ನಂಜನಗೂಡು: ಶ್ರೀನಿವಾಸ ಪ್ರಸಾದ್ ಅವರ ತತ್ವ, ಆದರ್ಶ, ವಿಚಾರಧಾರೆಗಳು ರಾಜಕೀಯ ಕ್ಷೇತ್ರದಲ್ಲಿ ಶಾಶ್ವತವಾಗಿ ಉಳಿಸಲು ಅವರ ಅಭಿಮಾನಿಗಳಿಂದ ಮಾತ್ರ ಸಾಧ್ಯ, ಶೋಷಿತರ ಪರವಾದ ಅವರ ಬದ್ಧತೆಯನ್ನು ಇತರರಲ್ಲಿ ಕಾಣಲು ಸಾಧ್ಯವಾಗುವುದಿಲ್ಲ’ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಹೇಳಿದರು.

ನಗರದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಶ್ರೀನಿವಾಸ ಪ್ರಸಾದ್ ಅಭಿಮಾನಿಗಳು ಬುಧವಾರ ಆಯೋಜಿಸಿದ್ದ ʼಸ್ವಾಭಿಮಾನಿ ಸಂಪದʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜಕೀಯ ಜೀವನದಲ್ಲಿ ಎಂದೂ ಜಾತಿವಾದಿಯಾಗಿ ಗುರುತಿಸಿಕೊಳ್ಳದ ಪ್ರಸಾದ್, ಸಮಾಜದ ಎಲ್ಲಾ ವರ್ಗದ ಜನರನ್ನು ಒಳಗೊಂಡು ರಾಜಕೀಯ ಜೀವನ ರೂಪಿಸಿಕೊಂಡಿದ್ದರು, ಬದನವಾಳು ಗಲಭೆ ಸಂದರ್ಭ ನಾನು ಗೃಹಸಚಿವನಾಗಿದ್ದೆ, ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಶ್ರೀನಿವಾಸ ಪ್ರಸಾದ್ ಅವರುಗಳ ಸಹಕಾರ, ಮಾರ್ಗದರ್ಶನಗಳಿಂದ ಗಲಭೆ ನಿಯಂತ್ರಿಸಲು ಸಾಧ್ಯವಾಯಿತು’ ಎಂದು ಸ್ಮರಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ‘ವಿ.ಶ್ರೀನಿವಾಸ ಪ್ರಸಾದ್ ಅವರು ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹೊಂದಿದ್ದವರು, ರಾಜಕೀಯ ವಿರೋಧಿಗಳು ಷಡ್ಯಂತ್ರ ರಚಿಸಿ ಅವರನ್ನು ಅವಕಾಶವಂಚಿತರನ್ನಾಗಿ ಮಾಡಿದರು. ಜೀವಿತಾವಧಿಯುದ್ದಕ್ಕೂ ಸಮಾಜದ ಎಲ್ಲಾ ವರ್ಗದ ಜನರ ಹಿತಾಸಕ್ತಿಗೆ ಶ್ರಮಿಸಿದ ಶ್ರೀನಿವಾಸ ಪ್ರಸಾದ್ ಅವರ ರಾಜಕೀಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಅವರ ಕುಟುಂಬದ ಜೊತೆಗೆ ಸದಾಕಾಲ ಇರುತ್ತೇನೆ, ಅವರ ಅಳಿಯ ಹರ್ಷವರ್ಧನ್ಗೆ ರಾಜಕೀಯ ಶಕ್ತಿ ಲಭ್ಯವಾಗುವಂತೆ ಪ್ರಸಾದ್ ಅವರ ಅಭಿಮಾನಿಗಳು ನೋಡಿಕೊಳ್ಳಬೇಕಿದೆ’ ಎಂದು ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ‘ಶ್ರೀನಿವಾಸ ಪ್ರಸಾದ್ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಹೊಂದಿದ್ದ ನಾಯಕತ್ವ ಸಾಮರ್ಥ್ಯವನ್ನು ಗುರುತಿಸಿ ರಾಜಕೀಯ ಪಕ್ಷಗಳವರು ಕರೆತಂದು ಚುನಾವಣೆ ನಿಲ್ಲಿಸಿದ್ದರು. ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ಶ್ರೀನಿವಾಸ ಪ್ರಸಾದ್ ತಮಗೆ ದೊರೆತ ಅಧಿಕಾರ ಬಳಸಿಕೊಂಡು ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ ತಾವು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಮು ಸೌಹಾರ್ದ ಕಾಪಾಡಿಕೊಳ್ಳುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ದಿಟ್ಟತನದಿಂದ ವಿರೋಧ ವ್ಯಕ್ತಪಡಿಸುವ ಮೂಲಕ ಆತ್ಮಗೌರವ ಕಾಪಾಡಿಕೊಂಡಿದ್ದರು’ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್, ಸಾಹಿತಿ ಕಾಳೇಗೌಡ ನಾಗಾವಾರ, ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕುಂಬರಳ್ಳಿ ಸುಬ್ಬಣ್ಣ, ತಾಲ್ಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ಮುಖಂಡರಾದ ಸಿ.ಚಿಕ್ಕರಂಗನಾಯಕ, ಸಿಂಧುವಳ್ಳಿ ಕೆಂಪಣ್ಣ, ಬಿ.ಎಸ್.ಮಹದೇವಪ್ಪ, ಬದನವಾಳು ರಾಮು, ಎಚ್.ಎಸ್. ಮಹದೇವಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ಧರಾಜು, ದೇವ, ಮಹದೇವಪ್ರಸಾದ್, ಇಟ್ಟಿಗೆಗೂಡು ಕೃಷ್ಣಪ್ಪ, ಡಾ.ಶೈಲಾ ಬಾಲರಾಜ್, ಹೆಮ್ಮರಗಾಲ ಸೋಮಣ್ಣ, ಬಾಲಚಂದ್ರ ಉಪಸ್ಥಿತರಿದ್ದರು.

ನಂಜನಗೂಡಿನಲ್ಲಿ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿಗಳು ಆಯೋಜಿಸಿದ್ದ ಸ್ವಾಭಿಮಾನಿ ಸಂಪದ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಪಿ.ಜಿ.ಆರ್.ಸಿಂದ್ಯಾ ನೆರವೇರಿಸಿದರು.

ನಂಜನಗೂಡಿನಲ್ಲಿ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿಗಳು ಆಯೋಜಿಸಿದ್ದ ಸ್ವಾಭಿಮಾನಿ ಸಂಪದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಮೈಸೂರಿನ ಹೆಸರಾಂತ ಶಿಕ್ಷಣ ಸಂಸ್ಥೆಗೆ ಶ್ರೀನಿವಾಸ ಪ್ರಸಾದ್ ಅವರ ಹೆಸರನ್ನಿಡಬೇಕು. ಆ ಮೂಲಕ ಸದಾ ಕಾಲಕ್ಕೂ ಅವರ ಹೆಸರು ಜನಮಾನಸದಲ್ಲಿ ಉಳಿಯುವಂತೆ ಮಾಡಬೇಕು
ಪಿ.ಜಿ.ಆರ್.ಸಿಂಧ್ಯ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.