ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ಶ್ರೀನಿವಾಸ ಪ್ರಸಾದ್ ಜನ್ಮದಿನಾಚರಣೆ ಆ. 6ಕ್ಕೆ

Published : 3 ಆಗಸ್ಟ್ 2024, 14:20 IST
Last Updated : 3 ಆಗಸ್ಟ್ 2024, 14:20 IST
ಫಾಲೋ ಮಾಡಿ
Comments

ಮೈಸೂರು: ನಗರದ ಮಾನಸಗಂಗೋತ್ರಿಯ ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವಿಶ್ವಜ್ಞಾನಿ ಸಭಾಂಗಣದಲ್ಲಿ ಆ.6ರಂದು ಬೆಳಿಗ್ಗೆ 10.30ಕ್ಕೆ ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ 77ನೇ ಜನ್ಮದಿನಾಚರಣೆ ಹಾಗೂ ‘ವಿ.ಶ್ರೀನಿವಾಸ ಪ್ರಸಾದ್‌ ವ್ಯಕ್ತಿತ್ವ ಮತ್ತು ಹೋರಾಟ’ ವಿಚಾರ ಮಂಥನ ಆಯೋಜಿಸಲಾಗಿದೆ’ ಎಂದು ಸಮಾನತೆ– ಸ್ವಾಭಿಮಾನ– ಸ್ವಾವಲಂಬನೆ ಪ್ರತಿಷ್ಠಾನದ ಕಾರ್ಯದರ್ಶಿ ಮುಳ್ಳೂರು ನಂಜುಂಡಸ್ವಾಮಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ‘ಪ್ರತಿಷ್ಠಾನದೊಂದಿಗೆ ಮೈಸೂರು ವಿಶ್ವವಿದ್ಯಾಲಯ, ಬಿ.ಆರ್.ಅಂಬೇಡ್ಕರ್ ಎಜುಕೇಷನಲ್ ಮತ್ತು ಕಲ್ಚರಲ್ ಟ್ರಸ್ಟ್ ಹಾಗೂ ಸಮಾನತೆ ಪ್ರಕಾಶನ ಸಹಯೋಗವಿದ್ದು, ವಿಶ್ವ ಮೈತ್ರಿ ಬುದ್ಧ ವಿಹಾರದ ಕಲ್ಯಾಣಸಿರಿ ಭಂತೇಜಿ ಸಾನ್ನಿಧ್ಯದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು’ ಎಂದರು.

‘ವಿ.ಶ್ರೀನಿವಾಸ ಪ್ರಸಾದ್ ವ್ಯಕ್ತಿತ್ವ ಕುರಿತು ‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಹೋರಾಟದ ನೆಲೆಗಳ ಕುರಿತು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್‌ ವಿಚಾರ ಮಂಡಿಸುವರು. ಕಾಂಗ್ರೆಸ್‌ ಮುಖಂಡ ಕೆ.ಆರ್‌.ರಮೇಶ್‌ ಕುಮಾರ್‌ ಅಧ್ಯಕ್ಷತೆ ವಹಿಸುವರು. ‘ವಿ‌.ಶ್ರೀನಿವಾಸ ಪ್ರಸಾದ್ ಚಿಂತನೆಗಳು’ ಎಂಬ ಕೃತಿ ಬಿಡುಗಡೆಯೂ ನಡೆಯಲಿದೆ’ ಎಂದು ಹೇಳಿದರು.

ಪ್ರತಿಷ್ಠಾನದ ಟ್ರಸ್ಟಿ ಭರತ್‌ ರಾಮಸ್ವಾಮಿ ಮಾತನಾಡಿ, ‘ಅಂದು ಬೆಳಿಗ್ಗೆ 9ಕ್ಕೆ ಹೂಟಗಳ್ಳಿಯ ಒಡನಾಡಿ ಸಂಸ್ಥೆಯಲ್ಲಿಯೂ ಟ್ರಸ್ಟ್‌ ಸದಸ್ಯರು ಜನ್ಮದಿನ ಆಚರಿಸಲಿದ್ದು, ಶ್ರೀನಿವಾಸ ಪ್ರಸಾದ್‌ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ’ ಎಂದರು.

ಟ್ರಸ್ಟಿಗಳಾದ ಶಾಂತರಾಮ ಶೆಟ್ಟಿ, ಡಿ.ವೆಂಕಟರಾಜು, ಸಿ.ಜಿ.ಶಿವಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT