ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಬಿ.ಕಾಂ. ಹಾಗೂ ಬಿಬಿಎ ಪದವಿ ಮೂರನೇ ಸೆಮಿಸ್ಟರ್ನ ಕನ್ನಡ ಭಾಷಾ ಪುಸ್ತಕಗಳು ಮಾರುಕಟ್ಟೆಗೆ ಬಂದಿದ್ದು, ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ವರ್ಷದಿಂದ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಬದಲು ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಜಾರಿಗೆ ಬಂದಿದೆ. ಅದರ ಅನ್ವಯ ಈ ವರ್ಷ ಮೂರನೇ ಸೆಮಿಸ್ಟರ್ಗೆ ಹೊಸ ಪಠ್ಯಕ್ರಮ ಜಾರಿಯಾಗಿದೆ. ಉಳಿದೆಲ್ಲ ವಿಷಯಗಳ ಪಠ್ಯಗಳು ಸಕಾಲಕ್ಕೆ ಬಂದರೂ ಪದವಿ ಕನ್ನಡ ಭಾಷಾ ಪಠ್ಯ ಸಿಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಕುರಿತು ‘ಪ್ರಜಾವಾಣಿ’ಯು ಆ. 20ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಗುರುವಾರ ಸಂಜೆಯಿಂದಲೇ ‘ವಾಣಿಜ್ಯ ಗಂಗೋತ್ರಿ–3’ ಹಾಗೂ ‘ನಿರ್ವಹಣಾ ಗಂಗೋತ್ರಿ–3’ ಪಠ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳ ಕೈ ಸೇರಿದೆ. ‘ಗಣಕ ಗಂಗೋತ್ರಿ–3’ ಪುಸ್ತಕ ಇನ್ನಷ್ಟೇ ಬರಬೇಕಿದೆ.

‘ತರಗತಿಗಳು ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ ಪಠ್ಯಪುಸ್ತಕ ಸಿಗದೇ ತೀವ್ರ ತೊಂದರೆ ಆಗಿತ್ತು. ಇದೀಗ ಪುಸ್ತಕಗಳು ಬಂದಿದ್ದು, ಶುಕ್ರವಾರದಿಂದಲೇ ಪಾಠ ಆರಂಭಿಸಿದ್ದೇವೆ. ವರದಿ ಮೂಲಕ ಗಮನ ಸೆಳೆದ ‘ಪ್ರಜಾವಾಣಿ’ಗೆ ಧನ್ಯವಾದ’ ಎಂದು ಪದವಿ ಕಾಲೇಜುಗಳ ಉಪನ್ಯಾಸಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.