ಮೈಸೂರು: ‘ವಚನ ಸಾಹಿತ್ಯವು ದೇಶ, ಭಾಷೆಯ ಗಡಿಯನ್ನು ಮೀರಿ ವ್ಯಾಪಿಸಿದ್ದು, ವಿಶ್ವ ಸಾಹಿತ್ಯವಾಗಿ ಗುರುತಿಸಿಕೊಂಡಿದೆ’ ಎಂದು ಪ್ರಾದ್ಯಾಪಕ ವಿಜಯ ಹನೂರ್ ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿರುವ ಮನೆ– ಮನೆಗೆ ಶರಣ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸತ್ಯ, ನಿಷ್ಠೆಯಿಂದ ಭಗವಂತನನ್ನು ಆರಾಧಿಸಿದರೆ ಫಲ ದೊರೆಯುತ್ತದೆ. ಅದಕ್ಕಾಗಿ ಆಡಂಬರದ ಅಗತ್ಯವಿಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಹಾಗೂ ತಪ್ಪನ್ನು ವಿರೋಧಿಸುವ ಮನಸ್ಥಿತಿ ಇಂದಿನ ಅಗತ್ಯತೆಯಾಗಿದೆ. ಈ ಬಗ್ಗೆ ಅನೇಕ ವಚನಗಳು ಸಾರಿ ಹೇಳಿದ್ದು, ಅವನ್ನು ಅನುಸರಿಸಬೇಕಿದೆ’ ಎಂದು ಸಲಹೆ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮ.ಗು.ಸದಾನಂದಯ್ಯ, ಆಶಾ ಬಸವರಾಜ್, ಮೀನಾ ಪ್ರಾಣೇಶ್, ಮಂಜುಳಾ, ರವಿ, ಚೇತನಾ, ಶಶಿಧರ್, ಚನ್ನಬಸಪ್ಪ, ದಿಲೀಪ, ವಿನಯ್, ಮಮತಾ, ರಾಜೇಶ್ವರಿ ಭಾಗವಹಿಸಿದ್ದರು.