ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಷೇಪಾರ್ಹ ಪದ ಬಳಕೆಗೆ ವಿಷಾದ: ಚಿಂತಕ ಪ. ಮಲ್ಲೇಶ್‌

ಬ್ರಾಹ್ಮಣರ ಕುರಿತಂತೆ ಅವಹೇಳನಕಾರಿ ಪದ ಬಳಕೆ; ಕುವೆಂಪುನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
Last Updated 18 ನವೆಂಬರ್ 2022, 7:35 IST
ಅಕ್ಷರ ಗಾತ್ರ

ಮೈಸೂರು: ‘ನಾನು ಆ ಪದಗಳನ್ನು ಬಳಸಬಾರದಿತ್ತು. ಈ ಬಗ್ಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದು, ಸರ್ಕಾರ, ನ್ಯಾಯಾಲಯವು ಈ ಬಗ್ಗೆ ಗಮನಹರಿಸಬೇಕು’ ಎಂದು ಚಿಂತಕ ಪ. ಮಲ್ಲೇಶ್‌ ಆಗ್ರಹಿಸಿದರು.

ಬ್ರಾಹ್ಮಣರ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದಕ್ಕೆ ಸಿಲುಕಿರುವ ಅವರು ಸ್ಪಷ್ಟನೆ ನೀಡಿದ್ದು, ‘ಮಾತಿನ ಭರದಲ್ಲಿ ಆಕ್ಷೇಪಾರ್ಹ ಪದ ಬಳಕೆಯಾಗಿದೆ. ವಿಷಾದ ವ್ಯಕ್ತಪಡಿಸಿದ್ದೇನೆ ಎಂದರೆ, ನಾನು ಮಾತನಾಡಿದ್ದು ತಪ್ಪಾಗಿದೆ ಎಂದರ್ಥ. ಆದರೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡ ಹೋರಾಟವನ್ನು ಮಾಡುತ್ತೇವೆ ಎಂದು ಹೊರಟಿರುವುದು ಸರಿಯಾದುದಲ್ಲ’ ಎಂದು ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ದೇಶದಲ್ಲಿ ಬ್ರಾಹ್ಮಣ ಸಮುದಾಯವು ಶಿಕ್ಷಣ ಪಡೆದ ಬುದ್ಧಿವಂತರಲ್ಲವೇ? ಎಲ್ಲ ಕ್ಷೇತ್ರಗಳಲ್ಲಿ ಉನ್ನತಿ ಸಾಧಿಸಿರುವ ಸಮಾಜವು ಕೇವಲ ನನ್ನ ಮಾತಿನಿಂದ ಕೆಟ್ಟುಹೋಗುತ್ತದೆ ಎಂದು ಹೇಳಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

‘ದೇವರ ಪರಿಕಲ್ಪನೆಯನ್ನೇ ಅವರು ಹುಟ್ಟುಹಾಕಿದ್ದಾರೆ. ದೇವರು ಎಲ್ಲಿದ್ದಾರೆ ಎಂಬುದನ್ನು ತೋರಿಸಲಿ? ನಾವು ದೇವರನ್ನೇ ಒಪ್ಪುವುದಿಲ್ಲ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರಿಗೂ ದೇವರ ಬಗ್ಗೆ ಗೊತ್ತಾಗಿಲ್ಲ. ದೇವರನ್ನು ಸೃಷ್ಟಿಮಾಡಿ, ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದಾರೆ. ಇದನ್ನು ಸಮಾಜವು ಅರ್ಥಮಾಡಿಕೊಳ್ಳಬೇಕು. ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಶೂದ್ರರು ತಿರುಗಿಬಿದ್ದರೆ, ಅವರು ಎಲ್ಲಿರುತ್ತಾರೆ? ನಾವು ತಿರುಗಿಬಿದ್ದಿಲ್ಲ. ಮಾನವೀಯತೆಯೇ ಮುಖ್ಯ’ ಎಂದು ಈ ವೇಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT