ಮೈಸೂರು: ‘ನನಗಾಗ 14– 15 ವರ್ಷ. ‘ಚೌಡಯ್ಯ ಸ್ಮಾರಕ ಸಾಂಸ್ಕೃತಿಕ ಸಭಾ’ ಆರಂಭಿಸಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಪರ್ವತವಾಗಿದ್ದ ಚೆಂಬೈ ವೈದ್ಯನಾಥ ಭಾಗವತಾರ್ ಅವರನ್ನು ಕರೆಸಿದ್ದೆವು. ಅಂಥ ಎಷ್ಟೋ ಮಂದಿಯ ಸಂಗೀತ ಪುರಭವನದಲ್ಲಿ ತುಂಬಿದೆ. ಇಂಥ ಕಟ್ಟಡ ಬಿದ್ದು ಹೋಗುವ ಸ್ಥಿತಿಯಲ್ಲಿದೆ ಎಂದರೆ ಸಂಕಟವಾಗುತ್ತದೆ’

ವಿ.ವಿ.ಮೊಹಲ್ಲಾದಲ್ಲಿ ಕಳೆದ 6 ದಶಕದಿಂದ ನಿರಂತರವಾಗಿ ಸಂಗೀತೋತ್ಸವ ನಡೆಸುತ್ತಿರುವ ‘ಶ್ರೀಪ್ರಸನ್ನ ವಿದ್ಯಾ ಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್’ನ ಕಾರ್ಯದರ್ಶಿ ಸಿ.ಆರ್.ಹಿಮಾಂಶು, ಪುರಭವನದ ಸ್ಮೃತಿಯನ್ನು ತೆರೆದಿಟ್ಟದ್ದು ಹೀಗೆ.

‘ಕೊಚ್ಚಿಯ ಟಿ.ವಿ.ಗೋಲಕೃಷ್ಣನ್, ಪಾಲ್ಘಾಟ್ನ ಕೆ.ವಿ.ನಾರಾಯಣಸ್ವಾಮಿ, ಕಂಚಿಯ ಡಿ.ಕೆ.ಜಯರಾಮನ್, ಲಾಲ್ಗುಡಿ ಜಯರಾಮನ್ ಅವರಂಥ ದಿಗ್ಗಜರ ಸಂಗೀತವನ್ನು ಮೈಸೂರಿಗರು ಕೇಳಿಸಿಕೊಂಡಿದ್ದರು. ಅವರ ಕಛೇರಿಗಳಿದ್ದರೆ ದೂರದೂರಿನಿಂದಲ್ಲದೇ ನೆರೆ ರಾಜ್ಯಗಳಿಂದಲೂ ಬರುತ್ತಿದ್ದರು’ ಎಂದರು.

‘ನಾಲ್ವಡಿ, ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿ ಅರಮನೆಯಲ್ಲಿ ಸಂಗೀತ ವಿದ್ವಾಂಸರ ಸಂಗೀತ ಕಛೇರಿ ಆಯೋಜಿಸಿದ್ದರೆ, ಅವರದೇ ಮತ್ತೊಂದು ಕಾರ್ಯಕ್ರಮ ಪುರಭವನದಲ್ಲಿ ಇದ್ದೇ ಇರುತ್ತಿತ್ತು. ನಾಟಕಗಳನ್ನು ನೋಡಲು ಬರುತ್ತಿದ್ದವರು, ಸಂಗೀತಕ್ಕೂ ಕಿವಿಯಾಗುತ್ತಿದ್ದರು. ಅಂಥ ವೈಭವ ಮತ್ತೆ ಸಿಗುವುದು ಕಷ್ಟ’ ಎಂದು ಹೇಳಿದರು.

‘60ರ ದಶಕದಲ್ಲಿ ಅರಿಯಕುಡಿ ರಾಮಾನುಜಾ ಅಯ್ಯಂಗಾರ್, ಪಿಟೀಲು ಚೌಡಯ್ಯ, ಟಿ.ಕೆ.ಮೂರ್ತಿ ಕಚೇರಿಗಳು ನಡೆಯುತ್ತಿದ್ದೆವು. ನಾವೂ 1970–72ರ ಸುಮಾರು ಚೌಡಯ್ಯ ಸ್ಮಾರಕ ಸಾಂಸ್ಕೃತಿಕ ಸಭಾ ಆರಂಭಿಸಿ, ದೊಡ್ಡ ಸಂಗೀತಗಾರರನ್ನು ಕರೆಸಿದ್ದೆವು. ಸೌಂದರ್ಯಮ್ಮ, ಸಾಹುಕಾರ್ ತಿಮ್ಮಪ್ಪ ಅವರೆಲ್ಲರೂ ಸಭಾದ ಪದಾಧಿಕಾರಿಗಳಾಗಿದ್ದರು’ ಎಂದರು.

ಕಛೇರಿಗೆ ಹೇಳಿ ಮಾಡಿದ ಭವನ: ‘ನಾಟಕವೇ ಇರಲಿ, ಸಂಗೀತ ಕಛೇರಿಯೇ ಇರಲಿ, ಇದಕ್ಕಿಂತ ಉತ್ತಮ ವೇದಿಕೆ ಇನ್ನೊಂದಿಲ್ಲ. ಉತ್ತಮವಾಗಿ ಅಭಿವೃದ್ಧಿಪಡಿಸಿದರೆ ಸಂಗೀತ ಕಛೇರಿ ಮಾಡಬಹುದು. ಪಾಲಿಕೆಗೆ ಆದಾಯವೂ ಬರುತ್ತದೆ’ ಎನ್ನುತ್ತಾರೆ ಹಿಮಾಂಶು.

‘ಹಳೆಯ ಕಟ್ಟಡಗಳು ಪುನರುಜ್ಜೀವನಗೊಳಿಸುವುದು ಆಡಳಿತ ನಡೆಸುವವರಿಗೆ ಬೇಕಿಲ್ಲವಾಗಿದೆ’ ಎಂಬ ಬೇಸರ ಅವರದು.

‘ಖಾಸಗಿಯವರಿಗೆ ವಹಿಸಲಿ’

‘ಪಾಲಿಕೆ ನಿರ್ವಹಣೆ ಮಾಡಲು ಆಗದಿದ್ದರೆ ಖಾಸಗಿಯವರಿಗೆ ವಹಿಸಿಬಿಡಲಿ. ಕಣ್ಣೆದುರಿಗೆ ಈ ಪರಿಯ ಉದಾಸೀನತೆ ಪಾಲಿಕೆಗೇಕೆ. ಅದರ ‘ರಂಗಾಚಾರ್ಲು ಸ್ಮಾರಕ ಪುರಭವನ ಸಮಿತಿ’ ಸತ್ತುಹೋಗಿ ಬಹಳ ಕಾಲವಾಗಿದೆ. ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಹಿಮಾಂಶು ದೂರಿದರು. ‘ಸಿಎಸ್ಆರ್ ಅನುದಾನದಲ್ಲಾದರೂ ಅಭಿವೃದ್ಧಿ ಮಾಡಬಹುದಲ್ಲವೇ? ಇಲ್ಲವೇ ರಂಗಾಯಣದಂತ ಸಂಸ್ಥೆಗೆ ವಹಿಸಿ ಬಿಡಲಿ. ಆದರೆ ಅದನ್ನು ಸ್ವಾಯತ್ತ ಸಂಸ್ಥೆ ಮಾಡಬೇಕು. ಸರ್ಕಾರದ ಅಡಿ ಬರುವ ಎಲ್ಲ ರಂಗ ಕಲಾ ಸಂಸ್ಥೆಗಳನ್ನು ಅಧಿಕಾರಶಾಹಿಯೇ ನಿಯಂತ್ರಿಸಿ ನಿರ್ಲಕ್ಷ್ಯ ವಹಿಸುತ್ತಿದೆ’ ಎಂದರು.

ಮೂರು ದಶಕದ ಹಿಂದೆ ಸಂಗೀತ ಕಛೇರಿಗಳು ಪುರಭವನದಲ್ಲಿ ಹೆಚ್ಚಾಗಿ ನಡೆಯುತ್ತಿದ್ದವು. ಈಗ ಪೌರಾಣಿಕ ನಾಟಕಗಳಷ್ಟೇ ನಡೆಯುತ್ತಿವೆ. ಉತ್ತಮ ಧ್ವನಿ ಬೆಳಕು ಸ್ವಚ್ಛತೆ ಏನೂ ಇಲ್ಲ ಪೋಷಕ ಸಂಘಟಕ
–ಸಿ.ಆರ್.ಹಿಮಾಂಶು, ಸಂಗೀತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.