ಸೋಮವಾರ, ಸೆಪ್ಟೆಂಬರ್ 27, 2021
24 °C

ಬಸವ ಬಲ–ತೋಳ್ಬಲದಿಂದ ಬದುಕು ಸಾಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಯದಲ್ಲಿ ಕಳವಳವಿಲ್ಲ. ಪ್ರಾಣದಲ್ಲಿ ಮಾಯೆಯಿಲ್ಲ. ಭಾವದಲ್ಲಿ ಅದ್ಬುತವಾದವಳು ಅಕ್ಕಮಹಾದೇವಿ. ನಿಜದ ನೆಲೆಯ ಮೇಲೆ ನಿಂತು ಸುಖದ ಸವಿ ಅನುಭವಿಸಿದ ಮಹಾಶರಣೆ ಅಕ್ಕ. ಅನುಭವ ಮಂಟಪಕ್ಕೆ ಮಹಾದೇವಿಯನ್ನು ಬರಮಾಡಿಕೊಳ್ಳಲು ಮಡಿವಾಳ ಮಾಚಿದೇವ ಮಡಿ ಬಟ್ಟೆ ಹಾಕಿ ಸ್ವಾಗತಿಸಿದನು. ಶರಣರಿಗೆ ಅಕ್ಕಮಹಾದೇವಿಯನ್ನು ನೋಡುವ ಭಾಗ್ಯ ದೊರೆಯಿತು. ನಿನ್ನ ಪತಿಯ ಕುರುಹು ಹೇಳು ಇಲ್ಲದಿದ್ದರೆ ತೊಲಗು ಎಂದರು ಅಲ್ಲಮಪ್ರಭು. ಅದನ್ನು ಅರಿಯುವ ಪ್ರಯತ್ನದಲ್ಲಿರುವೆ ಎಂದಳು ಅಕ್ಕಮಹಾದೇವಿ. ಲೌಕಿಕನನ್ನು ನಾನು ಮದುವೆಯಾಗಿಲ್ಲ. ಹರನೇ ಗಂಡನಾಗಬೇಕೆಂದು ಬಯಸಿದವಳು ನಾನು. ಜಗದ ಗಂಡ ಮಲ್ಲಿಕಾರ್ಜುನನೇ ಎನ್ನ ಗಂಡ ನೋಡಾ ಎಂದು ಉತ್ತರಿಸಿದರು ಅಕ್ಕಮಹಾದೇವಿ.

ಅಂತರಂಗದಲ್ಲಿ ಪಕ್ವತೆಯಾಗುವುದರ ಜತೆಗೆ ಬಹಿರಂಗದಲ್ಲಿ ಶುದ್ಧತೆಯಾಗಿರಬೇಕು. ಶರಣರು ಅನುಭಾವ ಪ್ರಮಾಣ ತರಲು ಪ್ರಯತ್ನಿಸಿದರು. ಜಗತ್ತು ಮಿಥ್ಯ ಅಲ್ಲ ಇದು ಕರ್ತಾರನ ಕಮ್ಮಟ ಎಂದು ಹೇಳಿದ್ದಾರೆ.
ಇದು ಮಾಯಾ ಪ್ರಪಂಚವಲ್ಲ. ಮರಣ ಸಿದ್ಧಾಂತವಲ್ಲ. ಜೀವ ಸಿದ್ಧಾಂತವಾಗಿದೆ ಶರಣ ಸಿದ್ಧಾಂತ.

ಜಗತ್ತು ಅವಿನಾಭಾವ ಸಂಬಂಧ ಹೊಂದಿದೆ. ಜಗತ್ತಿನಲ್ಲಿ ಬಸವಣ್ಣನ ನಂತರ ಬಸವಣ್ಣನಂತಹ ಮಹಾತ್ಮ ಇನ್ನೂ ಹುಟ್ಟಿಲ್ಲ. ಪ್ರಯುತ್ನ ವಾದದಲ್ಲಿ ಗೆಲ್ಲಬೇಕು. ಜೀವಾತ್ಮ, ಪರಮಾತ್ಮನನ್ನು ಕೂಡಿಕೊಂಡಿರುವುದೇ ಶರಣ ಧರ್ಮ. ಇದು ಭ್ರಮಾ ಲೋಕವಲ್ಲ. ಮನೆಯನ್ನು ಗೆಲ್ಲಬೇಕು. ಸಮಾಜವನ್ನು ಗೆಲ್ಲಬೇಕು. ಸತ್ಯವನ್ನು ಹೇಳಿ ಬದುಕಬೇಕು. ಬಸವಣ್ಣ ಏಕದೇವೋಪಾಸನೆ ಸಾರಿದರು. ಇಂದ್ರ ಬಲ, ಚಂದ್ರ ಬಲ, ತಾರಾ ಬಲದಿಂದ ಬದುಕದೇ ಬಸವ ಬಲ, ತೋಳ್ಬಲದಿಂದ ಬದುಕಬೇಕು.

ನಮಗೆ ನಾಲಿಗೆ ಕೊಟ್ಟಿರುವುದು ಪರಮಾತ್ಮನನ್ನು ಸ್ತುತಿಸಲಿಕ್ಕೆ ಹೊರತು ಇನ್ನೊಬ್ಬರನ್ನು ಆಡಿಕೊಳ್ಳುವುದಕ್ಕಲ್ಲ. ಇನ್ನೊಬ್ಬರೊಂದಿಗೆ ಪ್ರೀತಿಯಿಂದ ಮಾತನಾಡಲಿಕ್ಕಿದೆ. ಜ್ಞಾನದ ಜತೆ ಸಾಧನೆ ಇರಬೇಕು. ಜೀವನವನ್ನು ಆನಂದವಾಗಿ ಅನುಭವಿಸಬೇಕು.

ಸಂಗ್ರಹ: ಪ್ರಕಾಶ ಎನ್‌.ಮಸಬಿನಾಳ

ಬಸವನಬಾಗೇವಾಡಿಯಲ್ಲಿ ನಡೆಯುತ್ತಿರುವ ಪ್ರವಚನ ಸಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು