ಮೈಸೂರು (Mysuru) ಜಿಲ್ಲೆ ಎಚ್.ಡಿ.ಕೋಟೆಯ (HD Kote) ಅಭಯಾರಣ್ಯ ಪ್ರದೇಶದಲ್ಲಿರುವ ಸೇಬಿನಕೊಲ್ಲಿ (Sebinakolli) ಹಾಡಿಯ ಯುವತಿ ಈ ದಿವ್ಯಾ ಎಸ್.ಆರ್. (Divya SR). ‘ಪಣಿಯನ್’ (Paniyan) ಎಂಬ ಚಿಕ್ಕ ಬುಡಕಟ್ಟು ಸಮುದಾಯಕ್ಕೆ (Tribal Community) ಸೇರಿರುವ ದಿವ್ಯಾ, ಜೀತದ ನೆರಳಿನಲ್ಲಿ ಬದುಕಿದವರು. ಶಿಕ್ಷಣ (Education) ಎನ್ನುವುದು ಬದುಕಿನಲ್ಲಿ ಏನೆಲ್ಲ ಬದಲಾವಣೆಗಳನ್ನು ತರಬಹುದು, ಎಷ್ಟೊಂದು ಆತ್ಮವಿಶ್ವಾಸವನ್ನು ಕೊಡಬಲ್ಲದು ಎಂಬುದಕ್ಕೆ ಗಟ್ಟಿ ನಿದರ್ಶನ ಈ ದಿವ್ಯಾ. ಪ್ರಾಥಮಿಕ ಶಿಕ್ಷಣ ಪಡೆಯುವುದಕ್ಕೆ ಕಷ್ಟ ಇರುವ ಸಮುದಾಯದಲ್ಲಿ ಬೆಳೆದು ಪಿಎಚ್ಡಿ (PhD) ಮಾಡಿರುವ ದಿವ್ಯಾ, ಈಗ ರಾಯಚೂರು ವಿಶ್ವವಿದ್ಯಾಲಯದಲ್ಲಿ (Raichur University) ಅತಿಥಿ ಉಪನ್ಯಾಸಕಿಯಾಗಿ (Guest Lecturer) ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.