ಮೈಸೂರು: ಇಲ್ಲಿನ ಯುವ ಈಜುಪಟು ಎಸ್. ತಾನ್ಯಾ ಆಗಸ್ಟ್ನಲ್ಲಿ ಅಹಮದಾಬಾದ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಒಟ್ಟು ಐದು ವಿಭಾಗಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಅವರು ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ಜು.9ರಿಂದ 13ರವರೆಗೆ ನಡೆದ ರಾಜ್ಯ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಗ್ರೂಪ್–ಎ ವಿಭಾಗದಲ್ಲಿ ಎರಡು ರಾಜ್ಯ ಹಾಗೂ ಎರಡು ರಾಷ್ಟ್ರೀಯ ದಾಖಲೆ ಸಹಿತ ಐದು ಬಂಗಾರದ ಪದಕಗಳಿಗೆ ಕೊರಳೊಡ್ಡಿದರು.

ಅವರು 200 ಮೀ. ಬ್ರೆಸ್ಟ್ಸ್ಟ್ರೋಕ್ ಅನ್ನು 2 ನಿಮಿಷ, 40.26 ಸೆಕೆಂಡುಗಳಲ್ಲಿ ಹಾಗೂ 400 ಮೀಟರ್ ಮೆಡ್ಲೆ ಅನ್ನು 5 ನಿಮಿಷ, 11.49 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಕೂಟ ದಾಖಲೆಯೊಂದಿಗೆ ಬಂಗಾರ ಗೆದ್ದರು. 200 ಮೀ. ಮೆಡ್ಲೆ, 800 ಮೀ. ಫ್ರೀಸ್ಟೈಲ್ ಹಾಗೂ 1500 ಮೀ. ಫ್ರೀಸ್ಟೈಲ್ ಸ್ಪರ್ಧೆಗಳಲ್ಲೂ ಅಗ್ರ ಸ್ಥಾನ ತಮ್ಮದಾಗಿಸಿಕೊಂಡರು.

ಜೆ.ಪಿ. ನಗರದ ಎಸ್.ಪಿ. ಷಡಕ್ಷರಿ ಹಾಗೂ ಶ್ವೇತಾ ದಂಪತಿಯ ಪುತ್ರಿಯಾದ ತಾನ್ಯಾ ಜೈನ್ ದಿಇ ಸ್ಪೋರ್ಟ್ಸ್ ಸ್ಕೂಲ್ನಲ್ಲಿ ಪ್ರಥಮ ಪಿಯು ಓದುತ್ತಿದ್ದಾರೆ. ಜೈನ್ ಅಕಾಡೆಮಿ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ನಲ್ಲಿ ಗಗನ್ ಉಲ್ಲಾಳ್ಮಠ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.