ಸುತ್ತೂರು (ಮೈಸೂರು ಜಿಲ್ಲೆ): ಇಲ್ಲಿ ಸುತ್ತೂರು ಮಠದಿಂದ ನಡೆದಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಕಪಿನಾ ನದಿಯಲ್ಲಿ ಜರುಗಿದ ತೆಪ್ಪೋತ್ಸವ ಸಾರ್ವಜನಿರನ್ನು ಆಕರ್ಷಿಸಿತು.

ಈ ವರ್ಷದ ಜಾತ್ರೆಯಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ತೆಪ್ಪ ನೆರೆದಿದ್ದವರ ಗಮನಸೆಳೆಯಿತು. ತೆಪ್ಪದ ಸುತ್ತಲೂ 16 ನಂದಿಗಳನ್ನು ಸ್ಥಾಪಿಸಿದ್ದ ಆಕರ್ಷಕ ವಿನ್ಯಾಸದ 8 ಕಂಬಗಳು ಹಾಗೂ ಚಿತ್ರಗಳನ್ನು ಒಳಗೊಂಡ ಭವ್ಯವಾದ ಮಂಟಪವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮೋಟಾರ್ಚಾಲಿತ ಈ ತೆಪ್ಪಕ್ಕೆ ವಿಶೇಷವಾದ ದೀಪಾಲಂಕಾರ ಮಾಡಲಾಗಿತ್ತು. ಬಾಣಬಿರುಸುಗಳ ಹಿನ್ನೆಲೆಯಲ್ಲಿ ತೆಪ್ಪೋತ್ಸವವು ನೋಡುಗರ ಕಣ್ಮನಸೆಳೆಯಿತು.

ತೆಪ್ಪೋತ್ಸವ ಜೊತೆಗೆ ಕಪಿಲಾ ಆರತಿಯೂ ನಡೆಯಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಅನಿಲ್ ಚಿಕ್ಕಮಾದು, ಎಂ.ಆರ್. ಮಂಜುನಾಥ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.