ಶುಕ್ರವಾರ, ಫೆಬ್ರವರಿ 3, 2023
18 °C

ರಂಗ ಸಂಗೀತ ನಿರ್ದೇಶಕ ಶ್ರೀನಿವಾಸ ಭಟ್‌ (ಚೀನಿ) ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ರಂಗ ಸಂಗೀತ ನಿರ್ದೇಶಕ ಶ್ರೀನಿವಾಸ್‌ ಭಟ್‌ (63) ಬುಧವಾರ ರಾತ್ರಿ ಹೃದಯಾಘಾತದಿಂದ ಇಲ್ಲಿನ ವಿವೇಕಾನಂದನಗರದ ನಿವಾಸದಲ್ಲಿ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಇದ್ದಾರೆ. ರಂಗಾಯಣದ ಸಂಗೀತ ನಿರ್ದೇಶಕರಾಗಿ 30 ವರ್ಷ ಸೇವೆ ಸಲ್ಲಿಸಿದ್ದ ಅವರು, ನೂರಾರು ನಾಟಕಗಳಿಗೆ ಸಂಗೀತ ನೀಡಿದ್ದರು.

ರಂಗಭೀಷ್ಮ ಬಿ.ವಿ.ಕಾರಂತರ ಮೆಚ್ಚಿನ ಶಿಷ್ಯರಾಗಿದ್ದ ಅವರು ‘ಚೀನಿ’ ಎಂದೇ ರಂಗವಲ ಯದಲ್ಲಿ ಹೆಸರಾ
ಗಿದ್ದರು. ‘ಕಾರಂತ ಸಂಗೀತ’ ಮಾದರಿ ಯನ್ನು ರಂಗಭೂಮಿಯಲ್ಲಿ ಮುಂದುವರಿಸಿದ್ದರು.

ರಂಗಾಯಣಕ್ಕೆ ಬರುವ ಮುಂಚೆ ಉಡುಪಿ ರಥಬೀದಿ ಗೆಳೆಯರ ನಾಟಕ ಗಳಿಗೆ ರಂಗ ಸಂಗೀತ ನೀಡಿದ್ದರು.

ಹೆಗ್ಗೋಡಿನ ನೀನಾಸಂನಲ್ಲೂ ಕೆಲಸ ಮಾಡಿದ್ದರು. ನಾಡಿನ ವಿವಿಧ ಹವ್ಯಾಸಿ ರಂಗ ತಂಡಗಳ ನಾಟಕಗಳಿಗೂ ಸಂಗೀತ ನೀಡಿದ್ದರು. ಗಿಟಾರ್, ಹಾರ್ಮೊನಿಯಂ ಹಾಗೂ ತಾಳವಾದ್ಯಗಳಲ್ಲೂ ಪರಿಣತರಾಗಿದ್ದರು. ಅಂತ್ಯಕ್ರಿಯೆ ಮೈಸೂರಿನಲ್ಲಿ ಗುರುವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು