ಮೈಸೂರು: ಕಾಡಿನಿಂದ ಬಂದು ದಣಿದಿದ್ದ ಆನೆಗಳು ಅಶೋಕಪುರಂನ ಅರಣ್ಯ ಭವನದಲ್ಲಿ ಮಂಗಳವಾರ ವಿಶ್ರಾಂತಿ ಪಡೆದವು. ಮಜ್ಜನದ ಖುಷಿಯಲ್ಲಿ ಮಿಂದವು. ಭೀಮ–ಏಕಲವ್ಯ ಆನೆಗಳ ಚಿನ್ನಾಟವು ನೋಡಗರಲ್ಲಿ ಹಬ್ಬವನ್ನು ಉಂಟು ಮಾಡಿತು.

ಅಂಬಾರಿ ಆನೆ ಅಭಿಮನ್ಯು ಸೇರಿದಂತೆ 9 ಆನೆಗಳನ್ನು ನೋಡಲು ನಗರದ ನಾಗರಿಕರು ನೂರಾರು ಸಂಖ್ಯೆಯಲ್ಲಿ ಮಕ್ಕಳೊಂದಿಗೆ ಬಂದಿದ್ದರು. ‘ಅರ್ಜುನ’ನನ್ನು ಕಟ್ಟಲಾಗುತ್ತಿದ್ದ ಜಾಗದಲ್ಲಿ ‘ಮಹೇಂದ್ರ’ ಇದ್ದರೆ, ಅವನ ಹಿಂದಿನ ಸಾಲಿನಲ್ಲಿ ಗುಳಿ ಕೆನ್ನೆಯ ‘ಕಾವೇರಿ’ ಇದ್ದಳು.

ಚಿನ್ನಾಟ:

ಶಾಲಾ–ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳೂ ಆನೆಗಳನ್ನು ಕಣ್ತುಂಬಿಕೊಂಡರು. ಈ ವೇಳೆ 6ನೇ ಬಾರಿ ದಸರೆಗೆ 25 ವರ್ಷದ ‘ಭೀಮ’, ಸೆರೆಯಾದ ಒಂದೂವರೆ ವರ್ಷದಲ್ಲಿ ಪಳಗಿ ಎರಡನೇ ಬಾರಿ ದಸರೆಗೆ ಬಂದಿರುವ 39 ವರ್ಷದ ‘ಏಕಲವ್ಯ’ ಆನೆಯ ಚಿನ್ನಾಟ ಎಲ್ಲರನ್ನು ಸೆಳೆಯಿತು.

ಮತ್ತಿಗೋಡು ಶಿಬಿರದ ಈ ಎರಡೂ ಆನೆಗಳು ಸ್ನೇಹ ಬಂಧ ಹೀಗೆ ಎನ್ನುವಂತೆ ಸೊಂಡಿಲುಗಳನ್ನು ಬಹಳ ಹೊತ್ತು ಬಿಗಿದುಕೊಂಡಿದ್ದ ದೃಶ್ಯವು ಎಲ್ಲರನ್ನು ಆಕರ್ಷಿಸಿತು. ಎರಡು ವರ್ಷದ ಹಿಂದಿನ ದಸರೆಯಲ್ಲಿ ‘ಅರ್ಜುನ’ ಮತ್ತು ‘ಭೀಮ’ರ ಚಿನ್ನಾಟವನ್ನು ಈ ಇಬ್ಬರೂ ನೆನಪಿಸಿದರು.

ಮಜ್ಜನ, ವಿಶ್ರಾಂತಿ:

ಮೊದಲ ತಂಡದಲ್ಲಿ ಬಂದಿರುವ ಎಲ್ಲ ಆನೆಗಳು ಅನುಭವಿಗಳಾಗಿದ್ದು, ನಗರದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಂಡವು. ಅವುಗಳ ಮಾವುತರು, ಕಾವಾಡಿಗಳು ಹಾಗೂ ಚಿಣ್ಣರು ಸ್ನಾನ ಮಾಡಿಸಿದರು. ‘ಮಜ್ಜನ’ ಖುಷಿಯಲ್ಲಿ ಆನೆಗಳು ಮಿಂದವು. ಹುಲ್ಲು, ಆಲದ ಸೊಪ್ಪು ಹಾಗೂ ಒಣಹುಲ್ಲಿನ ಮೇವನ್ನು ನೀಡಲಾಗಿತ್ತು.

ಕಳೆದ ವರ್ಷ ರೈಲು ಶಬ್ದಕ್ಕೆ ಬೆಚ್ಚಿದ್ದ ‘ಏಕಲವ್ಯ’ ಈ ಬಾರಿ ಶಾಂತನಾಗಿ ನಿಂತಿದ್ದನು. ಅವನ ಮುಂದೆಯೇ ‘ಭೀಮ’, ಅಕ್ಕಪಕ್ಕದಲ್ಲಿ ‘ಧನಂಜಯ’ ಹಾಗೂ ‘ಪ್ರಶಾಂತ’ ನಿಂತಿದ್ದರು. ಕಳೆದ ವರ್ಷ ‘ಅರಮನೆ’ ಹಾಗೂ ‘ದುಬಾರೆ’ ಶಿಬಿರದಲ್ಲಿ ಜಗಳವಾಡಿದ್ದ ‘ಧನಂಜಯ’ ಹಾಗೂ ‘ಕಂಜನ್’ಗಳ ಮಧ್ಯೆ ಅಂತರ ಸೃಷ್ಟಿಸಲಾಗಿತ್ತು.

ದೂರದಲ್ಲಿ ದರ್ಶನ:

ನಾಗರಿಕರು ದೂರದಲ್ಲೇ ನಿಂತು ಗಜಪಡೆಯನ್ನು ಕಣ್ತುಂಬಿಕೊಂಡರು. ಕೆಲವರು ‘ಭೀಮ’ ಎಂದು ಕೂಗಲು ಯತ್ನಿಸಿದರು. ಅವರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಾಧ್ಯಮದವರಿಗಷ್ಟೇ ಒಳ ಪ್ರವೇಶ ನೀಡಲಾಗಿತ್ತು. ಹಗ್ಗದಿಂದ ಆನೆಗಳ ಬಿಡಾರದ ಅಂಗಳಕ್ಕೆ ಹೋಗದಂತೆ ತಡೆಯಲಾಗಿತ್ತು.

‘ದಸರೆಗೆ ಈಗಾಗಲೇ ಬಂದಿರುವ ಅನುಭವಿಗಳು. ಮಾನಸಿಕವಾಗಿ ಸಜ್ಜಾಗಿದ್ದೇವೆ ಎನ್ನುವಂತೆ ಶಾಂತ ರೀತಿಯಲ್ಲಿ ವರ್ತಿಸುತ್ತಿವೆ. ಗಜಪಯಣದಲ್ಲಿ ಸಾವಿರಾರು ಜನರ ಮಧ್ಯೆಯೇ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು, ಸಂತಸ ತಂದಿದೆ’ ಎಂದು ಡಿಸಿಎಫ್ ಪ್ರಭುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಜಪಡೆಯ ಆಯ್ಕೆ ಪ್ರಕ್ರಿಯೆಯಲ್ಲೇ ಎಲ್ಲ ಆನೆಗಳಿಗೂ ಆರೋಗ್ಯ ತಪಾಸಣೆ ನಡೆಸಿ, ಆಯ್ಕೆ ಮಾಡಲಾಗಿದೆ. ಅರಮನೆ ಬಿಡಾರದಲ್ಲಿ ಪೌಷ್ಟಿಕ ಆಹಾರ ನೀಡಲಾಗುವುದು’ ಎಂದರು.

ಅರಣ್ಯ ಭವನದಲ್ಲಿ 6 ದಿನ ಬೀಡು

ಅಶೋಕಪುರಂನ ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ 9 ಆನೆಗಳು ಭಾನುವಾರ (ಆ.10) ಸಂಜೆ ಅರಮನೆ ಆವರಣ ಪ್ರವೇಶಿಸಲಿವೆ. ಅರಣ್ಯ ಭವನದಲ್ಲಿ ಸಂಜೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತ್ತದೆ. ಸಂಜೆ 6.45ರಿಂದ 7.20ರೊಳಗೆ ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಆನೆಗಳನ್ನು ಸ್ವಾಗತಿಸಲಾಗುತ್ತಿದೆ. ಆ.7ರಂದು ಕಾರ್ಯಕ್ರಮ ನಿಗದಿಯಾಗಿತ್ತು. ನಂತರ ಮುಂದೂಡಲಾಯಿತು. ಹೀಗಾಗಿ 6 ದಿನ ಅರಣ್ಯ ಭವನದಲ್ಲಿಯೇ ಬೀಡು ಬಿಡಬೇಕಾಗಿದೆ. ‘ಆನೆಗಳನ್ನು ನಡಿಗೆ ಮೂಲಕ ಅರಮನೆ ಆವರಣಕ್ಕೆ ಕರೆದೊಯ್ಯಲಾಗುವುದು. ಅರಣ್ಯ ಭವನದಲ್ಲಿ ಆನೆಗಳ ಮಾವುತ ಕಾವಾಡಿಗಳ ಕುಟುಂಬದ ಸದಸ್ಯರಿಗೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಪ್ರಭುಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.