ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಮಾರ್ಗಕ್ಕೆ ಪಿಂಕ್ ಗ್ರಾನೈಟ್ ಬ್ಯಾರಿಕೇಟ್

Last Updated 18 ಜುಲೈ 2012, 4:50 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿ ಸಾಗುವ ರಾಜಮಾರ್ಗದ ಎರಡೂ ಬದಿಗಳಲ್ಲಿ ಗುಲಾಬಿ ಬಣ್ಣ (ಪಿಂಕ್)ದ ಗ್ರಾನೈಟ್‌ನ ಬ್ಯಾರಿಕೇಡ್‌ಗಳನ್ನೇ  ಹಾಕಬೇಕು ಎಂದು ಪಾಲಿಕೆಯ ಕೌನ್ಸಿಲ್ ಸಭೆ ಮಂಗಳವಾರ ನಿರ್ಣಯ ತೆಗೆದುಕೊಂಡಿತು.

ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮ.ವಿ.ರಾಮಪ್ರಸಾದ್ ವಿಷಯ  ಪ್ರಸ್ತಾಪಿಸಿ `ರಾಜಮಾರ್ಗದಲ್ಲಿ ಪಿಂಕ್ ಗ್ರಾನೈಟ್ ಬದಲಿಗೆ ಸಾದರಹಳ್ಳಿಯ ಬಿಳಿ ಕಲ್ಲನ್ನು ಬಳಸಲಾಗುತ್ತಿದೆ. ಇದು ನಗರದ ಪರಂಪರೆ, ಸೌಂದರ್ಯಕ್ಕೆ ಧಕ್ಕೆ ತರಲಿದೆ. ಬಿಳಿ ಕಲ್ಲಿಗೆ ಮೀಟರ್‌ವೊಂದಕ್ಕೆ 8 ಸಾವಿರ ನಿಗದಿ ಪಡಿಸಲಾಗಿತ್ತು. ಪಿಂಕ್ ಗ್ರಾನೈಟ್‌ಗೆ ರೂ.33,500 ನಿಗದಿಪಡಿಸ ಲಾಗಿದೆ. ಆದ್ದರಿಂದ ಬಿಳಿ ಕಲ್ಲು ಬದಲು ಪಿಂಕ್ ಗ್ರಾನೈಟ್ ಬಳಸಲು ಸೂಚಿಸಬೇಕು~ ಎಂದರು.

ಸದಸ್ಯ ಶಿವಕುಮಾರ್ ಮಾತನಾಡಿ, `ಪಿಂಕ್ ಗ್ರಾನೈಟ್ ಬದಲು ಬಿಳಿ ಕಲ್ಲು ಏಕೆ ಆಯಿತು~ ಎಂದು ಪ್ರಶ್ನಿಸಿದರು. ಆಡಳಿತ ಪಕ್ಷದ ನಾಯಕ ಸೋಮಸುಂದರ್ ಮಾತನಾಡಿ, `ಇದು ಸರಿಯಲ್ಲ. ಟೆಂಡರ್‌ನಲ್ಲಿ ಇರುವುದೇ ಒಂದು, ಈಗ ಆಗುತ್ತಿರುವುದೇ ಬೇರೆ. ಆದ್ದರಿಂದ ಕೆಲಸವನ್ನು ಸ್ಥಗಿತಗೊಳಿಸಿ~ ಎಂದರು.

ಸಂದೇಶ್‌ಸ್ವಾಮಿ ಮಾತನಾಡಿ, `8 ಸಾವಿರ ದಿಂದ 33,500 ರೂಪಾಯಿಗೆ ಬದಲಾಗಿ ರುವುದು ಹಗಲು ದರೋಡೆಯಾಗಿದೆ. ಮೈಸೂರು ಪರಂಪರೆಗೆ ಹೊಂದಾಣಿಕೆ ಯಾಗು ವುದಿಲ್ಲ ಎನ್ನುವ ಕಾರಣಕ್ಕೆ ಬಿಳಿ ಕಲ್ಲು ಬದಲು ಪಿಂಕ್ ಗ್ರಾನೈಟ್ ಅನ್ನು ಬ್ಯಾರಿಕೇಡ್‌ಗೆ ಬಳಸು ವಂತೆ ಹಿಂದಿನ ಆಯುಕ್ತ ಕೆ.ಎಸ್. ರಾಯ್ಕರ್ ಒಪ್ಪಿಗೆ ಸೂಚಿಸಿದ್ದಾರೆ. ಆದರೆ 15 ದಿನಗಳಿಂದ ಮತ್ತೆ ಬಿಳಿ ಕಲ್ಲು ಬಳಸಲಾಗುತ್ತಿದೆ.  ಗುತ್ತಿಗೆ ದಾರ ಕೆಳಹಂತದ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಹಣಕ್ಕಾಗಿ ಕಿರುಕುಳ ಕೊಡು ತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಯಾರು ಎಂಬುದು ಗೊತ್ತಾಗಬೇಕು~ ಎಂದರು.

`ಜು.18ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜಮಾರ್ಗ ಕಾಮಗಾರಿ ಕುರಿತು ಭೆ ನಡೆಯಲಿದೆ. ಅಲ್ಲಿ ಚರ್ಚೆ ನಡೆಯಲಿದೆ~ ಎಂದು ಪಾಲಿಕೆ ಎಂಜಿನಿಯರ್ ಪದ್ಮನಾಭ್ ಹೇಳಿದರು.

ಪಿಂಕ್ ಗ್ರಾನೈಟ್ ಬಳಸಿ ಬ್ಯಾರಿಕೇಡ್‌ನಿರ್ಮಾ ಣಕ್ಕೆ ಸದಸ್ಯ ಶ್ರೀಕಂಠಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT