ನಂಜನಗೂಡು: ಶಿಕ್ಷಕರನ್ನು ಬೋಧನೆಗೆ ಮಾತ್ರ ಸೀಮಿತಗೊಳಿಸಬೇಕೆಂಬ ಬೇಡಿಕೆಯಿದೆ. ಕುಂದು ಕೊರತೆಗಳಿಗೆ ಸದನದಲ್ಲಿ ಶಿಕ್ಷಕರ ಧ್ವನಿಯಾಗಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಭರವಸೆ ನೀಡಿದರು.

ನಗರದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಉತ್ತಮ ಪ್ರಜೆಯಾಗಿ ರೂಪಿಸಿ, ದೇಶವನ್ನು ಸದೃಢವಾಗಿ ಕಟ್ಟುವಂತಹ ಮಹತ್ತರ ಜವಾಬ್ದಾರಿಯನ್ನು ಶಿಕ್ಷಕರು ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು. ಭವಿಷ್ಯ ರೂಪಿಸುವ ಗುರುವಿನ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ನಗರದಲ್ಲಿ ₹2 ಕೋಟಿ ವೆಚ್ಚದ ಗುರುಭವನ ನಿರ್ಮಾಣದ ಯೋಜನೆ ಸಿದ್ದಗೊಂಡಿದ್ದು, ನಿವೇಶನ ಹಸ್ತಾಂತರವಾಗಿದೆ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಹೆಚ್ಚಿನ ಅನುದಾನ ತಂದು ಗುರುಭವನ ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ ಮಾತನಾಡಿ, ಶಿಕ್ಷಕರಿಗೆ ಬೋಧನೆಯ ಜೊತೆಗೆ ಬೋಧಕೇತರ ಕೆಲಸಗಳನ್ನು ವಹಿಸುತ್ತಿರುವುದರಿಂದ ಶಿಕ್ಷಕ ವೃತ್ತಿಯೂ ಒತ್ತಡ ಮಯವಾಗಿದೆ, .ಶಿಕ್ಷಕರನ್ನು ಬೋಧನೆಗೆ ಮಾತ್ರ ಸೀಮಿತಗೊಳಿಸುವಂತೆ ಶಾಸಕರು ಸರ್ಕಾರವನ್ನು ಒತ್ತಾಯಿಸಬೇಕು ಎಂದು ಹೇಳಿದರು.

ನಿವೃತ್ತಿಗೊಂಡ ಶಿಕ್ಷಕರು ಹಾಗೂ ಉತ್ತಮ ಸಾಧನೆಗೈದ ಶಿಕ್ಷಕರುಗಳನ್ ಗೌರವಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಕಳಲೆ ಕೇಶವಮೂರ್ತಿ, ನಗರ ಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಸಿ.ಎಂ.ಶಂಕರ್, ಎಸ್.ಎಂ.ಸಿದ್ದರಾಜಪ್ಪ ,ಬಿಇಒ ಮಹೇಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಡಾ. ದೀಪು, ಶಿಕ್ಷಕರಾದ ಎಚ್. ಸಿ. ಸ್ವಾಮೇಶ್, ಮುದ್ದು ಮಾದೇಗೌಡ, ಎಂ.ಎ.ರಂಗನಾಥನ್, ಸತೀಶ್ ದಳವಾಯಿ, ಹೆಚ್ಎಸ್. ಮಹೇಶ್, ಕಾರಯ್ಯ, ಸುನಂದ, ಎನ್. ಎಸ್. ರಮೇಶ್ ,ಮಗು ಬಸವಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.