ಮೈಸೂರು: ‘ಮಹಿಳೆಯರು, ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ಜನ ಸಮುದಾಯದ ಸಂವೇದನೆಯು ಹೊಸಗನ್ನಡ ಸಾಹಿತ್ಯದಲ್ಲಿ ಜೀವಂತವಾಗಿದೆ’ ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಹೇಳಿದರು.

ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ರಾಜ್ಯ ಜಾನಪದ ಸಂಶೋಧಕರ ಒಕ್ಕೂಟವು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಂಬಯ್ಯ ಹೊನ್ನಲಗೆರೆ ಮತ್ತು ಶ್ರೀನಾಥ ಬಿ.ಕಾಂಬಳೆ ಅವರ ‘ಹೊಸಗನ್ನಡ ಸಾಹಿತ್ಯ ಚರಿತ್ರೆ: ಪಂಥಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

‘ಹೊಸಗನ್ನಡ ಸಾಹಿತ್ಯ ಪರಂಪರೆಯ ಹೂರಣವೆ ವಸ್ತು ವೈವಿಧ್ಯತೆಯಾಗಿದೆ. ದನಿ ಇಲ್ಲದ ಹಾಗೂ ಎಲ್ಲ ಸ್ತರದ ಜನರನ್ನು ಅದು ಮುಖಾಮುಖಿಯಾಗಿಸಿದೆ. ನಾಡು ನುಡಿಯ ಅಭಿಮಾನ, ಚಳವಳಿ, ಪ್ರತಿಭಟನೆ, ವೈಜ್ಞಾನಿಕ, ರಾಜಕೀಯ ಮತ್ತು ಸಾಮಾಜಿಕ ಕೊಡುಗೆಗಳನ್ನು ಈ ಕೃತಿಯಲ್ಲೂ ನೋಡಬಹುದು’ ಎಂದರು.

‘ಹಳಗನ್ನಡದ ವಸ್ತು ಮತ್ತು ಆಶಯ ರಾಜಪ್ರಭುತ್ವದ ಮಹತ್ವ ಸಾರಿದರೆ, ಹೊಸಗನ್ನಡದ್ದು ಜನಪ್ರಭುತ್ವವಾದಿಯಾಗಿದೆ’ ಎಂದು ತಿಳಿಸಿದರು.

ಲೇಖಕರಾದ ಶ್ರೀನಾಥ್ ಬಿ.ಕಾಂಬಳೆ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪೂರಕವಾದ ಅಂಶಗಳು ಕೃತಿಯಲ್ಲಿವೆ’ ಎಂದರೆ, ‘ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಹಾಗೂ ಮಹಿಳಾ ಸಾಹಿತ್ಯದ ಪ್ರೇರಣೆ ಧೋರಣೆ ಪುಸ್ತಕದಲ್ಲಿದೆ’ ಎಂದು ಹೊಂಬಯ್ಯ ಹೊನ್ನಲಗೆರೆ ಹೇಳಿದರು.

ಪತ್ರಕರ್ತ ವಿನೋದ್ ಮಹದೇವಪುರ, ಎಚ್.ಪಿ. ಮಂಜು, ಪ್ರಸಾರಾಂಗದ ಸೂಪರಿಂಟೆಂಡೆಂಟ್ ಚನ್ನಬಸಪ್ಪ, ಸಹಾಯ ನಿರ್ದೇಶಕ ಅನಿಲ್ ಕುಮಾರ್, ಮುದ್ರಣಾಲಯದ ನಿರ್ದೇಶಕ ಸತೀಶ್, ಶಿವಲಿಂಗೇಗೌಡ, ತಲಕಾಡು ನಾಗರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.