ಸರಗೂರು: ಸ್ನೇಹಿತರೊಂದಿಗೆ ಕಬಿನಿ ಎಡದಂಡೆ ನಾಲೆಯಲ್ಲಿ ಈಜಲು ಹೋದ ತಾಲ್ಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳ ಗ್ರಾಮದ ಶಂಕರ್ ಎಂಬುವರ ಪುತ್ರ ವಿಶ್ವನಾಥ್(17) ಮೃತಪಟ್ಟಿರುವ ಘಟನೆ ನಡೆದಿದೆ.
ಈತ ಶನಿವಾರ ಕಾಲೇಜು ಹೋಗಿ ಬರುವುದಾಗಿ ಹೇಳಿ ಸ್ನೇಹಿತರೊಂದಿಗೆ ಸಮೀಪದ ನಿಲುವಾಗಿಲು ಬಳಿ ಇರುವ ಕಬಿನಿ ಎಡದಂಡೆ ನಾಲೆಯಲ್ಲಿ ಈಜಲು ತೆರಳಿದ್ದ. ಆ ವೇಳೆ ನಾಲೆಯಲ್ಲಿದ್ದ ಕಲ್ಲೊಂದು ವಿಶ್ವನಾಥ್ ತಲೆಗೆ ತಾಗಿ ತೀವ್ರವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ನಂದೀಶ್ ಕುಮಾರ್ ತಿಳಿಸಿದರು.