ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಅವಧಿಯಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ: ಶಾಸಕ ದರ್ಶನ್‍ ಧ್ರುವನಾರಾಯಣ

Published : 6 ಆಗಸ್ಟ್ 2024, 14:29 IST
Last Updated : 6 ಆಗಸ್ಟ್ 2024, 14:29 IST
ಫಾಲೋ ಮಾಡಿ
Comments

ನಂಜನಗೂಡು: ‘ಬಿಜೆಪಿ ಆಡಳಿತದ ಅವಧಿಯಲ್ಲಿ ಪಿಎಸ್‍ಐ, ಉಪನ್ಯಾಸಕರ ನೇಮಕಾತಿ, ನೀಟ್ ಸೇರಿ ಅತಿ ಹೆಚ್ಚು ಹಗರಣಗಳು ನಡೆದಿವೆ. ಇಂತಹ ಭ್ರಷ್ಟರು ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದು ಶಾಸಕ ದರ್ಶನ್‍ ಧ್ರುವನಾರಾಯಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕಾಂಗ್ರೆಸ್‌ ಜನಾಂದೋಲನ ‌ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘2023ರಲ್ಲಿ ಹಿಂಬಾಗಿಲಿಂದ ಅಧಿಕಾರಕ್ಕೆ ಹಿಡಿದ ಬಿಜೆಪಿ ಆಡಳಿತದಲ್ಲೇ ಹೆಚ್ಚು ಹಗರಣಗಳು ನಡೆದಿವೆ, 2020ರ ಕೊರೊನಾ ಸಂದರ್ಭ ಮಾಸ್ಕ್, ಪಿಪಿಇ ಕಿಟ್‍ನಲ್ಲೂ ಬಿಎಸ್.ಯಡಿಯೂರಪ್ಪ ₹40 ಸಾವಿರ ಕೋಟಿ ಹಗರಣ ನಡೆಸಿದ್ದರು ಎಂಬುದನ್ನು ಅವರ ಪಕ್ಷದ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಭ್ರಷ್ಟ ಹಿನ್ನಲೆಯುಳ್ಳ ಬಿಜೆಪಿಗರು ಹೋರಾಟ ನಡೆಸುತ್ತಿರುವುದು ಹಾಸ್ಯಸ್ಪದ’ ಎಂದರು.

‘ಮುಡಾದಿಂದ ಭೂಮಿ ಕಳೆದುಕೊಂಡವರಿಗೆ ಬಿಜೆಪಿ ಅವಧಿಯಲ್ಲೇ, ಅವರದೇ ಪಕ್ಷದ ಮುಡಾ ಅಧ್ಯಕ್ಷರು ಬದಲಿ ನಿವೇಶನ ನೀಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯರವರ ತಪ್ಪೇನಿದೆ? ಮುಡಾ ನಿಗಮದಲ್ಲಿ ಅತಿ ಹೆಚ್ಚು ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರೇ ಅಧ್ಯಕ್ಷರಾಗಿದ್ದಾರೆ. ಆದರೂ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಶ್ನಿಸದೆ ಕಾಂಗ್ರೆಸ್ ಅವಧಿಯಲ್ಲಿ ಪ್ರಶ್ನಿಸುವ ಹುನ್ನಾರವೇನಿದೆ? ಸಿದ್ದರಾಮಯ್ಯ ಅವರು ಸದಾ ದಲಿತರು, ರೈತರು, ಹಿಂದುಳಿದವರ ಪರ ಕೆಲಸ ಮಾಡುವ ಏಕೈಕ ನಾಯಕ’ ಎಂದರು.

‘ಕೊಟ್ಟ ಭರವಸೆ ಈಡೇರಿಸಿ ಕೊಟ್ಟ ಮಾತಿನಂತೆ ನಡೆಯುತ್ತಿರುವ ನಾಯಕ. ಅವರ ಜನಪ್ರಿಯತೆ ಸಹಿಸದ ಬಿಜೆಪಿಯವರು ಸರ್ಕಾರ ಉರುಳಿಸಬೇಕು ಎಂಬ ಹುನ್ನಾರದೊಂದಿಗೆ ಮೈಸೂರು ಚಲೋ ಆಂದೋಲನ ನಡೆಸುತ್ತಿದ್ದಾರೆ. ಆದ್ದರಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆ. 9 ರಂದು ಜನಾಂದೋಲನ ಸಭೆ ಏರ್ಪಡಿಸಲಾಗಿದೆ. ನಂಜನಗೂಡು ಕ್ಷೇತ್ರದಿಂದ 25 ಸಾವಿರ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಮೂಲಕ ಸಿದ್ದರಾಮಯ್ಯ ಪರ ನಿಲ್ಲಬೇಕು’ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಕಳಲೆ ಕೇಶವಮೂರ್ತಿ, ಎಸ್.ಸಿ.ಬಸವರಾಜು, ಕುರಹಟ್ಟಿಮಹೇಶ್, ಸಿ.ಎಂ.ಶಂಕರ್, ಶ್ರೀಕಂಠನಾಯಕ, ಹಾಡ್ಯರಂಗಸ್ವಾಮಿ, ಕೆ.ಮಾರುತಿ, ಲತಾ ಸಿದ್ದಶೆಟ್ಟಿ, ದೊರೆಸ್ವಾಮಿನಾಯಕ, ಎನ್.ಎಂ.ಮಂಜುನಾಥ್, ಮುದ್ದುಮಾದಶೆಟ್ಟಿ, ಪ್ರದೀಪ್‍ಕುಮಾರ್, ಅಶೋಕ್, ಕಳಲೆ ರಾಜೇಶ್ ಉಪಸ್ಥಿತರಿದ್ದರು.

ಆ.9ಕ್ಕೆ ಜನಾಂದೋಲನ ಸಭೆ ಸ್ಥಳ ಮೈಸೂರು ಮಹಾರಾಜಾ ಕಾಲೇಜು ಮೈದಾನ ನಂಜನಗೂಡಿನಿಂದ 25 ಸಾವಿರ ಜನ ಸೇರುವ ನಿರೀಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT