ತಿ. ನರಸೀಪುರ: ಪ್ರತಿಫಲಾಪೇಕ್ಷೆ ಇಲ್ಲದೇ ಪ್ರತಿಯೊಬ್ಬರೂ ಸಹ ಸೇವಾ ಮನೋಭಾವ ಬೆಳೆಸಿಕೊಂಡಲ್ಲಿ ಸಮಾಜದ ಪ್ರಗತಿ ಸಾಧ್ಯ ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿ ಹೇಳಿದರು.

ತಾಲ್ಲೂಕಿನ ಬನ್ನೂರು ಹೋಬಳಿ ಯಾಚೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಇನ್ವೆಂಟಿಕ್ ಫೌಂಡೇಶನ್ ನಿಂದ ನಡೆದ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಫೌಂಡೇಶನ್ ಸಿಇಓ ಕೆಂಪೇಗೌಡ ಅವರು ನಮ್ಮ ಶಾಲೆಯನ್ನು 3 ವರ್ಷದ ಹಿಂದೆ ದತ್ತು ತೆಗೆದುಕೊಂಡು ಲಕ್ಷಾಂತರ ಹಣವನ್ನು ಖರ್ಚು ಮಾಡಿ, ಶಾಲೆಗೆ ಹೊಸ ಮೆರಗನ್ನು ನೀಡಿ ಅಭಿವೃದ್ದಿ ಪಡಿಸಿದ್ದಾರೆ. ಶಾಲೆಯನ್ನು ಆಧುನಿಕರಣಗೊಳಿಸಿ, ಕಲಿಕೆಯಲ್ಲಿ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಕಲಿಯುವಂತ ಸೌಲಭ್ಯವನ್ನು ನೀಡಿದ್ದಾರೆ ಪ್ರತಿ ಮಗುವಿಬ ಶೈಕ್ಷಣಿಕೆ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಅಪೇಕ್ಷೆ ಇಲ್ಲದ ಇವರ ಸೇವೆ ಅಭಿನಂದನೀಯ ಎಂದು ತಿಳಿಸಿದರು.

ಪೂರ್ವ ಪ್ರಾಥಮಿಕ ದಿಂದ 7ನೇ ತರಗತಿಯ ಎಲ್ಲಾ ಮಕ್ಕಳಿಗೆ ಶನಿವಾರ ಸಮವಸ್ತ್ರ ವಿತರಿಸಲಾಯಿತು.
ಬನ್ನೂರು ಹೋಬಳಿ ಕಸಾಪ ಅಧ್ಯಕ್ಷ ವೈ.ಎ.ಪುಟ್ಟರಾಜು ಮಾತನಾಡಿದರು

ಕಾರ್ಯಕ್ರಮದಲ್ಲಿ ಅಶ್ವಿನಿ ಕೆಂಪೇಗೌಡ, , ರಾಘವೇಂದ್ರ ಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯ ವೈ.ಟಿ.ಮಹೇಶ್, ಎಸ್ಡಿಎಂಸಿ ಅಧ್ಯಕ್ಷ ನಾಗರಾಜು, ಮುಖ್ಯ ಶಿಕ್ಷಕಿ ಹೆಚ್.ವಿ.ಕಮಲ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಶಿಬಿರದ ಪ್ರಯೋಜನ ಪಡೆಯಲು ಸಲಹೆ

ತಿ.ನರಸೀಪುರ : ಕಣ್ಣಿನ ಆರೋಗ್ಯ ರಕ್ಷಣೆಗೆ ಜನರು ಉಚಿತ ಆರೋಗ್ಯ ಶಿಬಿರ ಗಳನ್ನು ಬಳಸಿಕೊಂಡು ವೈದ್ಯರ ಸಲಹೆ ಅನುಸರಿಸುವಂತೆ ರೋಟರಿಯ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ ಸಲಹೆ ಮಾಡಿದರು.

ತಾಲ್ಲೂಕಿನ ಬನ್ನೂರು ಪಟ್ಟಣದ ರೋಟರಿ ಸಂಸ್ಥೆ , ಕಾನ್ ಸಿಂಗ್ ಜೀ ರಾಜ್ ಪುರೋಹಿತ್, ಶ್ರೀ ಗೌರಿದೇವಿ , ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್ ಹಾಗೂ ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕಣ್ಣಿನ ದೃಷ್ಟಿ ದೋಷಗಳು ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಇಂತಹ ದೋಷಗಳನ್ನು ಸಕಾಲದಲ್ಲಿ ಸರಿ ಪಡಿಸಲು ಸಂಘ ಸಂಸ್ಥೆಗಳು ಉಚಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ಅಯೋಜಿಸುತ್ತಿವೆ. ತಪಾಸಣೆಗೆಒಳಗಾಗಿ ಅಗತ್ಯವುಳ್ಳವರು ಶಸ್ತ್ರಚಿಕಿತ್ಸೆ ಪಡೆದು ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳುವಂತೆ ಹೇಳಿದರು.

ಶಿಬಿರದಲ್ಲಿ ಕಣ್ಣಿನ ಪೊರೆ, ಗ್ಲಾಕೋಮ, ನೀರು ಸೋರುವಿಕೆ, ಕಣ್ಣಿನಲ್ಲಿ ಗೀಜು ಬರುವುದು, ಹತ್ತಿರ ಮತ್ತು ದೂರ ದೃಷ್ಠಿ ದೋಷ, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ವಾರೆ ಕಣ್ಣು, ರಾತ್ರಿ ಕುರುಡುತನಕ್ಕೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಣ್ಣಿನ ತಪಾಸಣೆಗೆ ಒಳಗಾದರು.
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಬೇಕಾದ ರೋಗಿಗಳನ್ನು ಆಯ್ಕೆ ಮಾಡಿ ಕೊಯಮತ್ತೂರು ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ವೇಳೆ ಡಾ.ಚಂದ್ರವದನ್, ಡಾ.ಸೂರ್ಯತೇಜ, ವಿಜಯಕುಮಾರ್, ದಿವ್ಯಶ್ರೀ, ನಾಗೇಶ್, ಕೆ.ರಾಜೇಶ ಕುಮಾರ್, ವನ್ಯ ರಾಜ್ ಪುರೋಹಿತ್, ವಿರಾಟ್ ರಾಜ್ ಪುರೋಹಿತ, ಸಂತೋಷ ಕುಮಾರಿ, ನಂಜುಂಡಸ್ವಾಮಿ, ಯಾಸೀನ್, ಮೂರ್ತಿ ಉಪಸ್ಥಿತರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.