ಮೈಸೂರು: ಸೂರ್ಯನ ಹೊಂಬಿಸಿಲಿಗೆ ಚಲಿಸುವ ಭಾವ ಹೊತ್ತ ಹಂಪಿಯ ಕಲ್ಲಿನ ರಥ, ಅಗಾಧವಾದ ಬಾದಾಮಿ ಗುಹೆಗಳ ಭವ್ಯ ರೂಪ, ಬೇಲೂರು ಹಳೆಬೀಡಿನ ದೇವಾಲಯಗಳ ಕೆತ್ತನೆಯ ಸೊಬಗು, ಶ್ರವಣಬೆಳಗೊಳದ ಗೊಮ್ಮಟನ ವೈರಾಗ್ಯ...

ಹೀಗೆ, ಕನ್ನಡ ನಾಡಿನ ಹತ್ತು ಹಲವು ದೇವಾಲಯಗಳ ಸೌಂದರ್ಯ ತೋರುವ ಛಾಯಾಚಿತ್ರಗಳು ಕಲಾಮಂದಿರದ ಸುಚಿತ್ರಾ ಗ್ಯಾಲರಿಯಲ್ಲಿ ಮಂಗಳವಾರ ಪ್ರದರ್ಶನಗೊಂಡವು.

ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ‘ಕರ್ನಾಟಕ ಪ್ರಾಚೀನ ದೇವಾಲಯಗಳು’ ಶೀರ್ಷಿಕೆಯಲ್ಲಿ ವಾರ್ತಾ ಇಲಾಖೆ ನಿವೃತ್ತ ಅಧಿಕಾರಿ ಟಿ. ಕೆಂಪಣ್ಣ ಸೆರೆಹಿಡಿದ ಚಿತ್ರಗಳ 3 ದಿನಗಳ ಪ್ರದರ್ಶನಕ್ಕೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಸ್ಸಂಜೆಯಲ್ಲಿ ಕಂಡ ಬೇಲೂರಿನ ಚೆನ್ನಕೇಶವ ದೇವಾಲಯ, ಸ್ವರ್ಣಕವಚ ಹೊದ್ದಂತೆ ಮಿನುಗುವ ಹಂಪಿಯ ವಿರೂಪಾಕ್ಷ ದೇವಾಲಯ, ನೆರಳು ಬೆಳಕಿನ ವೈಭವವನ್ನು ತೋರುವ ಗದಗದ ಡಂಬಳದ ದೊಡ್ಡಬಸಪ್ಪ ದೇವಾಲಯದ ಒಳಾಂಗಣ ಛಾಯಾಚಿತ್ರಗಳು ಜನರ ಮನಸೂರೆಗೊಳಿಸಿದವು.

ಪ್ರದರ್ಶನದಲ್ಲಿ 50 ಚಿತ್ರಗಳನ್ನು ಇರಿಸಲಾಗಿದ್ದು, ಟಿ.ಕೆಂಪಣ್ಣ ಅವರ 30 ವರ್ಷಗಳ ತಪಸ್ಸಿನ ಪರಿಶ್ರಮವು ಪ್ರತಿ ಛಾಯಾಚಿತ್ರಗಳಲ್ಲೂ ಕಂಡುಬರುತ್ತದೆ. ಕನ್ನಡ ನಾಡಿನ ವಾಸ್ತುಶಿಲ್ಪ, ಸಂಸ್ಕೃತಿ, ಇತಿಹಾಸವನ್ನು ಅರಿಯುವ ಬಯಕೆಯುಳ್ಳವರಿಗೆ ಒಂದು ಖಜಾನೆಯೇ ದೊರೆತಂತೆ ಭಾಸವಾಗಲಿದೆ. ಆಸಕ್ತ ನೋಡುಗನನ್ನು ಚಿತ್ರಗಳು ತನ್ನೆಡೆ ಸೆಳೆಯುವ ಪರಿ ಅನನ್ಯ.

ಸಂಕ್ರಾತಿ ಬೀರುವ ಬೆಳಕು: ‘ಜನವರಿಯಲ್ಲಿ ಸಂಕ್ರಾಂತಿ ಹಬ್ಬದ ಬಳಿಕ ಮಂಜು ಕಡಿಮೆಯಾಗಿ ಹೊಸ ಬೆಳಕು ಬೀರುತ್ತದೆ. ಆಗ ನವ ಮದುಮಕ್ಕಳಂತೆ ಕಂಗೊಳಿಸುವ ದೇವಾಲಯಗಳ ಚಿತ್ರವನ್ನು ಕಾದು ಸೆರೆ ಹಿಡಿಯಬೇಕು. ಅಕ್ಟೋಬರ್, ಜನವರಿ, ಫೆಬ್ರುವರಿ ತಿಂಗಳುಗಳು ಚಿತ್ರೀಕರಣಕ್ಕೆ ಸೂಕ್ತ ಅವಧಿ. ವರ್ಷಕ್ಕೆ 2ರಿಂದ 3 ಸ್ಥಳಗಳಿಗೆ ಭೇಟಿ ನೀಡುತ್ತಿದ್ದೆ, ಅವುಗಳ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ’ ಎನ್ನುತ್ತಾರೆ ಕೆಂಪಣ್ಣ.

‘ಕದಂಬರ ಕಾಲದಿಂದ ಚಿತ್ರದುರ್ಗದ ನಾಯಕರ ಕಾಲದ ದೇವಾಲಯಗಳ ಛಾಯಾಚಿತ್ರಗಳು ಪ್ರದರ್ಶನದಲ್ಲಿದೆ. ಸುಮಾರು 17ನೇ ಶತಮಾನದವರೆಗಿನ ವಾಸ್ತುಶಿಲ್ಪ ಅದ್ಭುತವನ್ನು ನೋಡಬಹುದು. ಈಗಾಗಲೇ ಬೆಂಗಳೂರು, ಶಿವಮೊಗ್ಗ, ತುಮಕೂರು, ದೊಡ್ಡಬಳ್ಳಾಪುರ ಸೇರಿದಂತೆ 9 ಕಡೆ ಪ್ರದರ್ಶನಗೊಂಡಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ವಿಡಿಯೊ ಶೋ ಮಾಡಲಾಗಿತ್ತು. ಜನರು ಬಹುವಾಗಿ ಮೆಚ್ಚಿದ್ದರು, ಬೆರಗುಗೊಂಡಿದ್ದರು’ ಎಂದು ಸಂತಸ ವ್ಯಕ್ತಪಡಿಸಿದರು.

‘ಬೆಳಕಿನ ಸದ್ಬಳಕೆಯೇ ಛಾಯಾಚಿತ್ರದ ಯಶಸ್ಸು’

‘ಕಲೆ ಮತ್ತು ಛಾಯಾಚಿತ್ರಗಳಲ್ಲಿ ಹೆಚ್ಚು ಭಿನ್ನತೆಯಿಲ್ಲ. ಎರಡರ ಯಶಸ್ಸಿನಲ್ಲೂ ಬೆಳಕಿನ ಸದ್ಬಳಕೆಯೇ ಪ್ರಮುಖ ಪಾತ್ರವಹಿಸುತ್ತದೆ’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸಂಪತ್ ಕುಮಾರ್ ತಿಳಿಸಿದರು. ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ‘ಛಾಯಾಗ್ರಹಣವು ಸಮಯವನ್ನು ಬೇಡುತ್ತದೆ. ಆ ಕ್ಷಣದ ತ್ವರಿತತೆಯೂ ಅಗತ್ಯ. ಇಲ್ಲಿ ಕಲೆ ಕಲ್ಪನೆಯೂ ನಿರ್ಮಾಣಗೊಳ್ಳುತ್ತದೆ’ ಎಂದು ವಿಶ್ಲೇಷಿಸಿದರು.

‘ಟಿ.ಕೆಂಪಣ್ಣ ಅವರ ಛಾಯಾಚಿತ್ರಗಳನ್ನು 3 ದಶಕಗಳಿಂದ ಗಮನಿಸುತ್ತಾ ಬಂದಿದ್ದೇನೆ. ಅವರ ಹಳ್ಳಿ ಜೀವನ ಕುರಿತ ಚಿತ್ರಗಳು ಅದ್ಭುತ. ಅಲ್ಲಿ ಮಣ್ಣಿನ ವಾಸನೆ ಜನಜೀವನ ಕಂಡು ಬರುತ್ತದೆ’ ಎಂದರು. ‘ಈಗ ಕದಂಬರು ಚಾಲುಕ್ಯರು ಹೊಯ್ಸಳರು ಇಲ್ಲ. ಆದರೆ ಅವರ ಕಾಲದ ದೇವಸ್ಥಾನಗಳಿವೆ. ಸ್ವಾತಂತ್ರ್ಯಾನಂತರ ಅಂಥ ದೇವಾಲಯಗಳನ್ನು ನಿರ್ಮಿಸಲಾಗಿಲ್ಲ. ಶಿಲ್ಪಕಾರರ ಪ್ರೋತ್ಸಾಹಿಸುವ ಕೆಲಸವೂ ಆಗಿಲ್ಲ. ಶಿಲ್ಪಕಲಾ ಅಕಾಡೆಮಿಯಿಂದ ಒಬ್ಬ ಛಾಯಾಚಿತ್ರಕಾರನಿಗೆ ವಾರ್ಷಿಕ ಪ್ರಶಸ್ತಿ ನೀಡಲಾಗುವುದು’ ಎಂದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮೈಸೂರು ಪಾಲಿಮರ್ಸ್ ಸಿಇಒ ಜಿ.ರಾಜಗೋಪಾಲಯ್ಯ ಮಾತನಾಡಿದರು. ಛಾಯಾಗ್ರಾಹಕರಾದ ಎಸ್.ರಾಮಪ್ರಸಾದ್ ಎಸ್.ಎಂ.ಜಂಬುಕೇಶ್ವರ ಪ್ರಗತಿ ಗೋಪಾಲಕೃಷ್ಣ ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ವೆಂಕಟರಾಮ್ ಕುಪ್ಯಾ ಪ್ರಾರ್ಥಿಸಿದರು. ಸಂಗೀತ ಗೀತಗಾಯನ ನಡೆಸಿಕೊಟ್ಟರು. ಸಿರಿಗಂಧ ಶ್ರೀನಿವಾಸಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.