ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಐಆರ್‌ಎಫ್‌: ಜೆಎಸ್‌ಎಸ್‌ ಅಕಾಡೆಮಿಗೆ 34ನೇ ಸ್ಥಾನ

Last Updated 15 ಜುಲೈ 2022, 10:42 IST
ಅಕ್ಷರ ಗಾತ್ರ

ಮೈಸೂರು: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್‌ಐಆರ್‌ಎಫ್) ವರದಿ ಆಧರಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2022ನೇ ಸಾಲಿನಲ್ಲಿ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ನಗರದ ಜೆಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು 34ನೇ ಸ್ಥಾನ ಉಳಿಸಿಕೊಂಡಿದೆ.

ಒಟ್ಟಾರೆ 1,876 ವಿಶ್ವವಿದ್ಯಾಲಯಗಳ ಪೈಕಿ ಸತತ 7ನೇ ಬಾರಿಗೆ ದೇಶದ ಮೊದಲ ಅಗ್ರಗಣ್ಯ 50 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಗಳಿಸಿದೆ.

ಜೆಎಸ್‌ಎಸ್‌ ಸಂಸ್ಥೆಯ ಅಧೀನ ಕಾಲೇಜುಗಳು ಕೂಡ ಉತ್ತಮ ಶ್ರೇಯಾಂಕ ಗಳಿಸಿವೆ. ದೇಶದ ಒಟ್ಟು 401 ಫಾರ್ಮಸಿ ಕಾಲೇಜುಗಳ ಪೈಕಿ ಊಟಿಯ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ 6ನೇ ಸ್ಥಾನ, ಮೈಸೂರಿನ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ 8ನೇ ಸ್ಥಾನ ಗಳಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೇಲೇರಿದೆ.

ದೇಶದ 142 ದಂತ ವೈದ್ಯಕೀಯ ಕಾಲೇಜುಗಳ ಪೈಕಿ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜು 12ನೇ ಸ್ಥಾನ ಪಡೆದಿದೆ. ಮತ್ತೊಂದು ಅಂಗ ಸಂಸ್ಥೆಯಾದ ಜೆಎಸ್‌ಎಸ್ ವೈದ್ಯಕೀಯ ಕಾಲೇಜು 151 ವೈದ್ಯಕೀಯ ಕಾಲೇಜುಗಳ ಪೈಕಿ 34ನೇ ಸ್ಥಾನ ಗಳಿಸಿದೆ.

‘ದೇಶದ ಒಟ್ಟಾರೆ 7,254 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಜೆಎಸ್‌ಎಸ್‌ 60ನೇ ಸ್ಥಾನ ಗಳಿಸಿದೆ. ವಿದ್ಯಾರ್ಜನೆ, ಸಂಶೋಧನೆ ಮತ್ತು ಸೇವೆಗಳಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಭಾರತ ಮತ್ತು ವಿದೇಶಗಳಲ್ಲಿ ಗುಣಮಟ್ಟದ ಶಿಕ್ಞಣ ನೀಡುತ್ತಿದೆ. ಶೈಕ್ಷಣಿಕ, ಸಂಶೋಧನೆ, ಪದವಿ ಫಲಿತಾಂಶ, ಗ್ರಹಿಕೆ ಮತ್ತು ಔಟ್ ರೀಚ್‌ ಕಾರ್ಯಕ್ರಮಗಳಿಂದ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಸದೃಢವಾಗಿ ಮುನ್ನಡೆಯಲು ಶ್ರಮಿಸುತ್ತಿದೆ. 13 ವರ್ಷಗಳಿಂದಲೂ ತನ್ನ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ. ಇದೆಲ್ಲವೂ ಎಲ್ಲರ ಉತ್ತಮ ಕಾರ್ಯದಿಂದ ಸಾಧ್ಯವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT