ನಂಜನಗೂಡು: ನಗರದ ಕಾರ್ಮೆಲ್ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿನಿ ಪಿ.ಸಾಯಿ ದೀಕ್ಷಿತ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿದ್ದಾಳೆ.

ಶೇ 71.26 ಫಲಿತಾಂಶ ಪಡೆದುಕೊಳ್ಳುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೂಲಕ ಜಿಲ್ಲೆಯಲ್ಲಿ ತಾಲ್ಲೂಕು 3ನೇ ಸ್ಥಾನ ಪಡೆದುಕೊಂಡಿದೆ. 2,348 ಬಾಲಕರು, 2,315 ಬಾಲಕಿಯರೂ ಸೇರಿದಂತೆ ಒಟ್ಟು 4,663 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 1,427 ಬಾಲಕರು ಹಾಗೂ 1,896 ಬಾಲಕಿಯರು ಸೇರಿದಂತೆ ಒಟ್ಟು 3,323 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 921 ಬಾಲಕರು, 419 ಬಾಲಕಿಯರು ಸೇರಿದಂತೆ ಒಟ್ಟು 1340 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಯ 22 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದರೆ, 45 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಹಾಗೂ 48 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿನಿ ಪಿ.ಸಾಯಿ ದೀಕ್ಷಿತಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ವಿದ್ಯಾರ್ಥಿನಿ ಪಿ.ಸಾಯಿ ದೀಕ್ಷಿತ ಮಾತನಾಡಿ, ಉತ್ತಮ ಮಾರ್ಗದರ್ಶನ ಹಾಗೂ ಸತತ ಅಭ್ಯಾಸದಿಂದ ಅಂಕಗಳಿಸಲು ನೆರವಾಗಿದ್ದು, ಭವಿಷ್ಯದಲ್ಲಿ ಎಜಿನಿಯರ್ ಆಗುವ ಆಸೆಯಿದೆ ಎಂದುದರು.

ಸಿಟಿಜೆನ್ ಶಾಲೆ ಉತ್ತಮ ಸಾಧನೆ ನಗರದ ಸಿಟಿಜೆನ್ ಆಂಗ್ಲ ಮಾಧ್ಯಮ ಶಾಲೆ ಉತ್ತಮ ಸಾಧನೆ ಮಾಡಿದ್ದು ವಿದ್ಯಾರ್ಥಿನಿ ಎಸ್.ಸ್ಪೂರ್ತಿ 621 ಅಂಕ ಪಡೆದುಕೊಳ್ಳುವ ಮೂಲಕ ಶಾಲೆಗೆ ಮೊದಲಿಗಳಾಗಿ ಹೊರ ಹೊಮ್ಮಿದ್ದಾಳೆ. ಕನ್ನಡದಲ್ಲಿ 125 ಇಂಗ್ಲೀಷ್ 100 ಹಿಂದಿ 96 ಗಣಿತ 100ವಿಜ್ಞಾನ 100 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕ ಪಡೆದಿದ್ದಾಳೆ. ಇದೆ ಶಾಲೆಯ ಚಿನ್ಮಯಿ ಬಿ 614 ಅಂಕ ಪಡೆದುಕೊಂಡು ದ್ವಿತೀಯ ಸ್ಥಾನ ಪಡೆದಿದ್ದರೆ ಧನುಶ್ರೀ ಕೆ.ಎನ್ 613 ಅಂಕ ಪಡೆದುಕೊಂಡು ತೃತೀಯ ಸ್ಥಾನ ಪಡೆದಿದ್ದಾಳೆ. ಶಾಲೆಯ 6 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದು 46 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 77 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.