೆ. ‘ಅಂಬಾರಿ’ ಸೇರಿದಂತೆ ಒಟ್ಟು ಒಂದು ಸಾವಿರ ಕೆ.ಜಿ. ಭಾರ ಹೊರುವ ಸಾಮರ್ಥ್ಯ ಹೊಂದಿದ್ದಾನೆ’ ಎಂದು ಹೇಳಿದರು.

ಹಿಂದಿನ ದಿನದ ಸಂಜೆಯೇ ಬೇಯಿಸಿ...

‘ಈ ಬಾರಿ ಆನೆಗಳಿಗೆ ಗೋಧಿ ಹಾಗೂ ಬೆಣ್ಣೆ ಕೊಡುತ್ತಿಲ್ಲ. ಹಿಂದೆ ನಾಲ್ಕು ಆನೆಗಳು ಮಾತ್ರವೇ ಬೆಣ್ಣೆ ತಿನ್ನುತ್ತಿದ್ದವು. ಪಶುವೈದ್ಯರ ಜೊತೆ ಚರ್ಚಿಸಿದ ನಂತರ ಯಾವ ಆನೆ ಶಿಬಿರದಲ್ಲೂ ಬೆಣ್ಣೆಯನ್ನು ನೀಡಲಾಗುತ್ತಿಲ್ಲ. ಬೆಣ್ಣೆಯು ಆನೆಗಳು ಲದ್ದಿಯನ್ನು ಸುಗಮವಾಗಿ ಹಾಕುವುದಕ್ಕೆ ಅನುಕೂಲ ಆಗುತ್ತದೆಯೇ ಹೊರತು ದೇಹಕ್ಕೆ ಅದರಿಂದ ಪ್ರಯೋಜನವೇನೂ ಆಗುತ್ತಿರಲಿಲ್ಲ. ಹೀಗಾಗಿ ಕೈಬಿಟ್ಟಿದ್ದೇವೆ. ಅದರ ಬದಲಿಗೆ ಹುರುಳಿ ಹಾಗೂ ರಾಗಿ ನೀಡುತ್ತಿದ್ದೇವೆ. ಇದರಿಂದ ಅವುಗಳಿಗೆ ಅನುಕೂಲ ಆಗುತ್ತದೆ’ ಎಂದರು. ‘ದಸರಾ ಮುಗಿದು ಇಲ್ಲಿಂದ ಅವು ಶಿಬಿರಗಳಿಗೆ ಹೋಗುವವರೆಗೂ ಈ ‘ಮೆನು’ ಇರುತ್ತದೆ. ಹಿಂದಿನ ದಿನ ಸಂಜೆ ಬೇಯಿಸಿ ತಣ್ಣಗೆ ಮಾಡಿದ ವಿಶೇಷ ಆಹಾರವನ್ನು ಬೆಳಿಗ್ಗೆ ಕೊಡಲಾಗುತ್ತದೆ. ಕಬ್ಬು 2 ಕೊಬ್ಬರಿ 1ರಿಂದ 2 ಬೆಲ್ಲವನ್ನೂ ನೀಡಲಾಗುತ್ತದೆ. ಗಕಪಡೆಯ ಶಕ್ತಿ ವೃದ್ಧಿಗೆ ಕ್ರಮ ವಹಿಸುತ್ತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.