ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ‘ಶಿವನ ನೃತ್ಯ’ ಪ್ರದರ್ಶಿಸಿದರು
ನಟ ಯುವ ರಾಜಕುಮಾರ್ ಹಾಗೂ ನಟಿ ಅಮೃತಾ ಅಯ್ಯಂಗಾರ್ ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ಹೆಜ್ಜೆ ಹಾಕಿದ ಕ್ಷಣ
ನಲಿದ ಯುವ ಪ್ರೇಕ್ಷಕ ಸಮೂಹ
ಸಾಂಸ್ಕೃತಿಕ ವೈಭವ ಪರಿಸರ ಪ್ರೀತಿ
ಯುವಸಂಭ್ರಮದ ಮೊದಲ ದಿನ 25 ಕಾಲೇಜುಗಳ ತಂಡಗಳು ‘ದಸರಾ ವೈಭವ’ ‘ಕನ್ನಡ ಸಿನಿಮಾ’ ರೈತರು ಆದಿವಾಸಿಗಳ ಜೀವನ ಸಾಮಾಜಿಕ ನ್ಯಾಯ ಭಾರತದ ಸಂವಿಧಾನ ಶಿವ ನೃತ್ಯ ಜಾನಪದ ಅರ್ಜುನ ಆನೆ ಸೇರಿದಂತೆ ವಿವಿಧ ವಿಷಯಗಳನ್ನು ಆಧರಿಸಿದ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ತಂಡವು ‘ಸ್ವರ ಭಾರತಿ’ ನೃತ್ಯ ರೂಪಕ ಪ್ರದರ್ಶಿಸಿತು. ಸರಸ್ವತಿ ಲಕ್ಷ್ಮಿ ಹಾಗೂ ಪಾರ್ವತಿಯ ಕಥನ ಅಲ್ಲಿ ಅನಾವರಣಗೊಂಡಿತ್ತು. ಬೆಂಗಳೂರಿನ ಜಿ.ಸಿ.ಮ್ಯಾಟ್ ಗುಪ್ತ ಕಾಲೇಜು ತಂಡದವರು ‘ಆದಿವಾಸಿ ಜೀವನ’ ವೇದಿಕೆಯ ಮೇಲೆ ತಂದರು. ಅರಣ್ಯದಲ್ಲಿ ಆದಿವಾಸಿ ಹೋರಾಟ ಸಾರುವ ‘ಅಪೊಕ್ಯಾಲಿಪ್ಟೊ’ ಚಿತ್ರದ ‘ಜಾಗ್ವಾರ್ ಪಾ’ ಪಾತ್ರವು ಹೇಳುವ ‘ನಾನು ಜಾಗ್ವಾರ್ ಪಾ ಇದು ನನ್ನ ಕಾಡು ಯಾರಿಗೂ ಹೆದರುವುದಿಲ್ಲ’ ಎಂದು ಹೇಳಿದ ಕಲಾವಿದರು ತೈಕುಡಂ ಬ್ರಿಡ್ಜ್ ಬ್ಯಾಂಡ್‌ನ ‘ನವರಸಂ’ ‘ಕಾಂತಾರ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಮಹಾತ್ಮ ಗಾಂಧಿ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ‘ನಾಲ್ವಡಿ’ ವಾತ್ಸಲ್ಯ ಶಿಕ್ಷಣ ವಿದ್ಯಾಲಯದವರು ‘ಅಂಬೇಡ್ಕರ್’ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ‘ಶಿವ ನೃತ್ಯ’ ಮಾಡಿದರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ‘ದಸರಾ ವೈಭವ’ ಅನಾವರಣಗೊಳಿಸಿದರೆ ಛಾಯಾದೇವಿ ಕಾಲೇಜಿನವರು ‘ಗ್ಯಾರಂಟಿ ಯೋಜನೆಗಳ ಗೀತಗುಚ್ಛ’ ಅರ್ಪಿಸಿದರು. ಎಂಎಂಕೆ ಕಾಲೇಜು ತಂಡದ ಜಾನಪದ ವೈಭವ ಸಪ್ತಗಿರಿ ಕಾಲೇಜಿನ ‘ಅರ್ಜುನ ಆನೆ’ ಕಥನವು ಸೆಳೆಯಿತು.