ಹಂಪಾಪುರ: ಸಮೀಪದ ಕೋಹಳ ಬಳಿ ಅರಣ್ಯ ಇಲಾಖೆಯು ಅಳವಡಿಸಲಾಗಿದ್ದ ಎರಡು ಟ್ರ್ಯಾಫಿಂಗ್ ಕ್ಯಾಮೆರಾಗಳು ಕಳುವಾಗಿದೆ.
‘ಸಮೀಪದ ಮಂಡನಹಳ್ಳಿ, ಹಾರೋಹಳ್ಳಿ ಮತ್ತು ಚಕ್ಕನಹಳ್ಳಿ ಗಸ್ತಿನಲ್ಲಿ ಹುಲಿ ಕಾಣಿಸಿದ್ದರಿಂದ ಅದರ ಚಲನವಲನಗಳ ಮೇಲೆ ನಿಗಾ ವಹಿಸಲು ವಿವಿಧೆಡೆ ಟ್ರ್ಯಾಫಿಂಗ್ ಕ್ಯಾಮೆರಾವನ್ನು ವಿವಿಧ ಕಡೆ ಅಳವಡಿಸಲಾಗಿತ್ತು. ಕೋಹಳದಲ್ಲೂ ಮೂರು ಟ್ರಾಫಿಂಗ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಎರಡು ಕ್ಯಾಮೆರಾಗಳು ಕಳ್ಳತನವಾಗಿವೆ’ ಎಂದು ಮಾದಳ್ಳಿ ವಲಯದ ಉಪ ವಲಯ ಅರಣ್ಯಾಧಿಕಾರಿ ಕೆ.ಎನ್. ಮೋಹನ್ ಕುಮಾರ್ ದೂರು ನೀಡಿದ್ದಾರೆ.
ಟ್ರ್ಯಾಫಿಂಗ್ ಕ್ಯಾಮೆರಾಗಳು ₹ 95 ಸಾವಿರ ಮೌಲ್ಯದ್ದು ಎಂದು ಅಂದಾಜಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಸಿಬ್ಬಂದಿ ತನಿಖೆ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.