ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ರೌಡಿಶೀಟರ್‌ ಮೇಲೆ ನಿಗಾ: ಎಸ್ಪಿ, ಪೊಲೀಸ್ ಆಯುಕ್ತ

Published 17 ಮಾರ್ಚ್ 2024, 6:40 IST
Last Updated 17 ಮಾರ್ಚ್ 2024, 6:40 IST
ಅಕ್ಷರ ಗಾತ್ರ

ಮೈಸೂರು: ‘ಲೋಕಸಭಾ ಚುನಾವಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮತ್ತು ಎಸ್ಪಿ ಸೀಮಾ ಲಾಟ್ಕರ್‌ ತಿಳಿಸಿದರು.

‘ನಗರದ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಹಾಗೂ ವರುಣ ಕ್ಷೇತ್ರದ 9 ಮತಗಟ್ಟೆಗಳಲ್ಲಿ ಒಟ್ಟು 921 ಮತಗಟ್ಟೆಗಳಿವೆ. ಅವುಗಳಲ್ಲಿ 220 ಮತಗಟ್ಟೆಗಳನ್ನು ಕ್ರಿಟಿಕಲ್‌ (ಸೂಕ್ಷ್ಮ, ಅತಿಸೂಕ್ಷ್ಮ) ಎಂದು ಗುರುತಿಸಲಾಗಿದೆ. 14 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುವುದು. 13 ಕ್ರೈಂ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ’ ಎಂದು ಬಾನೋತ್ ವಿವರ ನೀಡಿದರು.

‘ಮುಂಜಾಗ್ರತಾ ಕ್ರಮವಾಗಿ ರೌಡಿಶೀಟರ್‌ಗಳ ಮೇಲೆ ನಿಗಾ ವಹಿಸಲಾಗಿದೆ. ನಗರದಲ್ಲಿ 731 ರೌಡಿಶೀಟರ್‌ಗಳಿದ್ದು, 583 ಮಂದಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಲಾಗಿದೆ. 69 ಮಂದಿಯನ್ನು ಗಡಿಪಾರು ಮಾಡಲಾಗಿದೆ. 1,077 ಆಯುಧಗಳಿದ್ದು, ಅವುಗಳ ಠೇವಣಿಗೆ ಕ್ರಮ ವಹಿಸಲಾಗಿದೆ. ಅಗತ್ಯವಿದ್ದವರು ವಿನಾಯಿತಿ ಬೇಕಿದ್ದರೆ ಸಮಿತಿಯ ಮುಂದೆ ಅರ್ಜಿ ಸಲ್ಲಿಸಿ ಸಕಾರಣ ನೀಡಿ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಸಿಐಎಸ್‌ಎಫ್‌ನ ಒಂದು ತುಕಡಿ ಬಂದಿದ್ದು, ಪಥಸಂಚಲನವನ್ನೂ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಸೀಮಾ ಮಾತನಾಡಿ, ‘ಜಿಲ್ಲಾ ಪೊಲೀಸ್ ವ್ಯಾಪ್ತಿಯ 1,994 ಮತಗಟ್ಟೆಗಳಲ್ಲಿ 305 ಮತಗಟ್ಟೆಗಳನ್ನು ಕ್ರಿಟಿಕಲ್‌ (ಸೂಕ್ಷ್ಮ, ಅತಿಸೂಕ್ಷ್ಮ) ಎಂದು ಗುರುತಿಸಲಾಗಿದೆ. ಬಾವಲಿಯಲ್ಲಿ ಅಂತರರಾಜ್ಯ, ಉಳಿದೆಡೆ ಅಂತರ ಜಿಲ್ಲೆ ಹಾಗೂ ಜಿಲ್ಲೆಯೊಳಗೆ ಒಟ್ಟು 28 ಚೆಕ್‌ಪೋಸ್ಟ್‌ ಕಾರ್ಯನಿರ್ವಹಿಸಲಿವೆ. 1,154 ರೌಡಿಶೀಟರ್‌ಗಳಿದ್ದು, 1,020 ಮಂದಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಷರತ್ತು ವಿಧಿಸಲಾಗಿದೆ. 1,664 ಶಸ್ತ್ರಾಸ್ತಗಳಿದ್ದು ಠೇವಣಿ ಪಡೆದುಕೊಳ್ಳಲು ಕ್ರಮ ವಹಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT