ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಆಕಾಶ್‌ನಿಂದ ‘ಶೈಕ್ಷಣಿಕ ವಿದ್ಯಾರ್ಥಿವೇತನ’

Published 5 ಏಪ್ರಿಲ್ 2024, 16:02 IST
Last Updated 5 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ಮೈಸೂರು: ಪರೀಕ್ಷಾ ಪೂರ್ವ ತಯಾರಿ ನೀಡುವಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್‌ ಸರ್ವೀಸಸ್ ಲಿಮಿಟೆಡ್ (ಎಇಎಸ್‌ಎಲ್‌) ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಫೌಂಡೇಶನ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರಿಗೆ ರಿಯಾಯಿತಿ ಒದಗಿಸುವ ನಿಟ್ಟಿನಲ್ಲಿ ಶೇ 90ರವರೆಗೆ ‘ಶೈಕ್ಷಣಿಕ ವಿದ್ಯಾರ್ಥಿವೇತನ’ ನೀಡುವುದಾಗಿ ಘೋಷಿಸಿದೆ. ಕಂಪನಿ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾದವರು ವಿದ್ಯಾರ್ಥಿವೇತನ ಪಡೆಯಬಹುದಾಗಿದೆ.

‘ಇದೇ ತಿಂಗಳು ಪ್ರಾರಂಭವಾಗಲಿರುವ ಪ್ರಸಕ್ತ ಸಾಲಿನ ಕೋಚಿಂಗ್‌ ಬ್ಯಾಚ್‌ಗಳಿಗೆ ಪ್ರವೇಶ ಪಡೆಯುವವರು ಐಎಸಿಎಸ್‌ಟಿ (ಸ್ಕಾಲರ್‌ಶಿಪ್‌ ಇನ್‌ಸ್ಟಂಟ್ ಅಡ್ಮಿಷನ್ ಕಮ್ ಸ್ಕಾಲರ್‌ಶಿಪ್‌ ಟೆಸ್ಟ್) ಪರೀಕ್ಷೆ ತೆಗೆದುಕೊಳ್ಳಬಹುದು. 7ರಿಂದ 12 ತರಗತಿವರೆಗಿನ ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ಯಾವ ದಿನ ಬೇಕಾದರೂ ಪರೀಕ್ಷೆಯನ್ನು ಉಚಿತವಾಗಿ ಎದುರಿಸಬಹುದು. ಜೂನ್‌ವರೆಗೆ ಇದಕ್ಕೆ ಅವಕಾಶವಿದೆ’ ಎಂದು ಕಂಪನಿಯ ಕರ್ನಾಟಕ ದಕ್ಷಿಣ ಶಾಖೆಗಳ ಹಿರಿಯ ಸಹಾಯಕ ನಿರ್ದೇಶಕ ಜೆ.ಅನಿಲ್‌ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಹುತಾತ್ಮರ ಮಕ್ಕಳಿಗೆ ಶೇ 100ರಷ್ಟು ಬೋಧನಾ ಶುಲ್ಕ ವಿನಾಯಿತಿ ನೀಡಲಾಗುವುದು. ರಕ್ಷಣಾ ಸಿಬ್ಬಂದಿ, ಭದ್ರತಾ ಏಜೆನ್ಸಿಗಳು ಹಾಗೂ ಭಯೋತ್ಪಾದನೆಯಿಂದ ಸಂತ್ರಸ್ತರಾದವರ ಮಕ್ಕಳಿಗೆ ಶೇ 10ಕ್ಕಿಂತ ಹೆಚ್ಚು ವಿದ್ಯಾರ್ಥಿವೇತನ ಕೊಡಲಾಗುವುದು. 2014ರಿಂದ ಇಲ್ಲಿಯವರೆಗೆ 75 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಉಪಕ್ರಮದ ಮೂಲಕ ನೆರವಾಗುತ್ತಿದ್ದೇವೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು 60 ನಿಮಿಷಗಳ ಐಎಸಿಎಸ್‌ಟಿ ಪರೀಕ್ಷೆಯನ್ನು ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲಿ ತೆಗೆದುಕೊಳ್ಳಲು ಅವಕಾಶವಿದೆ. ಸಿಬಿಟಿ (ಕಂಪ್ಯೂಟರ್ ಬೇಸ್ಡ್‌ ಟೆಸ್ಟ್‌) ವೇದಿಕೆಯ ಮೂಲಕ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಕಂಪನಿಯ ಮೈಸೂರು ಶಾಖೆಗಳ ಸಹಾಯಕ ನಿರ್ದೇಶಕ ವಿಕ್ರಂ ಚಕ್ರವರ್ತಿ, ಪ್ರದೇಶ ಮಾರಾಟ ಮುಖ್ಯಸ್ಥ ಸುವಾಸ್ ಕುಮಾರ್, ಕುವೆಂಪುನಗರ ಶಾಖೆಯ ಮುಖ್ಯಸ್ಥ ಎಚ್‌.ಆರ್. ಅನಿಲ್‌ಕುಮಾರ್, ಮೈಸೂರು ಗ್ರಾಮಾಂತರ ಶಾಖೆಯ ಮುಖ್ಯಸ್ಥ ದೀಪಕ್‌ ಹಾಗೂ ಪಿಆರ್‌ಒ ವಿಶಾಲ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT