ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‌ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್: ದಕ್ಷಿಣ ಕನ್ನಡ ಸ್ಪರ್ಧಿಗಳ ಮೇಲುಗೈ

Published 17 ಆಗಸ್ಟ್ 2024, 23:50 IST
Last Updated 17 ಆಗಸ್ಟ್ 2024, 23:50 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್‌ ಕಾಲೇಜು ಹಾಗೂ ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ಪರ್ಧಿಗಳು ಶನಿವಾರ ಇಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಾಬಲ್ಯ ಮೆರೆದರು.

ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್ ಸಂಸ್ಥೆ ಹಾಗೂ ಮೈಸೂರು ಜಿಲ್ಲಾ ವೇಟ್‌ಲಿಫ್ಟರ್ಸ್ ಸಂಸ್ಥೆ ಸಹಯೋಗದಲ್ಲಿ ಮಹಾಜನ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯ ಪುರುಷರ 55 ಕೆ.ಜಿ. ಒಳಗಿನವರ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಪ್ರಶಾಂತ್‌ ಸಿನ್ಹಾ ಚಿನ್ನ ಗೆದ್ದರು. ಒಟ್ಟು 223 ಕೆ.ಜಿ (97+126) ಭಾರ ಎತ್ತಿ ಈ ಸಾಧನೆ ಮಾಡಿದರು.

ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಸಂಜೀವಿ ಶೆಟ್ಟಿ ಕ್ಲಬ್‌ನ ಬಿ. ಲಕ್ಷ್ಮಿ ಒಟ್ಟು 156 ಕೆ.ಜಿ ( (71+85) ಭಾರ ಎತ್ತಿ ಬಂಗಾರ ತಮ್ಮದಾಗಿಸಿಕೊಂಡರು.

ದಿನದ ಫಲಿತಾಂಶ:
ಪುರುಷರು: 55 ಕೆ.ಜಿ. ವಿಭಾಗ: ಪ್ರಶಾಂತ್‌ ಸಿನ್ಹಾ (ಆಳ್ವಾಸ್‌ ಕಾಲೇಜು, ಒಟ್ಟು ಭಾರ: 223 ಕೆ.ಜಿ)–1, ಬಿ.ಆರ್‌. ಮನೋಜ್‌ (ಎಸ್‌ಡಿಎಂ, ಉಜಿರೆ)–2; 61 ಕೆ.ಜಿ. ವಿಭಾಗ: ಸುಬ್ರಹ್ಮಣ್ಯ (ಎಸ್‌ಡಿಎಂ, ಉಜಿರೆ, 240 ಕೆ.ಜಿ)–1, ಕೆ. ನಾಗರಾಜ್ (ಆಳ್ವಾಸ್‌)–2; 67 ಕೆ.ಜಿ. ವಿಭಾಗ: ಚಿರಂಜೀವಿ (ಆಳ್ವಾಸ್‌, 241 ಕೆ.ಜಿ)–1, ಕೆ.ಕವನ್‌ (ಎಸ್‌ಡಿಎಂ, ಉಜಿರೆ)–2, ದೇವೇಂದ್ರ (ಸಂಜೀವಿ ಶೆಟ್ಟಿ ಕ್ಲಬ್‌)–3.

ಜೂನಿಯರ್ ಬಾಲಕರು: 55 ಕೆ.ಜಿ: ಮೊಹಮ್ಮದ್ ಅಮೀರ್‌–1, 61 ಕೆ.ಜಿ. ವಿಭಾಗ: ವಿ. ಗಣೇಶ್‌ (ಸಿಎಂಸಿ ಜಿಮ್‌, ದಾವಣಗೆರೆ, 210 ಕೆ.ಜಿ)–1, ಮೊಹಮ್ಮದ್ ಮುನಾಫ್ ರೆಹಮಾನ್‌ (ಸೇಂಟ್ ಫಿಲೋಮಿನಾ, ಪುತ್ತೂರು)–2, ರಹಿಫಾನ್‌ (ಮಂಗಳಾ ಥ್ರೋವರ್ಸ್ ಅಕಾಡೆಮಿ)–3; 67 ಕೆ.ಜಿ. ಒಳಗಿನವರು: ದೇವೇಂದ್ರ (ಸಂಜೀವಿ ಶೆಟ್ಟಿ ಕ್ಲಬ್‌, 228 ಕೆ.ಜಿ)–1, ಕೆಂಚಪ್ಪ ಗಡ್ಡಿ (ಆಳ್ವಾಸ್‌)–2, ರಾಹುಲ್‌ ಶರ್ಮ (ಡಿಸಿಸಿ, ಮಂಗಳೂರು)–3.

ಯೂತ್‌ ಬಾಯ್ಸ್‌: 49 ಕೆ.ಜಿ ಒಳಗಿನವರು: ಬಿ. ಹೇಮಾದ್ರಿ (ಸಂಜೀವಿಶೆಟ್ಟಿ ಕ್ಲಬ್‌. 138 ಕೆ.ಜಿ), ಪ್ರಜ್ವಲ್‌ (ಮಂಗಳಾ ಅಕಾಡೆಮಿ)–2, ಅದಿತ್‌ ಪಟೇಲ್‌ (ಡಿವೈಇಎಸ್, ಬೆಳಗಾವಿ)–3; 55 ಕೆ.ಜಿ. ಒಳಗಿನವರು: ರೋಹಿತ್‌ ಕೆ.ಎಂ (ಡಿವೈಇಎಸ್‌, ಬೆಳಗಾವಿ. 135 ಕೆ.ಜಿ)–1, ಧೃವ ಭಂಡಾರಿ (ಸೇಂಟ್‌ ಫಿಲೋಮಿನಾ, ಪುತ್ತೂರು)–2; 61 ಕೆ.ಜಿ. ಒಳಗಿನವರು: ವಿ. ಗಣೇಶ್‌ (ಸಿಎಂಸಿ ಜಿಮ್‌, ದಾವಣಗೆರೆ. 210 ಕೆ.ಜಿ)–1, ಯಜತ್ (ಜೈನ್ ಕಾಲೇಜು)–2, ಆರ್‌.ಕೆ. ರಂಜನ್‌ (ಜೈನ್‌ ಕಾಲೇಜು)–3; 67 ಕೆ.ಜಿ. ವಿಭಾಗ: ಆರ್. ಶ್ರೀ ರಾಘ್ (ಡಿಸಿಎಂ ಮಂಗಳೂರು. 160 ಕೆ.ಜಿ)–1, ಕೆ.ಎ.ಮಂಜುನಾಥ್‌ (ಸಿಎಂಸಿ ಜಿಮ್, ದಾವಣಗೆರೆ)–2, ಎಂ. ದಿಶನ್ (ಸೇಂಟ್ ಫಿಲೋಮಿನಾ, ಪುತ್ತೂರು)–3.

ಮಹಿಳೆಯರು: 45 ಕೆ.ಜಿ. ಒಳಗಿನವರು: ಕೆ. ಸ್ಪಂದನಾ (ಸೇಂಟ್ ಫಿಲೋಮಿನಾ, ಪುತ್ತೂರು)–1, ಶ್ರಾವ್ಯ (ಆಳ್ವಾಸ್)–2, ಪಲ್ಲವಿ (ಡಿವೈಇಎಸ್, ಬೆಂಗಳೂರು)–3; 49 ಕೆ.ಜಿ. ಒಳಗಿನವರು: ಬಿ. ಲಕ್ಷ್ಮಿ (ಸಂಜೀವಿ ಶೆಟ್ಟಿ ಕ್ಲಬ್‌, ಬೆಂಗಳೂರು)–1, ಯಾಸ್ಮಿನ್‌ ಶೇಖ್‌ (ಆಳ್ವಾಸ್‌)–2, ಎಸ್‌.ಆರ್‌. ಅಮೃತಾ (ಎಸ್‌ಡಿಎಂ, ಉಜಿರೆ)–3.

ಜೂನಿಯರ್‌ ಬಾಲಕಿಯರು: 40 ಕೆ.ಜಿ. ಒಳಗಿನವರು: ಸಾನಿಕಾ (ಸುಧೀರ್ ಫಿಟ್ನೆಸ್‌ ಕೇಂದ್ರ. 87 ಕೆ.ಜಿ)–1, ಪಲ್ಲವಿ ( ಆಳ್ವಾಸ್‌)–2, ಅದಿತಿ ಪಾಟೀಲ (ಡಿವೈಇಎಸ್, ಬೆಳಗಾವಿ)–3: 45 ಕೆ.ಜಿ. ಒಳಗಿನವರು: ಸಂಜನಾ (ಆಳ್ವಾಸ್. 85 ಕೆ.ಜಿ)–1, ಸೈಶಾ ಗೊಂದಲ್ಕರ್ (ಡಿವೈಇಎಸ್, ಬೆಳಗಾವಿ)–2. 49 ಕೆ.ಜಿ. ಒಳಗಿನವರು: ಎಸ್‌.ಆರ್‌. ಅಮೃತಾ (ಎಸ್‌ಡಿಎಂ ಉಜಿರೆ, 90 ಕೆ.ಜಿ)–1, ವನಜಾಕ್ಷ್ಮಿ (ಆಳ್ವಾಸ್‌)–2, ಲಾವಣ್ಯ ಭಟ್‌ (ಮೈಸೂರು)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT