ಮೈಸೂರು: ‘ಬುಡಕಟ್ಟು ಜನರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅವರು ವಾಸಿಸುವ ಹಾಡಿ ಮೊದಲಾದ ಕಡೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.

ಇಲ್ಲಿನ ಬೋಗಾದಿ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಿ.ವಿ.ಟಿ.ಜಿ. (ದುರ್ಬಲ ಬುಡಕಟ್ಟು ಗುಂಪು) ಮತ್ತು ಅರಣ್ಯ ಆಧಾರಿತ ಅದಿವಾಸಿ ಸಮುದಾಯಗಳ ಯುವಕ-ಯುವತಿಯರು, ಮುಖಂಡರ ಒಂದು ದಿನದ ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬುಡಕಟ್ಟು ಸಮುದಾಯದವರಿಗೆ ಕೌಶಲ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಬೇಕು. ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ಶೈಕ್ಷಣಿಕ, ವಸತಿ, ಉದ್ಯೋಗ, ಕುಡಿಯುವ ನೀರು, ವಿದ್ಯುತ್, ರಸ್ತೆ ಸಮಸ್ಯೆಗಳ ಬಗ್ಗೆ ಸಮುದಾಯದವರು ಸಚಿವರ ಗಮನಸೆಳೆದರು.

ಶಾಸಕ ಡಿ. ರವಿಕುಮಾರ್, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಯೋಗೇಶ್ ಟಿ., ತಳಸಮುದಾಯಗಳ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಚಂದ್ರಶೇಖರ್, ವಕೀಲ ಅನಂತ ನಾಯ್ಕ, ಬಸವರಾಜ್, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಎಚ್.ಎಸ್. ಗಿರಿಜಾಂಬ, ಸಂಶೋಧನಾಧಿಕಾರಿಗಳಾದ ಶಿವಕುಮಾರ್ ಮತ್ತು ಕೃಷ್ಣಮೂರ್ತಿ ಕೆ.ವಿ., ರಾಮಕೃಷ್ಣಯ್ಯ ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ಅರಣ್ಯ ಆಧಾರಿತ ಸಮುದಾಯಗಳ ಒಕ್ಕೂಟ, ತಳ ಸಮುದಾಯಗಳ ಅಧ್ಯಯನ ಕೇಂದ್ರ, ಕಾನೂನು ಶಾಲೆ ಸಹಯೋಗದಲ್ಲಿ ಕಾರ್ಯಾಗಾರ ನಡೆಯಿತು.

ಚರ್ಚೆಯಾದ ಪ್ರಮುಖ ವಿಷಯ, ಒತ್ತಾಯಗಳು

* ರಾಜ್ಯದಲ್ಲಿರುವ ಅರಣ್ಯ ಮತ್ತು ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟುಗಳಿಗೆ ಬುಡಕಟ್ಟು ಅಭಿವೃದ್ಧಿ ನಿಗಮ ಸ್ಥಾಪಿಸುವುದು.

* ಮೈಸೂರಿನಲ್ಲಿರುವ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರವನ್ನು ರಾಜ್ಯಮಟ್ಟದ ಸಂಸ್ಥೆಯಾಗಿಸಿ, ಮೂಲ ಆದಿವಾಸಿ ಸಮುದಾಯದವರನ್ನೇ ಅಧಿಕಾರಿಗಳಾಗಿ ನೇಮಿಸುವುದು.

* ಪ್ರೊ.ಮುಜಾಫರ್ ಅಸ್ಸಾದಿ ಅವರ ವರದಿ ಅನುಷ್ಠಾನಗೊಳಿಸುವುದು.

* ರಾಮನಗರ ಜಿಲ್ಲೆಯಲ್ಲಿರುವ ಇರುಳಿಗರಿಗೆ ಪೌಷ್ಟಿಕ ಆಹಾರ ವಿತರಿಸುವುದು.

* ಕಾಡು ಮತ್ತು ಕಾಡಂಚಿನ ಅರಣ್ಯಾಧಾರಿತ ಆದಿವಾಸಿಗಳಿಗೆ ಕಳೆದ ಬಜೆಟ್ನಲ್ಲಿ ಘೋಷಿಸಿರುವ ಎಲ್ಲ ಕಾರ್ಯಕ್ರಮಗಳನ್ನೂ ಕೂಡಲೇ ಅನುಷ್ಠಾನಗೊಳಿಸುವುದು.

* ಅರಣ್ಯ ಆಧಾರಿತ ಆದಿವಾಸಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿಗಳನ್ನು ಆಯಾ ಜಿಲ್ಲಾಮಟದಲ್ಲಿ ಆಯೋಜಿಸುವುದು, ಶಿಕ್ಷಣದತ್ತ ಮುಖ ಮಾಡುವಂತೆ ಪ್ರೇರೇಪಿಸುವುದು.

* ರಾಜ್ಯದ ಕಾಡು ಮತ್ತು ಕಾಡಂಚಿನಲ್ಲಿರುವ ಅರಣ್ಯ ಆಧಾರಿತ ಆದಿವಾಸಿ ಸಮುದಾಯದವರಿಗೆ ನಗರ ಪ್ರದೇಶಗಳಲ್ಲಿ ವಿಶೇಷ ಬಡಾವಣೆ ನಿರ್ಮಿಸಬೇಕು.

* ಕೊರಗರಿಗೆ ಸಂಬಂಧಿಸಿದಂತೆ ಮಹಮ್ಮದ್ ಫೀರ್ ವರದಿ ಅನುಷ್ಠಾನಗೊಳಿಸುವುದು.

* ಜೇನು ಕುರುಬ ಸಮುದಾಯ ಬೇಡಿಕೆಗಳನ್ನು ಈಡೇರಿಸಬೇಕು.

* 2006ರ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.

* ಮೈಸೂರಿನಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪಿಸಬೇಕು.