ಮೈಸೂರು: `ಭಾರತ ಕೃಷಿ ಪ್ರಧಾನ ದೇಶವಾಗಿದೆ. ಆದರೆ ಕೃಷಿಗೆ ಸಂಬಂಧಿ ಸಿದಂತೆ ಇದುವರೆಗೂ ಪ್ರತ್ಯೇಕವಾದ ಚಾನೆಲ್ ಆರಂಭವಾಗಿಲ್ಲ~ ಎಂದು ಗ್ರೀನ್ಲೈಫ್ ಟೆಕ್ನಾಲಜಿಸ್ನ ಸಲಹೆಗಾರ ಡಾ.ವಸಂತಕುಮಾರ್ ಬುಧವಾರ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶ ನಿಕ ಸಮೂಹ ಹಾಗೂ ಶ್ರೀಜಯ ಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಸಂಯುಕ್ತ ವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ 3 ನೇ ವಿಜ್ಞಾನ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು.

`ಭಾರತದಲ್ಲಿ ಮನರಂಜನೆಗಾಗಿ ಹತ್ತಾರು ಚಾನೆಲ್ಗಳಿವೆ. ಮಕ್ಕಳು, ಮಹಿಳೆ, ಕ್ರೀಡೆ, ಪ್ರಾಣಿ ಪಕ್ಷಿಗಳು, ಹಾಸ್ಯ ಸೇರಿದಂತೆ ಭರಪೂರ ಮನರಂಜನಾ ಚಾನೆಲ್ಗಳಿವೆ. ಆದರೆ ಕೃಷಿಯನ್ನೇ ನಂಬಿ ಬದುಕುತ್ತಿರುವ ದೇಶದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಚಾನೆಲ್ ಇಲ್ಲದೇ ಇರುವುದು ವಿಷಾದನೀಯ. ದೃಶ್ಯ ಮಾಧ್ಯಮ ಶಕ್ತಿಶಾಲಿಯಾಗಿದೆ.

ಈ ಮಾಧ್ಯಮ ಮೂಲಕವೇ ರೈತರಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸಬೇಕು. ಕ್ರಿಮಿನಾಶಕ, ರಸಗೊಬ್ಬರ ಬಳಕೆಯನ್ನು ಮಿತಗೊಳಿಸುವುದು ಹಾಗೂ ಪರಿಸರ ಸ್ನೇಹಿ ಕೃಷಿಯನ್ನು ಕೈಗೊಳ್ಳಲು ಜಾಗೃತಿ ಮೂಡಿಸಬೇಕು~ ಎಂದು ಸಲಹೆ ನೀಡಿದರು.

`ದೂರದರ್ಶನ ಮತ್ತು ಮೊಬೈಲ್ ಫೋನ್ ಮೂಲಕ ತಂತ್ರಜ್ಞಾನ ಹಳ್ಳಿ ಹಳ್ಳಿಗಳನ್ನು ತಲುಪಿದೆ. ಈ ಮೂಲಕ ಖಾಸಗಿ ಕಂಪೆನಿಗಳು ಗ್ರಾಮೀಣ ಭಾರತದ ಮೇಲೆ ದಾಳಿ ಮಾಡಿವೆ. ಆದ್ದರಿಂದ ಮಾಹಿತಿ ಮತ್ತು ತಂತ್ರಜ್ಞಾನ ಕೂಡ ಹಳ್ಳಿಗಳನ್ನು ತಲುಪಬೇಕು~ ಎಂದು ಆಶಿಸಿದರು.

`ಬಿಟಿ ಹತ್ತಿ ಮತ್ತು ಬಿಟಿ ಬದನೆ ಬಗ್ಗೆ ಇನ್ನೂ ಗೊಂದಲ ಮುಂದುವ ರಿದಿದೆ. ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಬೋಧಿಸುವವರಿಗೇ ತಿಳಿವಳಿಕೆ ಇಲ್ಲ. ತಮ್ಮದೇ ಕಲ್ಪನೆಯನ್ನು ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ಅಂದಮೇಲೆ ಅನಕ್ಷರಸ್ಥ ರೈತರ ಸ್ಥಿತಿ ಹೇಗಿರಬೇಕು~ ಎಂದು ಪ್ರಶ್ನಿಸಿದರು.

`ಸರ್ಕಾರಗಳು ಸಾಲ ಮನ್ನಾ ಮತ್ತು ಸಬ್ಸಿಡಿ ಮೂಲಕ ರೈತರನ್ನು ಭಿಕ್ಷುಕರನ್ನಾಗಿ ಮಾಡುತ್ತಿವೆ. ರೈತರು ಆತ್ಮಗೌರವ ಹೊಂದಿರುವವರು. ಆದ್ದರಿಂದ ಅವರು ಸುಸ್ಥಿರಗೊಳ್ಳು ವಂತ ಯೋಜನೆಗಳನ್ನು ಕೊಡಬೇಕು. ಈ ಮೂಲಕ ದೇಶದ ಆಹಾರ ಭದ್ರತೆಗೆ ಮುಂದಾಗಬೇಕು~ ಎಂದ ಅವರು, `ರಾಜ್ಯದ ವಿಶ್ವವಿದ್ಯಾ ನಿಲಯಗಳಲ್ಲಿ ಕೃಷಿ ಸಂಬಂಧಿಸಿದ ಸಂಶೋಧನೆಗಳು ಹೆಚ್ಚಾಗಿ ನಡೆಯುತ್ತಿಲ್ಲ. ಸಂಶೋಧನಾ ಪ್ರಬಂಧಗಳು ಮತ್ತು ಪೇಟೆಂಟ್ಗಳು ಸ್ವಹಿತಾಸಕ್ತಿ ಕೇಂದ್ರಿತವಾಗಿರುತ್ತವೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಐದು ಪೇಟೆಂಟ್ಗಳಿವೆ. ಇವುಗಳು ಪ್ರದರ್ಶನಕ್ಕೆ ಎನ್ನುವಂತಿವೆ. ಇವುಗ ಳಿಂದ ರೈತರಿಗೆ ಯಾವುದೇ ಪ್ರಯೋಜ ನವಿಲ್ಲ~ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ ಹಿರಿಯ ಸದಸ್ಯ ಡಾ.ಎಸ್.ಜಿ.ಶ್ರೀಕಂಠೇಶ್ವರ ಸ್ವಾಮಿ ಸಮ್ಮೇಳನದ ಶಿಫಾರಸು ಗಳನ್ನು ವಾಚಿಸಿದರು. ಕೆಎಸ್ಸಿಎಸ್ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಂ.ಪೃಥ್ವಿರಾಜ್ ಅಧ್ಯಕ್ಷತೆ ವಹಿಸಿದ್ದರು. ಎಸ್ಜೆಸಿಇ ಪ್ರಾಂಶುಪಾಲ ಪ್ರೊ.ಬಿ.ಜಿ. ಸಂಗಮೇಶ್ವರ ಮಾತನಾಡಿದರು. ಉಪ ಪ್ರಾಂಶುಪಾಲ ಪ್ರೊ.ಶಕೀಬ್ ರೆಹಮಾನ್ ಸ್ವಾಗತಿಸಿದರು. ಪ್ರೊ.ಎನ್.ಹರಿಪ್ರಸಾದ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.