ಆಷಾಢ ಮಾಸದ ಎರಡನೇ ಶುಕ್ರವಾರದ ಪ್ರಯುಕ್ತ ರಾಜ್ಯದ ವಿವಿಧೆಡೆಯಿಂದ ಚಾಮುಂಡಿ ಬೆಟ್ಟಕ್ಕೆ ಬಂದಿದ್ದ ಸಾವಿರಾರು ಭಕ್ತರು, ಹಸಿರು ಅಂಚಿನ ಕೆಂಪು ಬಣ್ಣದ ಸೀರೆಯಲ್ಲಿ, ‘ಸಿಂಹವಾಹಿನಿ’ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಯನ್ನು ಕಣ್ತುಂಬಿಕೊಂಡರು. ಸಿಂಹದ ಮೇಲೆ ವಿರಾಜಮಾನವಾಗಿ ಕುಳಿತ್ತಿದ್ದ ದೇವಿಗೆ ಕೈ ಮುಗಿದ ಭಕ್ತರು ಜಯಘೋಷ ಮೊಳಗಿಸಿದರು.