ಮೈಸೂರು: ‘ಡ್ರಗ್ಸ್ ಮುಕ್ತ ಮೈಸೂರು’ ಆಗು ಮಾಡಲು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಎದುರು ಆಯೋಜಿಸಿದ್ದ ಬೈಕ್ ರ್ಯಾಲಿಗೆ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸ್ಥಾಪಕ ವಿನಯ್ ಗುರೂಜಿ ಭಾನುವಾರ ಚಾಲನೆ ನೀಡಿದರು.

ಬಿಜೆಪಿ ಮುಖಂಡ ಹಾಗೂ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಮುಖ್ಯಸ್ಥ ಡಾ.ಶುಶ್ರುತ್ ಗೌಡ ಆಯೋಜಿಸಿದ್ದ ರ್ಯಾಲಿಯು ರಾಮಸ್ವಾಮಿ ವೃತ್ತದ ವರೆಗೂ ಕ್ರಮಿಸಿತು. ಪ್ಲೆಕಾರ್ಡ್, ಭಿತ್ತಿಪತ್ರಗಳನ್ನು ಹಿಡಿದಿದ್ದ ಯುವಕರು ಜಾಗೃತಿ ಮೂಡಿಸಿದರು.

ವಿನಯ್ ಗುರೂಜಿ ಮಾತನಾಡಿ, ‘ಯುವಕರೇ ದೇಶದ ಆಸ್ತಿ. ಅವರು ಮಾದಕ ವಸ್ತುಗಳ ವ್ಯಸನಿಗಳು ಆಗಬಾರದು. ಮೈಸೂರಿನಲ್ಲಿ ರಾಜ್ಯವೇ ಬೆಚ್ಚಿ ಬೀಳುವಂತ ಡ್ರಗ್ಸ್ ಸಿಕ್ಕಿರುವುದು ಆತಂಕ ಮೂಡಿಸುತ್ತದೆ. ಡ್ರಗ್ಸ್ ಮುಕ್ತ ಮೈಸೂರು ನಿರ್ಮಾಣಕ್ಕೆ ರ್ಯಾಲಿಯು ಮುನ್ನಡಿ ಬರೆದಿದೆ’ ಎಂದರು.

ಶಿಲ್ಪಿ ಅರುಣ್ ಯೋಗಿರಾಜ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ, ಯೋಗಪಟು ಶ್ರೀಹರಿ, ಡಾ.ಎಚ್.ಕೆ.ಚೇತನ್, ಸಮಾಜ ಸೇವಕರಾದ ದಿನೇಶ್ಗೌಡ, ರವಿಶಂಕರ್, ಸೋಮಣ್ಣ, ಲೋಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.