ಮೈಸೂರು: ‘ನಿಮಗಿಂತಲೂ ಸಿನಿಮೀಯವಾಗಿ ಕಳ್ಳತನಗಳನ್ನು ನಾವು ಮಾಡುತ್ತೇವೆ.. ನೀವು ಸೋಲಿಸಲಾಗದ, ಕೊಲ್ಲಲಾಗದ ಸೊಳ್ಳೆಗಳನ್ನು ಭಕ್ಷಿಸುತ್ತೇವೆ.. 800 ದಶಲಕ್ಷ ಟನ್ ಕೀಟಗಳನ್ನು ತಿಂದುಂಡು ಪರಿಸರವನ್ನು ಸರಿದೂಗಿಸುತ್ತೇವೆ..’

ನಗರದ ಹಾರ್ಡ್ವಿಕ್ ಶಾಲೆ ಆವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಭಾನುವಾರ ನಡೆದ ‘ಜೇಡಗಳು ಏಕೆ ಮುಖ್ಯ?’ ಎಂದು ‘ಸಾಲಿಗ’ ತಂಡದ ಡಾ.ಎಪಿಸಿ ಅಭಿಜಿತ್ ಅವರು ಜೇಡಗಳ ಕಿರುನೋಟವನ್ನು ಚಿಣ್ಣರಿಗೆ ತೆರೆದಿಟ್ಟ ಬಗೆ ಇದು..

‘ಸೊಳ್ಳೆಗಳನ್ನು ಮನುಷ್ಯ ಸೋಲಿಸಲು ಆಗಿಲ್ಲ. ಅವುಗಳಿಂದ ಹರಡುವ ಮಲೇರಿಯಾ, ಡೆಂಗಿ, ಝಿಕಾ, ಚಿಕೂನ್ಗುನ್ಯ, ಹಳದಿ ಜ್ವರ ಮೊದಲಾದ ಸಾಂಕ್ರಮಿಕ ರೋಗಗಳ ನಿಯಂತ್ರಣಕ್ಕೆ ವಿಶ್ವವು ಕೋಟ್ಯಂತರ ಹಣ ಖರ್ಚು ಮಾಡುತ್ತದೆ. ವೆಕ್ಟರ್ ಬ್ರೋನ್ ರೋಗಗಳಿಂದ ವಾರ್ಷಿಕ 7 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ಜೇಡಗಳು ಈ ಸೊಳ್ಳೆಗಳನ್ನು ಭಕ್ಷಿಸಿ, ಮಾನವನಿಗೆ ಸಹಕಾರಿ ಆಗಿವೆ’ ಎಂದು ಅಚ್ಚರಿಗೊಳಿಸಿದರು.

‘ಮನುಷ್ಯರು ಸೊಳ್ಳೆಗಳಿಗೆ ಹೆದರಿದ್ದರಿಂದಲೇ ಅಮೆಜಾನ್, ಕಾಂಗೊ, ಬೋರ್ನಿಯೋದಂಥ ಮಳೆಕಾಡುಗಳು ಉಳಿದಿವೆ. ಆದರೆ, ಸೊಳ್ಳೆಗಳ ನಿಯಂತ್ರಣದಲ್ಲಿ ಜೇಡಗಳು ಮುಂದಿವೆ. ಎರಡು ಬಾಲದ ಜೇಡ ಸೇರಿದಂತೆ ವಿವಿಧ ಜಾತಿಯ ಪ್ರತಿ ಜೇಡವು ನಿತ್ಯ 4 ಸೊಳ್ಳೆ ತಿನ್ನುತ್ತದೆ. ನೀವು ಇರುವ ಪ್ರತಿ ಚದರ ಮೀಟರ್ನಲ್ಲಿ 131ಕ್ಕೂ ಹೆಚ್ಚು ಜೇಡಗಳು ಇರುತ್ತವೆ. ಎಷ್ಟು ಕೋಟಿ ಕೀಟಗಳನ್ನು ಇವು ತಿನ್ನಬಹುದು ಲೆಕ್ಕ ಹಾಕಿ’ ಎಂದು ಪ್ರಶ್ನಿಸಿದರು.

‘ಎಲ್ಲ ಜೇಡಗಳು ಬಲೆಯನ್ನು ಹೆಣೆಯುವುದಿಲ್ಲ. ಮನುಷ್ಯರಲ್ಲಿ ಇರುವಂತೆಯೇ ಕ್ಲೆಕ್ಟೋ ಪ್ಯಾರಸೈಟ್ ಜೇಡಗಳಿರುತ್ತವೆ. ಬೇರೆ ಜೇಡಗಳು ಹೆಣೆದ ಬಲೆಗೆ ಸಿಲುಕಿದ ಕೀಟಗಳನ್ನು ಭಕ್ಷಿಸುವ ಅವು ಸಿನಿಮೀಯ ಮಾದರಿಯ ಕಳ್ಳತನಗಳನ್ನು ನಡೆಸುತ್ತವೆ. ಇಡೀ ಜಗತ್ತಿನಲ್ಲಿ ಶೇ 30ರಷ್ಟು ಜೇಡಗಳು ಮಾತ್ರವೇ ಬಲೆ ಹೆಣೆಯುತ್ತವೆ’ ಎಂದು ಚಕಿತಗೊಳಿಸಿದರು.

‘ಒಂದು ಮರದಲ್ಲಿ 500ಕ್ಕೂ ಹೆಚ್ಚು ಚಿಕೂನ್ ಜೇಡಗಳಿದ್ದು, ಬಾಣಂತನವನ್ನು ನಿರ್ದಿಷ್ಟ ಮರದಲ್ಲಿಯೇ ಮಾಡಿ ಹೋಗುತ್ತವೆ. ಇವು ನೀರುಳ್ಳಿ ಮಾದರಿಯಲ್ಲಿ ಇರುತ್ತವೆ. ಕೆಲ ಜೇಡಗಳು ತಮ್ಮ ಪ್ರಭೇದವನ್ನೇ ಭಕ್ಷಿಸುತ್ತವೆ’ ಎಂದರು.

‘ಹಾರಲು, ಆಹಾರ ಸಂಗ್ರಹಕ್ಕೆ, ಮೊಟ್ಟೆ ಇಡಲು ವಿವಿಧ ಮಾದರಿಯಲ್ಲಿ ಬಲೆ ಹೆಣೆಯುವ ಜೇಡಗಳ ನೂಲು ಉಕ್ಕಿಗಿಂತ ಗಟ್ಟಿ. ಬೋಯಿಂಗ್ ವಿಮಾನವನ್ನು ಹಿಡಿದಿರುವ ಶಕ್ತಿ ಜೇಡರ ಬಲೆಗಿದೆ. ಅದರಿಂದ ಗುಂಡು ನಿರೋಧಕ ಜಾಕೆಟ್ಗಳನ್ನು ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ರಂಗಕರ್ಮಿ ಪ್ರಸನ್ನ, ಸಂಯೋಜಕ ಚೆಲುವರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.