ಚುಕ್ಕಾಣಿ ಹಿಡಿದಿರುವವರು ‘ಹೊಸಬರು’
-ಈ ಬಾರಿ ದಸರಾ ಮಹೋತ್ಸವ ರೂಪಿಸುವಲ್ಲಿ ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳಲ್ಲಿ ಹೊಸಬರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳಾ ಅಧಿಕಾರಿಗಳೇ ಹಲವು ಪ್ರಮುಖ ಹುದ್ದೆಗಳಲ್ಲಿರುವುದು ಈ ಸಲದ ವಿಶೇಷವಾಗಿದೆ. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ದಸರಾ ವಿಶೇಷಾಧಿಕಾರಿಯಾಗಿ ಇದು ಮೊದಲನೇ ದಸರಾ. ಹಿಂದೆ ಅವರು ಮಹಾನಗರಪಾಲಿಕೆ ಆಯುಕ್ತರಾಗಿದ್ದರಾದರು. ಈಗ ಇವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹತ್ವದ ಹೊಣೆ ಹೊತ್ತಿರುವ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರಿಗೂ ಇದು ಹೊಸ ಅನುಭವ. ಹೋದ ವರ್ಷ ಅವರು ಎಸ್ಪಿಯಾಗಿದ್ದರು. ಈ ಬಾರಿ ಮೆರವಣಿಗೆ ಪಂಜಿನ ಕವಾಯತು ಉಪ ಸಮಿತಿಯ ಉಪ ವಿಶೇಷಾಧಿಕಾರಿಯೂ ಹೌದು. ಎಸ್ಪಿ ಎನ್.ವಿಷ್ಣುವರ್ಧನ್ (ಯುವ ಸಂಭ್ರಮ ಯುವ ದಸರಾ) ಮುಡಾ ಆಯುಕ್ತ ಎ.ಎನ್. ರಘುನಂದನ್ (ಆಹಾರ ಮೇಳ) ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ (ವಿದ್ಯುತ್ ದೀಪಾಲಂಕಾರ) ಎಟಿಐ ಜಂಟಿ ನಿರ್ದೇಶಕಿ ಪ್ರಿಯದರ್ಶಿನಿ ಕೆ. (ಮಹಿಳಾ ಮಕ್ಕಳ ದಸರಾ) ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ವಿ.ಕೆ. (ಕ್ರೀಡಾ ದಸರಾ) ಮೊದಲಾದವರಿಗೆ ಹೊಸ ‘ಜವಾಬ್ದಾರಿ’ಯ ಅನುಭವವಾಗಿದೆ.