ಮೈಸೂರು: ‘ನೋಂದಾಯಿತ ಮತ್ತು ನೋಂದಾಯಿಸದ ಬೆಳೆಗಾರರ ಹೆಚ್ಚುವರಿ ಎಫ್ಸಿವಿ ತಂಬಾಕು ಬೆಳೆಯನ್ನು ತಂಬಾಕು ಮಂಡಳಿಯು ಅಧಿಕೃತಗೊಳಿಸಿದ ಹರಾಜು ವೇದಿಕೆಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

‘ಫ್ಲೂ ಕ್ಯೂರ್ಡ್ ವರ್ಜೀನಿಯಾ ತಂಬಾಕನ್ನು (ಎಫ್ಸಿವಿ) ಮಂಡಳಿಯ ಅಧಿಕೃತ ಹರಾಜು ವೇದಿಕೆಗಳಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ 1975ರ ತಂಬಾಕು ಮಂಡಳಿ ಕಾಯ್ದೆ ಅಡಿಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಸಡಿಲಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಬೆಳೆಗಾರರ ಅನುಕೂಲಕ್ಕಾಗಿ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟಿದ್ದೆ. ಅದಕ್ಕೆ ಸ್ಪಂದನೆ ದೊರೆತಿದೆ. 2025-26ನೇ ಸಾಲಿನಲ್ಲಿ ಉತ್ಪಾದಿಸಿದ ಎಫ್ಸಿವಿ ತಂಬಾಕಿಗೆ ಪ್ರತಿ ನೋಂದಾಯಿತ ಬೆಳೆಗಾರರು ಪ್ರತಿ ಕೆ.ಜಿಗೆ₹ 1 ಮತ್ತು ಮಾರಾಟದ ಆದಾಯದಲ್ಲಿ ಶೇ 5ರಷ್ಟು ಮೊತ್ತವನ್ನು ತಂಬಾಕು ನಿಧಿಗೆ ಕೊಡುಗೆ ನೀಡಬೇಕು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ’ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.