ಮೈಸೂರು: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ನಗರದ ದೇವರಾಜ ಮೊಹಲ್ಲಾದ ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಆ.23ರಂದು ಬೆಳಿಗ್ಗೆ 9.30ಕ್ಕೆ ‘ಕರುನಾಡ ಸವಿಯೂಟ’ ಸ್ಪರ್ಧೆ ಆಯೋಜಿಸಲಾಗಿದೆ. ಅಡುಗೆ ಮಾಡಿ ತಂದು ಸ್ಪರ್ಧಿಸಿ ಬಹುಮಾನ ಗೆಲ್ಲುವ ಅವಕಾಶವಿದೆ.
ಗೆಳೆಯರು ಅಥವಾ ಕುಟುಂಬ ಸದಸ್ಯರೊಂದಿಗೆ ಆಸಕ್ತರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಅಡುಗೆ ಕೌಶಲದಿಂದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ, ಆಕರ್ಷಕ ಬಹುಮಾನವನ್ನು ಗೆಲ್ಲಬಹುದು. ‘ಸುಧಾ’ ವಾರಪತ್ರಿಕೆಯಲ್ಲೂ ಕಾಣಿಸಿಕೊಳ್ಳಬಹುದು.
ಸ್ಪರ್ಧೆಗೆ ಶ್ರೀಕೃಷ್ಣ ಶುದ್ಧ ಹಳ್ಳಿತುಪ್ಪ (ಶ್ರೀಕೃಷ್ಣ ಘೀ), ಫಿಲಿಪ್ಸ್ ಜೂಸರ್ ಮಿಕ್ಸರ್ ಗ್ರೈಂಡರ್, ಪ್ರೀತಿ ಸಂಸ್ಥೆ, ಎಸ್‌ಎಸ್‌ಪಿ ಹಿಂಗ್, ವೆನ್‌ಕಾಬ್ ಚಿಕನ್ ಮತ್ತು ಸುಜಯ್ ನೀರಾವರಿ ಸಂಸ್ಥೆಯ ಸಹಯೋಗವಿದೆ. ಚಲನಚಿತ್ರ ನಟರೂ ಆಗಿರುವ ಸಿಹಿಕಹಿ ಚಂದ್ರು ಮತ್ತು ಆದರ್ಶ್ ತತ್ಪತಿ ಅವರು ನಡೆಸಿಕೊಡಲಿರುವ ಮಾಸ್ಟರ್‌ಕ್ಲಾಸ್‌ಗೆ ಹಾಜರಾಗಬಹುದು. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನೀವು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು. ಉತ್ತಮ ಅಡುಗೆ ಕೌಶಲವುಳ್ಳವರಿಗೆ ಆಕರ್ಷಕ ಬಹುಮಾನ ದೊರೆಯಲಿದೆ.
ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥದೊಂದಿಗೆ ಅಂದು ಬೆಳಿಗ್ಗೆ 9.30ರ ವೇಳೆಗೆ ಸ್ಥಳದಲ್ಲಿ ಹಾಜರಿರಬೇಕು. ನೀವು ತರುವ ಆಹಾರ ಪದಾರ್ಥವು ಕರ್ನಾಟಕದ ಖಾದ್ಯ ಆಗಿರಬೇಕು. ರುಚಿ, ಹೊಸತನ ಹಾಗೂ ಪ್ರಸ್ತುತಪಡಿಸಿದ ಮಾನದಂಡಗಳನ್ನು ಆಧರಿಸಿ ತೀರ್ಪು ನೀಡಲಾಗುತ್ತದೆ. ತಟ್ಟೆಗಳು, ಪರಿಕರಗಳು ಮತ್ತು ಅಗತ್ಯ ಖಾದ್ಯಾಲಂಕಾರ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು. ಸಿರಿಧಾನ್ಯ ಬಳಸಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಿಗೆ ವಿಶೇಷ ಬಹುಮಾನ ದೊರೆಯುತ್ತದೆ. ಸ್ಪರ್ಧೆಗೆ ಪ್ರವೇಶ ಉಚಿತ.
ಪ್ರಥಮ ಸ್ಥಾನ ಗಳಿಸಿದವರಿಗೆ ₹10 ಸಾವಿರ, 2ನೇ ಸ್ಥಾನ ಪಡೆದವರಿಗೆ ₹7 ಸಾವಿರ ಹಾಗೂ 3ನೇ ಬಹುಮಾನವಾಗಿ ₹5 ಸಾವಿರ ನೀಡಲಾಗುವುದು.
ಪಾಲ್ಗೊಳ್ಳಲು ಆಸಕ್ತಿ ಇರುವವರು ಇಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದು ಅಥವಾ ಮೊ.ಸಂ. 7338018541 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.