ಮೈಸೂರು: ಕೇಂದ್ರ ಸರ್ಕಾರವು ನಡೆಸುವ ‘ಸ್ವಚ್ಛ ಸರ್ವೇಕ್ಷಣೆ’ಯಲ್ಲಿ ಮೈಸೂರು ಮಹಾನಗರಪಾಲಿಕೆಯು ಪ್ರಶಸ್ತಿ ಹೊಸ್ತಿಲಲ್ಲಿದೆ.

ಸಾಂಸ್ಕೃತಿಕ ನಗರಿಯು ಯಾವ ಪ್ರಶಸ್ತಿ ಗಳಿಸಿದೆ ಎಂಬುದು ಜುಲೈ 17 (ಗುರುವಾರ) ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಕಟಗೊಳ್ಳಲಿದೆ. ಸರ್ಕಾರದ ಆಹ್ವಾನದ ಮೇರೆಗೆ ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ನವದೆಹಲಿಗೆ ತೆರಳಿದ್ದಾರೆ. ಮೈಸೂರು ಮತ್ತೊಮ್ಮೆ ದೇಶದಾದ್ಯಂತ ಹೆಸರು ಗಳಿಸುವ ಸಾಧ್ಯತೆ ದಟ್ಟವಾಗಿದೆ.

‘ನಿಮ್ಮ ಸ್ಥಳೀಯ ಸಂಸ್ಥೆಯು ಪ್ರಶಸ್ತಿಯ ಪಟ್ಟಿಯಲ್ಲಿದ್ದು, ಟಾಪ್ನಲ್ಲಿದ್ದೀರಿ ಬನ್ನಿ ಎಂದು ಆಹ್ವಾನಿಸಿದ್ದಾರೆ. ಸ್ವಚ್ಛ ಲೀಗ್ನಲ್ಲಿ ಸೇರಿಸಿದ್ದಾರೆ. ಯಾವ್ಯಾವ ನಗರಗಳು ಟಾಪ್ –3ನಲ್ಲಿ ಇರಲಿವೆ ಎಂಬುದು ಗುರುವಾರ ತಿಳಿದುಬರಲಿದೆ. 3ರಿಂದ 10 ಲಕ್ಷ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಪ್ರಶಸ್ತಿಯ ಆಶಾಭಾವದಲ್ಲಿದ್ದೇನೆ. ನಗರ ಜನರಿಗೆ ಖುಷಿಯ ಸುದ್ದಿ ದೊರೆಯುವ ನಿರೀಕ್ಷೆ ಇದೆ’ ಎಂದು ಆಯುಕ್ತ ಶೇಖ್ ತನ್ವೀರ್ ಆಸೀಫ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಚ್ಛ ನಗರಿ ಎಂಬ ಪಟ್ಟವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಮಹಾನಗರಪಾಲಿಕೆಯಿಂದ ಈ ಬಾರಿಯೂ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಅದಕ್ಕೆ ಪೌರಕಾರ್ಮಿಕರು ಶ್ರಮಿಸಿದ್ದಾರೆ. ಕಸವನ್ನು ವಿಂಗಡಿಸಿ ಕೊಡುವ ಮೂಲಕ ಜನರೂ ಸಹಕಾರ ನೀಡಿದ್ದಾರೆ. ಇದೆಲ್ಲದರ ಫಲ ದೊರೆಯುವ ಲಕ್ಷಣ ಗೋಚರಿಸುತ್ತಿದೆ.

ಕಳವಳ ಮೂಡಿಸಿತ್ತು: 2023ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 27ನೇ ಸ್ಥಾನಕ್ಕೆ ಕುಸಿದಿತ್ತು. ಇದು, ಮಹಾನಗರಪಾಲಿಕೆಗೆ ಆಘಾತವನ್ನು ಉಂಟು ಮಾಡಿತ್ತು. ಸ್ವಚ್ಛತೆಯ ವಿಷಯದಲ್ಲಿ ದೇಶದ ಅಗ್ರ ಐದು ನಗರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಮೈಸೂರು ತೀವ್ರ ಕುಸಿತ ಕಂಡಿದ್ದು ಕಳವಳಕ್ಕೆ ಕಾರಣವಾಗಿತ್ತು.

ಈ ಬಾರಿ ಮೂರು ‘ಆರ್’ (ರೆಡ್ಯೂಸ್, ರಿಯೂಸ್ ಹಾಗೂ ರೀಸೈಕಲ್) ಥೀಮ್ನಲ್ಲಿ ಸರ್ವೇಕ್ಷಣೆ ನಡೆಸಲಾಗಿದೆ. ಒಳಚರಂಡಿ ವ್ಯವಸ್ಥೆ, ನಗರದ ಸೌಂದರ್ಯೀಕರಣವನ್ನು ಪರಿಗಣಿಸಲಾಗಿದೆ. ಭಾಗಿದಾರರ ಸಭೆ, ಮಾಜಿ ಮೇಯರ್ಗಳ ಸಭೆ, ಎನ್ಜಿಒ, ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಸಭೆಗಳನ್ನು ನಡೆಸಿ ಸಲಹೆ ಕೇಳಿ ಅದನ್ನು ಅನುಷ್ಠಾನಕ್ಕೆ ತಂದಿದ್ದೇವೆ. ವಲಯಕ್ಕೊಬ್ಬ ನೋಡಲ್ ಅಧಿಕಾರಿ ನೇಮಿಸಿ ಕಾರ್ಯಹಂಚಿಕೆ ಮಾಡಲಾಗಿದೆ. ಮನೆ ಮನೆ ತ್ಯಾಜ್ಯ ಸಂಗ್ರಹಣೆ ವ್ಯವಸ್ಥಿತವಾಗಿ ನಡೆಯುತ್ತಿದೆ. ತ್ಯಾಜ್ಯ ಸಾಗಣೆ, ಸಂಸ್ಕರಣೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಮತ್ತೆ ಅಗ್ರಸ್ಥಾನ ಪಡೆಯಲು 2024ನೇ ಸಾಲಿನಲ್ಲಿ ನಡೆಸಿದ ಪ್ರಯತ್ನಗಳು ಎಷ್ಟರ ಮಟ್ಟಿಗೆ ಫಲ ಕೊಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮೊದಲ ಸ್ವಚ್ಛ ಸರ್ವೇಕ್ಷಣೆಯನ್ನು 2016ರಲ್ಲಿ ನಡೆಸಲಾಯಿತು. ಆಗ 73 ನಗರಗಳನ್ನು ಮೌಲ್ಯಮಾಪನ ಮಾಡಲಾಯಿತು. ಆಗ, ಮೈಸೂರು ದೇಶದಲ್ಲಿಯೇ ಮೊದಲನೇ ಸ್ಥಾನ ಪಡೆದಿತ್ತು. ನಂತರದ ವರ್ಷಗಳಲ್ಲಿ ಸಮೀಕ್ಷೆಗೆ ಒಳಗಾಗುವ ನಗರ ಸ್ಥಳೀಯ ಸಂಸ್ಥೆಗಳ ಸಂಖ್ಯೆ ಹೆಚ್ಚಾಯಿತು. 2023ರಲ್ಲಿ 4,477 ನಗರಗಳನ್ನು ಮೌಲ್ಯಮಾಪನ ಮಾಡಲಾಗಿತ್ತು. ಆಗ, ಮೈಸೂರಿನ ಸ್ಥಾನ ಕುಸಿದಿತ್ತು.

ವೀಕ್ಷಣೆಗೆ ಮೂರು ತಂಡಗಳು ಬಂದಿದ್ದವು. ಸಾರ್ವಜನಿಕರ ಸಹಕಾರದಿಂದ ಪ್ರಶಸ್ತಿ ಸನಿಹ ಬಂದಿದ್ದೇವೆ. ಮತ್ತಷ್ಟು ಟಾಪ್ಗೆ ಹೋಗಲು ಈಗಿನಿಂದಲೇ ಕ್ರಮ ಕೈಗೊಳ್ಳಲಾಗುವುದು
ಶೇಖ್ ತನ್ವೀರ್ ಆಸೀಫ್, ಆಯುಕ್ತ ಮಹಾನಗರಪಾಲಿಕೆ ಮೈಸೂರು

ಏನೇನು ಮಾಡಲಾಗಿದೆ?

ನಗರದಲ್ಲಿ ನಿತ್ಯವೂ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಗೋಡೆ ಬರಹ ಮೊದಲಾದವುಗಳ ಮೂಲಕ ಜಾಗೃತಿ ಕಾರ್ಯಕ್ರಮಗಳೂ ನಡೆದಿವೆ. ಸಾರ್ವಜನಿಕ ಶೌಚಾಲಯಗಳಿದ್ದರೂ ಬಹಳಷ್ಟು ಕಡೆಗಳಲ್ಲಿ ಬಳಸಲಾಗದ ಸ್ಥಿತಿ ಇತ್ತು. ದುರಸ್ತಿ ಮಾಡುವ ಮೂಲಕ ಬಳಕೆಗೆ ಲಭ್ಯವಾಗುವಂತೆ ಮಾಡಲಾಗಿದೆ. ಸೂಯೇಜ್ಫಾರಂನಲ್ಲಿರುವ ಕಸದ ಗುಡ್ಡೆ ಕರಗುತ್ತಿದೆ. ಅದನ್ನು ನಿರ್ವಹಿಸಲಾಗುತ್ತಿದೆ. ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಡೆಬ್ರಿಸ್ ಹಾಗೂ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆಗೆ ಟೆಂಡರ್ ಕರೆದು ಕಾರ್ಯದೇಶ ನೀಡಲಾಗಿದೆ. ಇದೆಲ್ಲವನ್ನೂ ಸ್ವಚ್ಛ ಸರ್ವೇಕ್ಷಣಾ ತಂಡ ಗಮನಿಸಿವೆ. ಮೂರು ವಿಭಾಗಗಳಲ್ಲಿ ಪರಿಶೀಲನೆ ನಡೆಸುವುದಕ್ಕಾಗಿ ತಂಡಗಳು ನಗರದಲ್ಲಿ ಪ್ರವಾಸ ಕೈಗೊಂಡಿದ್ದವು ಎಂದು ಅಧಿಕಾರಿಗಳು ತಿಳಿಸಿದರು. ಘನತ್ಯಾಜ್ಯ ನಿರ್ವಹಣೆಯನ್ನು ಪ್ರಮುಖವಾಗಿ ಕೇಂದ್ರೀಕರಿಸಿ ಸ್ವಚ್ಛ ಸರ್ವೇಕ್ಷಣೆಯ ರ್ಯಾಂಕಿಂಗ್ ನಿರ್ಧಾರ ಆಗುತ್ತದೆ. ತ್ಯಾಜ್ಯ ಉತ್ಪಾದನೆ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆಗೆ ಸಂಬಂಧಿಸಿದ ದಾಖಲೆಗಳನ್ನು ತಂಡ ವಿಶ್ಲೇಷಿಸಿದೆ ವೀಕ್ಷಿಸಿದೆ. ನೀರು ಮತ್ತು ನೈರ್ಮಲ್ಯದ ವಿಷಯದಲ್ಲಿ ಮೈಸೂರು ಹೇಗಿದೆ ಮತ್ತು ಅದು ಕಸ ಮುಕ್ತವಾಗಿದೆಯೇ ಎಂಬುದನ್ನು ಗಮನಿಸಿದೆ. 12500 ಅಂಕಗಳಿಗೆ ಮೈಸೂರು ಎಷ್ಟು ಅಂಕಗಳನ್ನು ಪಡೆದಿದೆ ಎಂಬುದು ತಿಳಿದುಬರಬೇಕಿದೆ.

ಕುಸಿತ ಕಂಡಿತ್ತು...

ರಸ್ತೆ ಬದಿಗಳಲ್ಲಿ ಕಸ ಎಸೆಯುವ ಮತ್ತು ಹಾಕುವವರ ಮೇಲೆ ಪಾಲಿಕೆಯು ದಂಡಾಸ್ತ್ರವನ್ನೂ ಪ್ರಯೋಗಿಸುತ್ತಿದೆ. ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕೂಡ ಅಳವಡಿಸಿದೆ. ಈ ಪರಿಣಾಮ ‘ಕಸಾಸುರರ’ ಹಾವಳಿ ಕಡಿಮೆಯಾಗಿದೆ! ಇದು ಸರ್ವೇಕ್ಷಣೆಯಲ್ಲಿ ಉತ್ತಮ ಅಂಕ ತಂದುಕೊಡಲಿದೆ ಎಂದು ನಿರೀಕ್ಷೆಯನ್ನು ಅಧಿಕಾರಿಗಳು ಇಟ್ಟುಕೊಂಡಿದ್ದಾರೆ.

ಮುಂಚೆಯಿಂದಲೇ ಕ್ರಮ

‘ಈ ಬಾರಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಸ್ವಚ್ಛ ಸರ್ವೇಕ್ಷಣ್ ಜಾಗೃತಿಗಾಗಿ ರಾಯಭಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಸಾರ್ವಜನಿಕರ ಫೀಡ್ಬ್ಯಾಕ್ಗಾಗಿ ಆ್ಯಪ್ ಟೋಲ್ ಫ್ರೀ ನಂಬರ್ಗಳನ್ನು ಆರಂಭಿಸಲಾಯಿತು. ಇದರಿಂದಾಗಿ 12500 ಅಂಕಗಳಿಗೆ ಮೈಸೂರು ಉತ್ತಮ ಅಂಕಗಳನ್ನು ಗಳಿಸಿರುವ ನಿರೀಕ್ಷೆ ಇದೆ ಎಂದು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ತಿಳಿಸಿದರು. ರಾತ್ರಿ ಪಾಳಿಯಲ್ಲೂ ಸ್ವಚ್ಛತಾ ಕೆಲಸ ನಡೆಯುತ್ತಿದೆ. ಅತ್ಯಾಧುನಿಕ ಯಂತ್ರಗಳನ್ನೂ ಬಳಸುತ್ತಿದ್ದೇವೆ. ವಾಣಿಜ್ಯ ತ್ಯಾಜ್ಯ ವಿಲೇವಾರಿಗೂ ಕ್ರಮ ಕೈಗೊಳ್ಳಲಾಗಿದೆ. ‘ಸ್ವಚ್ಛತಾ ಚಾಂಪಿಯನ್’ಗಳನ್ನೂ ಗೌರವಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಕಂಡುಬಂದಿದ್ದ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಿದ್ದೇವೆ. ಆರಂಭದಿಂದಲೇ ಸಿದ್ಧತೆ ಮಾಡಿಕೊಂಡಿದ್ದರಿಂದ ಅನುಕೂಲ ಆಗಿದೆ. ಈ ಪರಿಣಾಮ ಪ್ರಶಸ್ತಿ ಹೊಸ್ತಿಲಲ್ಲಿ ನಿಂತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.