ಮೈಸೂರು: ಕೊಲೆಯಾಗಿದ್ದರೆನ್ನಲಾದ ಮಹಿಳೆ ಮಲ್ಲಿಗೆ ಪ್ರಕರಣದಲ್ಲಿ ಪೊಲೀಸರು ಸಾಕ್ಷಿಯಾಗಿ ಉಲ್ಲೇಖಿಸಿದ್ದ ಮೃತದೇಹ ನಿಜವಾಗಿಯೂ ಮಹಿಳೆಯದ್ದೇ ಅಥವಾ ಇಲ್ಲ ಪುರುಷನದ್ದೇ?

ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ ವರದಿಗಳು ಈ ಪ್ರಶ್ನೆ ಮೂಡುವಂತೆ ಮಾಡಿವೆ.

ಬೆಟ್ಟದಪುರ ಹೋಬಳಿಯ ಶ್ಯಾನುಭೋಗನಹಳ್ಳಿಯಲ್ಲಿ ಸಿಕ್ಕಿದ್ದ ಮೃತದೇಹ ಮಲ್ಲಿಗೆಯವರದ್ದೇ ಎಂದು ಪೊಲೀಸರು ಬಿಂಬಿಸಿದ್ದರು. ಆದರೆ ಅವರೇ ತನಿಖೆಯ ಸಮಯದಲ್ಲಿ ಸಲ್ಲಿಸಿದ್ದ ವರದಿಯ ಎರಡು ಕಡೆ, ಅದು ಗಂಡಸಿನ ಮೃತದೇಹ ಎಂದು ಉಲ್ಲೇಖಿಸಲಾಗಿದೆ.

ಮೃತದೇಹ ದೊರಕಿದ್ದ ಜಮೀನಿನ ಮಾಲೀಕ ನಟೇಶ್ ಅವರ ಹೇಳಿಕೆ ಆಧರಿಸಿ, ಯುಡಿಆರ್ ನಂ– 33/2020 (ಅಸಹಜ ಸಾವು) ಪ್ರಕರಣ ದಾಖಲಿಸಲಾಗಿತ್ತು. ಅದರಲ್ಲಿ ‘ಅಪರಿಚಿತ ಮಹಿಳೆಯ ಶವವು ಸೀಗೆಮೆಳೆಯ ಒಳಗೆ ಬಿದ್ದಿದ್ದು, ಸಂಪೂರ್ಣ ಕೊಳೆತು ದುರ್ವಾಸನೆ ಬೀರುತ್ತಿತ್ತು’ ಎಂದು ಉಲ್ಲೇಖಿಸಲಾಗಿದೆ.

ಆದರೆ ಇದೇ ಪ್ರಕರಣದ ದಾಖಲೆಗಳನ್ನು ಎಫ್ಎಸ್ಎಲ್ಗೆ ಕೊಂಡೊಯ್ಯುವ ಕುರಿತು ಪೊಲೀಸ್ ಸಿಬ್ಬಂದಿ ತ್ರಿನೇಶ್ ಅವರಿಗೆ 2021ರ ಜನವರಿ 7ರಂದು ನೀಡಿದ ರಹದಾರಿ (ಪ್ರಕರಣದ ಕುರಿತ ದಾಖಲೆಗಳನ್ನು ತನಿಖೆಯ ಭಾಗವಾಗಿ ಮತ್ತೊಂದು ಕಚೇರಿಗೆ ತೆಗೆದುಕೊಂಡು ಹೋಗುತ್ತಿರುವ ದೃಢೀಕರಣ ಪತ್ರ)ಯಲ್ಲಿ ಮೃತರ ಹೆಸರನ್ನು ‘ಅಣ್ಣೇಗೌಡ’ ಎಂದು ನಮೂದಿಸಲಾಗಿದೆ!

ಪ್ರಕರಣಕ್ಕೆ ಸಂಬಂಧಿಸಿದ ಇತರೆ ವಸ್ತುಗಳನ್ನು ತಜ್ಞರಿಗೆ ಕಳಿಸುವ 2020ರ ನವೆಂಬರ್ 12ರಂದು ನೀಡಿದ ಸೂಚನಾ ಪತ್ರದಲ್ಲೂ ‘ಸತ್ತವರ ವಿವರ’ದಲ್ಲಿ ‘ಗಂಡಸು’ ಎಂದು ಬರೆಯಲಾಗಿದೆ. ಈ ಕುರಿತ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

‘ಶ್ಯಾನುಭೋಗನಹಳ್ಳಿಯಲ್ಲಿ ದೊರಕಿರುವುದು ಮಹಿಳೆಯ ಶವವಾಗಿದ್ದರೆ, ಎರಡು ದಾಖಲೆಗಳಲ್ಲಿ ಗಂಡಸು ಎಂದು ದಾಖಲಿಸಿರುವುದು ಯಾಕೆ? ಅಣ್ಣೇಗೌಡ ಎಂದರೆ ಯಾರು’ ಎಂಬುದು ಆರೋಪಿ ಪರ ವಕೀಲ ಪಾಂಡು ಪೂಜಾರಿ ಅವರ ಪ್ರಶ್ನೆ. ‘ಈ ಗೊಂದಲದ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾಗಿದೆ’ ಎಂದು ಅವರು ಹೇಳಿದರು.

ಖಾಲಿ ಹಾಳೆಗೆ ಸಹಿ ಆರೋಪ: ಜಮೀನಿನ ಮಾಲೀಕ ನಟೇಶ್ ನ್ಯಾಯಾಲಯದ ವಿಚಾರಣೆಯ ವೇಳೆ, ‘ಅಪರಿಚಿತ ಶವ ಪತ್ತೆಯಾಗಿರುವ ಬಗ್ಗೆ ನಾನು ದೂರು ನೀಡಿಲ್ಲ. ಪೊಲೀಸರು ಸಾಕ್ಷಿಗಾಗಿ ಖಾಲಿ ಹಾಳೆಗೆ ನನ್ನಿಂದ ಸಹಿ ಪಡೆದಿದ್ದರು. ವಾಸನೆ ಬರುತ್ತಿದ್ದ ಸ್ಥಳವನ್ನು ತೋರಿಸಿ ನಾನು ದನ ಮೇಯಿಸಲು ಹೋಗಿದ್ದೆ’ ಎಂದು ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.