ಮೈಸೂರು: ಇಲ್ಲಿನ ಶ್ರೀರಾಂಪುರದ 59 ವರ್ಷದ ವ್ಯಕ್ತಿ ಆನ್ಲೈನ್ ವಂಚನೆಯಿಂದ ₹4 ಲಕ್ಷ ಕಳೆದುಕೊಂಡಿದ್ದಾರೆ.

ಅಪರಿಚಿತ ವ್ಯಕ್ತಿ ವಾಟ್ಸ್ಆ್ಯಪ್ಗೆ ಮಾಡಿದ ಸಂದೇಶದಿಂದ ಪ್ರೇರಿತರಾಗಿ ಹೆಚ್ಚಿನ ಲಾಭದ ಉದ್ದೇಶದಿಂದ ಆನ್ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಲು ಆತ ಹೇಳಿದ ಬ್ಯಾಂಕ್ ಖಾತೆಗೆ ₹4 ಲಕ್ಷ ಹಣ ವರ್ಗಾವಣೆ ಮಾಡಿದ್ದರು. ಬಳಿಕ ಹಣವನ್ನು ವಾಪಸ್ ಡ್ರಾ ಮಾಡಲು ಹೋದಾಗ ಹಣ ಬರದೇ ವಂಚನೆಯಾಗಿದೆ ಎಂದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರೇಡಿಂಗ್: ₹30 ಲಕ್ಷ ವಂಚನೆ

ಮೈಸೂರು: ಟ್ರೇಡಿಂಗ್ ಹೆಸರಿನಲ್ಲಿ ಯುವತಿಯು ₹30 ಲಕ್ಷ ವಂಚಿಸಿದ್ದಾಳೆ ಎಂದು ಯಾದವಗಿರಿ ನಿವಾಸಿ ರಾಜ್ ಕುಮಾರ್ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇಲವಾಲ ನಿವಾಸಿ ಲಾವಣ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

'ಬೋಗಾದಿಯಲ್ಲಿ ವಾಸವಿದ್ದ ಲಾವಣ್ಯ ಅವರು ಟ್ರೇಡಿಂಗ್ ನಡೆಸುವುದಾಗಿ ಹೇಳಿ ನನ್ನಿಂದ ಹಣ ಪಡೆದಿದ್ದು, ಹಣವನ್ನು ನಗದು ರೂಪದಲ್ಲಿ ಹಾಗೂ ಬ್ಯಾಂಕ್ ಖಾತೆಗೂ ವರ್ಗಾವಣೆ ಮಾಡಿದ್ದೇನೆ. ಈಗ ಹಣ ಕೇಳಿದರೆ ವಾಪಸ್ ನೀಡದೇ ವಂಚನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಚಿನ್ನದ ನೆಕ್ಲೇಸ್ ಕಳವು

ಮೈಸೂರು: ನಗರದ ಕೆಎಸ್ಆರ್ಟಿಸಿ ಗ್ರಾಮಾಂತರ ಬಸ್ ನಿಲ್ದಾಣ ಬಳಿಯ ಮಲ್ಬಾರ್ ಗೋಲ್ಡ್ ಅಂಡ್ ಡೈಮಂಡ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯು ₹2.64 ಲಕ್ಷ ಮೌಲ್ಯದ 23 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಕದ್ದು ಪರಾರಿಯಾಗಿದ್ದಾರೆ.

ಜುಲೈ 27ರಂದು ಅಂಗಡಿಗೆ ಆಗಮಿಸಿದ್ದ ಕಳ್ಳನು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಕೌಂಟರ್ನಲ್ಲಿದ್ದ ಚಿನ್ನದ ನೆಕ್ಲೇಸ್ ಕಳವು ಮಾಡಿದ್ದಾನೆ ಎಂದು ಅಂಗಡಿ ಮ್ಯಾನೇಜರ್ ದೂರು ನೀಡಿದ್ದು, ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.